ಬೀದಿ ನಾಯಿಗಳ ಆಹಾರದ ಹಕ್ಕಿನ ಕುರಿತ ದೆಹಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ [ಚುಟುಕು]

Stray dog

Stray dog

Published on

ಬೀದಿ ನಾಯಿಗಳಿಗೆ ಆಹಾರದ ಹಕ್ಕಿದೆ ಎಂದು ತಿಳಿಸಿ ಅವುಗಳ ಕಲ್ಯಾಣಕ್ಕಾಗಿ ನಿರ್ದೇಶನ ನೀಡಿದ್ದ ದೆಹಲಿ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂಕೋರ್ಟ್‌ ಇತ್ತೀಚೆಗೆ ತಡೆ ನೀಡಿದೆ. ಬೀದಿನಾಯಿಗಳಿಗೆ ಆಹಾರ ಮತ್ತು ನೀರು ದೊರೆಯುವಂತೆ ನೋಡಿಕೊಳ್ಳುವುದು ಬಡಾವಣೆ ನಿವಾಸಿಗಳ ಕಲ್ಯಾಣ ಸಂಘಗಳ ಕರ್ತವ್ಯ ಎಂದು ಕಳೆದ ಜುಲೈನಲ್ಲಿ ಹೈಕೋರ್ಟ್‌ ನೀಡಿದ್ದ ತೀರ್ಪಿಗೆ ನ್ಯಾಯಮೂರ್ತಿ ವಿನೀತ್ ಸರಣ್ ಮತ್ತು ನ್ಯಾಯಮೂರ್ತಿ ಅನಿರುದ್ಧ ಬೋಸ್ ಅವರ ವಿಭಾಗೀಯ ಪೀಠ ತಡೆ ನೀಡಿತು. "ವಿಶೇಷ ಅನುಮತಿ ಅರ್ಜಿ ಸಲ್ಲಿಸಲು ಒಪ್ಪಿಗೆ ನೀಡಲಾಗಿದೆ. ಆರು ವಾರಗಳಲ್ಲಿ ನೋಟಿಸ್‌ಗೆ ಪ್ರತಿಕ್ರಿಯೆ ನೀಡಬೇಕು. ಈ ಅವಧಿಯಲ್ಲಿ ತಡೆ ನೀಡಲಾದ ಆದೇಶವನ್ನು ಜಾರಿಗೆ ತರುವಂತಿಲ್ಲ" ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Kannada Bar & Bench
kannada.barandbench.com