ರಾಜ್ಯದ ವಿವಿಧ ಭಾಗಗಳ 97 ವಕೀಲರು ಕರ್ನಾಟಕ ಹೈಕೋರ್ಟ್‌ನಲ್ಲಿ ಹಿರಿಯ ವಕೀಲರ ಪದನಾಮ ಅರ್ಜಿ/ ಲಿಖಿತ ಪ್ರಸಾವ ಸಲ್ಲಿಕೆ ಮಾಡಿದ್ದು, ನವೆಂಬರ್ 28ರ ಒಳಗೆ ಸಂಬಂಧಪಟ್ಟವರು ಸಲಹೆ ಅಥವಾ ಅಭಿಪ್ರಾಯ ಸಲ್ಲಿಸಬಹುದು ಎಂದು ಹೈಕೋರ್ಟ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ಹೈಕೋರ್ಟ್ (ಹಿರಿಯ ವಕೀಲರ ಪದನಾಮ) ನಿಯಮಗಳ ಅಡಿ ನಿಯಮ 6 ಉಪ ನಿಯಮ 3ರ ಮತ್ತು ತಿದ್ದುಪಡಿ ನಿಯಮಗಳು 2024ರ ಪ್ರಕಾರ ಪ್ರಸ್ತಾವಿತ ಪದನಾಮಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟವರು ಹೈಕೋರ್ಟ್‌ನ ಶಾಶ್ವತ ಸೆಕ್ರೆಟರಿಯೇಟ್ ವಿಭಾಗದ ರಿಜಿಸ್ಟ್ರಾರ್‌ಗೆ (ನೇಮಕಾತಿ) ಅಭಿಪ್ರಾಯ/ಸಲಹೆಗಳನ್ನು ಸಲ್ಲಿಸಬಹುದು ಎಂದು ರಿಜಿಸ್ಟ್ರಾರ್ ಜನರಲ್ ಕೆ ಎಸ್ ಭರತ್ ಕುಮಾರ್ ತಿಳಿಸಿದ್ದಾರೆ.
ಎಲ್ಲಾ 98 ವಕೀಲರ ಅರ್ಜಿ/ ಲಿಖಿತ ಪ್ರಸ್ತಾವಗಳನ್ನು ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಹಿರಿಯ ವಕೀಲರ ಪದನಾಮಕ್ಕೆ ಅರ್ಜಿ/ಲಿಖಿತ ಪ್ರಸಾವ ಸಲ್ಲಿಸಿರುವವರು:
ಜಗದೀಶ್ ಬಾಳಿಗಾ ಎನ್, ಮೃತ್ಯುಂಜಯ ತಾತಾ ಬಂಗಿ, ಜೆ ಪ್ರದೀಪ್ ಕುಮಾರ್, ಎಸ್ ಆರ್ ಕಮಲಾಚರಣ್, ಮೊಹಮ್ಮದ್ ನಾಸಿರುದ್ದೀನ್, ಶ್ರೇಯಸ್ ಜಯಸಿಂಹ, ಎಸ್ ಎಸ್ ಮಹೇಂದ್ರ, ಡಿ ಅಶ್ವತ್ಥಪ್ಪ, ಡಿ ಕೃಷ್ಣಮೂರ್ತಿ, ಕೆ ಕೇಶವ ಭಟ್, ಉದಯಪ್ರಕಾಶ್ ಮುಳಿಯಾ, ಎ ನಾಗರಾಜಪ್ಪ, ಸಂಕೇತ್ ಎಂ ಏಣಗಿ, ಡಿ ರವಿಕುಮಾರ್ ಗೋಕಾಕಕರ್, ಗುರುರಾಜ ಜೋಶಿ, ಶ್ರೀಧರ್ ಪ್ರಭು, ರವೀಂದ್ರ ಗಜನಾನ ಕೊಳ್ಳೆ, ಬಸಪ್ಪ ಶಿವಪ್ಪ ಕಾಮಟೆ, ಎಂ ಜಗನ್ನಾಥ್ ಆಳ್ವಾ (ಎಂ ಜೆ ಆಳ್ವಾ), ಆರ್ ನಾಗೇಂದ್ರ ನಾಯಕ್, ಜೀವನ್‌ಬಾಬು ಜೆ ನೀರಲಗಿ, ಪ್ರತಿಮಾ ಹೊನ್ನಾಪುರ, ಮೃತ್ಯುಂಜಯ ಬಸವರಾಜ ಕಣವಿ.
ಶರವಂತ್ ಆರ್ಯಯ ತಂಡ್ರಾ, ವಿ ಎಸ್ ಪ್ರಸಾದ್, ಪ್ರಕಾಶ್ ಟಿ ಹೆಬ್ಬಾರ್, ಟಿ ರಾಜರಾಮ್, ಅಮರೇಶ್ ಎಸ್ ರೋಜ, ಪ್ರದೀಪ್ ಎಸ್ ಸಾವ್ಕಾರ್, ಶೈಲೇಶ್ ಎಸ್ ಕೆ, ವಿ ಜಿ ಭಾನುಪ್ರಕಾಶ್, ಬಿಪಿನ್ ಹೆಗ್ಡೆ, ಡಾ. ಎಂ ಸುನಿಲ್ ಶಾಸ್ತ್ರಿ, ಅಜೇಶ್ ಕುಮಾರ್ ಶಂಕರ್, ಸಾಜಿ ಪಿ ಜಾನ್, ಬಿ ಎ ಬೆಳ್ಳಿಯಪ್ಪ, ವೈಶಾಲಿ ಹೆಗ್ಡೆ, ಎಸ್ ಶಂಕರಪ್ಪ, ಪಿ ಎನ್ ಮನಮೋಹನ್, ಹಾಲೇಶ್ ಆರ್ ಜಿ, ಎಸ್ ನಾಗರಾಜ್ (ಪ್ರೊ. ಡಾ. ಎಸ್ ನಾಗರಾಜ್), ಎನ್ ಡಿ ಬ್ರಹ್ಮ ರಾಜು (ಎನ್‌ಡಿಬಿ ರಾಜು), ಗೌತಮ್ ಶ್ರೀಧರ್ ಭಾರದ್ವಾಜ್, ಎ ಎನ್ ಗಂಗಾಧರಯ್ಯ, ವಿ ಎಸ್ ಹೆಗ್ಡೆ, ಬಿ ಆರ್ ದೀಪಕ್, ಎಚ್ ಪಿ ಲೀಲಾಧರ್, ಎಸ್ ಮಹೇಶ್, ತಾಜುದ್ದೀನ್, ಎಕ್ಸ್ ಎಂ ಜೋಸೆಫ್ (ಕ್ಸೇವಿಯರ್ ಮರಿಯಾ ಜೋಸೆಫ್), ಪಿ ಕೆ ಶ್ರೀಕಾರ, ಮಧುಕರ್ ಎಂ. ದೇಶಪಾಂಡೆ, ಬಿ ಪರಸ್ಮಾಲ್ ಅಲಿಯಾಸ್ ಪರಸ್ ಜೈನ್, ಕೆ ಕಲ್ಯಾಣ್ ಬಸವರಾಜ್, ಜಿ ಶ್ರೀಧರ್, ಆರ್ ಸುಬ್ರಮಣ್ಯ.
ಎ ಮುರಳಿ, ವಿದ್ಯಾವತಿ ಎಂ. ಕೊಟ್ಟೂರಶೆಟ್ಟರ್, ಗಣಪತಿ ನಾರಾಯಣ ಭಟ್ (ವಜ್ರಾಲಿ), ಕೆ ಎಸ್ ನವೀನ್ ಕುಮಾರ್, ವೈ ಹರಿಪ್ರಸಾದ್, ವಿವೇಕ್ ಹೊಳ್ಳ, ಬಿ ಜಿ ಚಿದಾನಂದ ಅರಸ್, ಸೊಹಾನಿ ಹೊಳ್ಳ, ವೀರಣ್ಣ ಗದಿಗೆಪ್ಪ ತಿಗಡಿ, ಶ್ವೇತಾ ಆನಂದ್, ಅಜಯ್ ಜೆ ನಂದಾಲಿಕೆ, ಮನು ಪ್ರಭಾಕರ್ ಕುಲಕರ್ಣಿ, ಎಂ ಆರ್ ಚಿನ್ನಾಸ್ವಾಮಿ ಮನೋಹರ್ (ಎಂಆರೆಸಿ ಮನೋಹರ್), ರಹಮತುಲ್ಲಾ ಕೊತ್ವಾಲ್, ಎಸ್ ವಿವೇಕಾನಂದ, ಕೆ ರಮಾ ಭಟ್, ಮಿಥುನ್ ಜಿ ಎ (ಮಿಥುನ್ ಗೀರಹಳ್ಳಿ ಅಶ್ವತ್ಥನಾರಾಯಣ), ಎಂ ಎಚ್ ಹಿದಾಯತುಲ್ಲಾ.
ಎ ಅಭಿನವ್ ರಮಾನಂದ್, ಲಕಂಪುರಮಠ ಚಿದಾನಂದಯ್ಯ, ವೆಂಕಟೇಶ್ ಎಸ್ ಅರಬಟ್ಟಿ, ಎ ರವಿಶಂಕರ್, ಎಂ ಪಿ ಶ್ರೀಕಾಂತ್, ಜಿ ಮಲ್ಲಿಕಾರ್ಜುನಪ್ಪ, ಎಂ ವಿನೋದ್ ಕುಮಾರ್, ಸಿ ಎಸ್ ಪ್ರದೀಪ್, ಸಂತೋಷ್ ಎಸ್ ಗೋಗಿ, ಜಿ ಬಾಲಕೃಷ್ಣ ಶಾಸ್ತ್ರಿ, ಪಿ ಎನ್ ರಾಜೇಶ್ವರ, ಜುಲ್ಫಿಕರ್ ಕುಮಾರ್ ಶಾಫಿ, ಸಂದೀಪ್ ಎಸ್ ಪಾಟೀಲ್, ಶೇಖ್ ಸೂದ್, ಟಿ ಶೇಷಗಿರಿ ರಾವ್, ಕೆ ಬಿ ಎಸ್ ಮಣಿಯನ್, ಎಂ ವಿ ವಿ ರಮಣ, ಮಲ್ಹಾರ ರಾವ್ ಕೆ., ನಿತ್ಯಾನಂದ ವಿ ನಾಯಕ್, ನೂರುದ್ದೀನ್ ಖೆಟ್ಟಿ, ಎಸ್ ರಾಜಶೇಖರ್, ಕೆ ಹನುಮಂತರಾಯಪ್ಪ.