ಸುಪ್ರೀಂ ಕೋರ್ಟ್‌ ವಜ್ರಮಹೋತ್ಸವ: ಪ್ರಧಾನಿ ಮೋದಿ ಉಪಸ್ಥಿತಿ; ನೂತನ ಜಾಲತಾಣದ ಲೋಕಾರ್ಪಣೆ

ಸಿಜೆಐ ಚಂದ್ರಚೂಡ್ ಅವರ ನಿರ್ದೇಶನದಂತೆ ಸುಪ್ರೀಂ ಕೋರ್ಟ್‌ ಕೈಗೆತ್ತಿಕೊಂಡ ವಿವಿಧ ಡಿಜಿಟಲ್‌ ಯೋಜನೆಗಳನ್ನು ಸಮಾರಂಭದಲ್ಲಿ ಪ್ರದರ್ಶಿಸಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಜೆಐ ಡಿ ವೈ ಚಂದ್ರಚೂಡ್
ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಜೆಐ ಡಿ ವೈ ಚಂದ್ರಚೂಡ್

ಸುಪ್ರೀಂ ಕೋರ್ಟ್‌ ಅಸ್ತಿತ್ವಕ್ಕೆ ಬಂದು 75 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ನವದೆಹಲಿಯ ಸರ್ವೋಚ್ಚ ನ್ಯಾಯಾಲಯದ ಅಂಗಳದಲ್ಲಿ ಜನವರಿ 28ರಂದು ಭಾನುವಾರ ವಜ್ರ ಮಹೋತ್ಸವ ಸಮಾರಂಭ ನಡೆಯಲಿದೆ.

ಅಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಲಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರು ಭಾಷಣ ಮಾಡಲಿದ್ದಾರೆ.

ಸಿಜೆಐ ಅವರ ನಿರ್ದೇಶನದಂತೆ ಸುಪ್ರೀಂ ಕೋರ್ಟ್‌ ಕೈಗೆತ್ತಿಕೊಂಡಿರುವ ವಿವಿಧ ಡಿಜಿಟಲ್‌ ಯೋಜನೆಗಳು ಸಮಾರಂಭದಲ್ಲಿ ಪ್ರದರ್ಶನಗೊಳ್ಳಲಿವೆ. ಸರ್ವೋಚ್ಚ ನ್ಯಾಯಾಲಯದ ನೂತನ ಜಾಲತಾಣ ಕೂಡ ನಾಳೆ ಲೋಕಾರ್ಪಣೆಗೊಳ್ಳಲಿದೆ.

Kannada Bar & Bench
kannada.barandbench.com