'ಜಾಮೀನಿಗೆ ಸಂಬಂಧಿಸಿದಂತೆ ಹೊಸ ಕಾನೂನು ರೂಪಿಸಲಾಗುತ್ತಿದೆಯೇ?' ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್

ಬಂಧನ ಮತ್ತು ಕ್ರಿಮಿನಲ್ ವಿಚಾರಣೆಗಳ ವಿಷಯದಲ್ಲಿ ಸಿಆರ್‌ಪಿಸಿ ಪಾಲನೆ ಖಚಿತಪಡಿಸಿಕೊಳ್ಳಲು ಹಲವಾರು ನಿರ್ದೇಶನಗಳನ್ನು ನೀಡಿದ್ದ ಸುಪ್ರೀಂ ಕೋರ್ಟ್‌ ಜುಲೈ 2022ರ ತೀರ್ಪಿನಲ್ಲಿ ಜಾಮೀನಿಗೆ ಸಂಬಂಧಿಸಿದಂತೆ ಹೊಸ ಶಾಸನ ರೂಪಿಸಲು ನಿರ್ದೇಶಿಸಿತ್ತು.
Supreme Court, Jail
Supreme Court, Jail

ಸುಪ್ರೀಂ ಕೋರ್ಟ್ ಇತ್ತೀಚೆಗೆ ಕೇಂದ್ರ ಸರ್ಕಾರವನ್ನು ತನ್ನ ಜೂನ್ 2022ರ ಮಹತ್ವದ ತೀರ್ಪಿಗೆ ಅನುಗುಣವಾಗಿ ಹೊಸ ಜಾಮೀನು ಕಾನೂನು ತರಲಾಗುತ್ತಿದೆಯೇ ಎಂದು ಪ್ರಶ್ನಿಸಿದೆ (ಸತೇಂದರ್ ಕುಮಾರ್ ಆಂಟಿಲ್ ವರ್ಸಸ್‌ ಸಿಬಿಐ ಮತ್ತು ಇತರರು).

ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಮತ್ತು ಎಸ್ ವಿ ಎನ್ ಭಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ಫೆಬ್ರವರಿ 13ರ ಆದೇಶದಲ್ಲಿ ವಿವಿಧ ಹೈಕೋರ್ಟ್‌ಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಳಲಾದ ಪ್ರಶ್ನೆಗಳು ಮತ್ತ ಅನುಪಾಲನೆಯ ಸಮಗ್ರ ಪಟ್ಟಿಗೆ ಸಂಬಂಧಿಸಿದಂತೆ ಈ ಪ್ರಶ್ನೆಯನ್ನು ಕೇಳಿದೆ.

ಜಾಮೀನು ವಿಷಯದ ಕುರಿತಾಗಿ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯವು ಈ ಕೆಳಗಿನ ಅಂಶಗಳ ಬಗ್ಗೆ ಪ್ರತಿಕ್ರಿಯೆಯನ್ನು ಕೇಳಿದೆ;

1. ಕೇಂದ್ರ ಸರ್ಕಾರವು ಜಾಮೀನಿಗೆ ಸಂಬಂಧಿಸಿದ ಕಾನೂನು ತರುವ ಚಿಂತನೆಯಲ್ಲಿ ಇದೆಯೇ ಅಥವಾ ಸಿದ್ಧತೆಯಲ್ಲಿದೆಯೇ ಎಂದು ನ್ಯಾಯಾಲಯಕ್ಕೆ ತಿಳಿಸಲು ಒಕ್ಕೂಟ ಸರ್ಕಾರಕ್ಕೆ ನಿರ್ದೇಶಿಸಲಾಗಿದೆ.

2. ಹೆಚ್ಚಿನ ಪ್ರಕರಣಗಳು ಬಾಕಿ ಇರುವ ಜಿಲ್ಲೆಗಳಲ್ಲಿ ಅಗತ್ಯ ದತ್ತಾಂಶದೊಂದಿಗೆ ಮತ್ತಷ್ಟು ವಿಶೇಷ ನ್ಯಾಯಾಲಯಗಳನ್ನು (ಸಿಬಿಐ) ರಚಿಸುವ ಅಗತ್ಯವನ್ನು ಖಚಿತಪಡಿಸಿಕೊಳ್ಳಲು ಮೌಲ್ಯಮಾಪನ ಮಾಡಲಾಗಿದೆಯೇ?

3. ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿರುವ ತನಿಖಾ ಸಂಸ್ಥೆಗಳು (ಸಿಬಿಐ ಹೊರತುಪಡಿಸಿ) ಸತೇಂದರ್ ಕುಮಾರ್ ಆಂಟಿಲ್ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಅನುಸರಿಸುತ್ತಿವೆಯೇ ಅಥವಾ ಇಲ್ಲವೇ?

ಈ ಪ್ರಕರಣದ ವಿಚಾರಣೆಯನ್ನು ಮೇ 7ಕ್ಕೆ ನಡೆಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.

Justice MM Sundresh and Justice SVN Bhatti
Justice MM Sundresh and Justice SVN Bhatti

ಬಂಧನ ಮತ್ತು ವಿಚಾರಣೆ ಸಂದರ್ಭದಲ್ಲಿ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ನಿಬಂಧನೆಗಳನ್ನು ಜಾರಿಗೊಳಿಸುವ ಅಗತ್ಯವನ್ನು ಒತ್ತಿಹೇಳಿದ್ದ ಸತೇಂದರ್ ಆಂಟಿಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 2022ರ ತೀರ್ಪಿನ ಅನುಸರಣೆಗೆ ಸಂಬಂಧಿಸಿದ ಪ್ರಕರಣವನ್ನು ಪೀಠ ವಿಚಾರಣೆ ನಡೆಸಿತು.

ಆ ತೀರ್ಪಿನಲ್ಲಿ ಜಾಮೀನಿಗೆ ಸಂಬಂಧಿಸಿದಂತೆ ಹೊಸ ಶಾಸನ ರೂಪಿಸಲು ಆದೇಶಿಸಲಾಗಿತ್ತು. ಕಾನೂನು ಬೇರೆ ರೀತಿಯಲ್ಲಿ ಒದಗಿಸುವ ಸಂದರ್ಭಗಳನ್ನು ಹೊರತುಪಡಿಸಿ ನ್ಯಾಯಾಲಯಗಳು ಜಾಮೀನು ಅರ್ಜಿಗಳನ್ನು ಎರಡು ವಾರಗಳಲ್ಲಿ ನಿರ್ಧರಿಸಬೇಕು ಎಂದು ಹೇಳಿತ್ತು.

Related Stories

No stories found.
Kannada Bar & Bench
kannada.barandbench.com