
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳನ್ನಾಗಿ ನಾಲ್ವರು ವಕೀಲರ ಹೆಸರನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿದೆ. ಅಕ್ಟೋಬರ್ 6ರಂದು ನಡೆದ ಕೊಲಿಜಿಯಂ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ನ್ಯಾಯಮೂರ್ತಿಗಳನ್ನಾಗಿ ಶಿಫಾರಸ್ಸು ಮಾಡಲಾಗಿರುವ ವಕೀಲರ ಹೆಸರುಗಳು ಇಂತಿವೆ:
ಅನಂತ್ ರಾಮನಾಥ್ ಹೆಗಡೆ
ಚೆಪ್ಪುದಿರ ಮೊನ್ನಪ್ಪ ಪೂಣಚ್ಚ
ಸಿದ್ದಯ್ಯ ರಾಚಯ್ಯ
ಕಣ್ಣನ್‌ಕುಯಿಲ್ ಶ್ರೀಧರ್ ಹೇಮಲೇಖಾ
ಕರ್ನಾಟಕ ಹೈಕೋರ್ಟ್‌ನಲ್ಲಿ 62 ನ್ಯಾಯಮೂರ್ತಿಗಳ ಹುದ್ದೆ ಇದ್ದು, ಅಕ್ಟೋಬರ್ 1ರ ಅಂತ್ಯದವರೆಗೆ 45 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ 17 ಹುದ್ದೆಗಳು ಖಾಲಿ ಉಳಿದಿವೆ.