ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ಮೂವರು ಜಿಲ್ಲಾ ನ್ಯಾಯಾಧೀಶರಿಗೆ ಪದೋನ್ನತಿ: ಸುಪ್ರೀಂ ಶಿಫಾರಸ್ಸು

ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿ ಕುರುಬರಹಳ್ಳಿ ವೆಂಕಟರಾಮರೆಡ್ಡಿ ಅರವಿಂದ್ ಅವರನ್ನು ಖಾಯಂ ನ್ಯಾಯಮೂರ್ತಿಗಳನ್ನಾಗಿ ಮಾಡಬೇಕೆಂದು ಕೊಲಿಜಿಯಂ ಶಿಫಾರಸ್ಸು ಮಾಡಿದೆ.
Karnataka High Court
Karnataka High Court
Published on

ರಾಜ್ಯದ ಮೂವರು ಜಿಲ್ಲಾ ನ್ಯಾಯಧೀಶರನ್ನು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವಂತೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿದೆ.

ಸೋಮವಾರ (ಸೆಪ್ಟೆಂಬರ್ 15) ನಡೆದ ಕೊಲಿಜಿಯಂ ಸಭೆಯ ನಂತರ ಈ ಶಿಫಾರಸ್ಸು ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಪ್ರಕಟಣೆ ತಿಳಿಸಿದ್ದು ಅವರ ಹೆಸರುಗಳು ಇಂತಿವೆ:

(i)  ಗೀತಾ ಕಡಬ ಭರತರಾಜ ಸೆಟ್ಟಿ

(ii) ಮುರಳೀಧರ ಪೈ ಬೋರ್ಕಟ್ಟೆ

(iii) ತ್ಯಾಗರಾಜ ನಾರಾಯಣ ಇನವಳ್ಳಿ

ಇದೇ ವೇಳೆ ಹೈಕೋರ್ಟ್‌ನ ಹಾಲಿ ಹೆಚ್ಚುವರಿ ನ್ಯಾಯಮೂರ್ತಿ ಕುರುಬರಹಳ್ಳಿ ವೆಂಕಟರಾಮರೆಡ್ಡಿ ಅರವಿಂದ್ ಅವರನ್ನು ಖಾಯಂ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಬೇಕೆಂದು ಕೊಲಿಜಿಯಂ ಶಿಫಾರಸ್ಸು ತಿಳಿಸಿದೆ.

ಒಟ್ಟು 62 ನ್ಯಾಯಮೂರ್ತಿಗಳ ಸಂಖ್ಯಾಬಲದ ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಸ್ತುತ 46 ನ್ಯಾಯಮೂರ್ತಿಗಳಷ್ಟೇ ಸೇವೆ ಸಲ್ಲಿಸುತ್ತಿದ್ದಾರೆ.

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ:

Attachment
PDF
Karnataka_High_Court_Judicial_Officers
Preview
Attachment
PDF
Justice_KV_Aravind
Preview
Kannada Bar & Bench
kannada.barandbench.com