ಹೈಕೋರ್ಟ್‌ನ ಮೂವರು ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಕಾಯಂ ನ್ಯಾಯಮೂರ್ತಿಗಳನ್ನಾಗಿಸಲು ಸುಪ್ರೀಂ ಕೊಲಿಜಿಯಂ ಶಿಫಾರಸ್ಸು

ಸೆಪ್ಟೆಂಬರ್‌ 7ರ ಸಭೆ ಬಳಿಕ ಕೊಲಿಜಿಯಂ ಈ ಕುರಿತು ಶಿಫಾರಸ್ಸು ಮಾಡಿದೆ.
High Court of Karnataka
High Court of Karnataka

ಮೂವರು ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಕಾಯಂ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸ್ಸು ಮಾಡಿದೆ. ಸೆಪ್ಟೆಂಬರ್‌ 7ರಂದು ನಡೆದ ಕೊಲಿಜಿಯಂ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ.

ನ್ಯಾಯಮೂರ್ತಿಗಳಾದ ಮೊಹಮ್ಮದ್‌ ಘೌಸ್‌ ಶುಕುರೆ ಕಮಲ್‌, ರಾಜೇಂದ್ರ ಬಾದಾಮಿಕರ್‌ ಮತ್ತು ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್‌ ಅವರನ್ನು ಕಾಯಂ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಶಿಫಾರಸ್ಸು ಮಾಡಲಾಗಿದೆ.

ಸೆಪ್ಟೆಂಬರ್‌ 1ರ ವೇಳೆಗೆ ಕರ್ನಾಟಕ ಹೈಕೋರ್ಟ್‌ 48 ನ್ಯಾಯಮೂರ್ತಿಗಳನ್ನು ಹೊಂದಿದ್ದು, ಹೈಕೋರ್ಟ್‌ನಲ್ಲಿ ಒಟ್ಟು 62 ನ್ಯಾಯಮೂರ್ತಿಗಳ ಹುದ್ದೆಗಳಿವೆ. 

Related Stories

No stories found.
Kannada Bar & Bench
kannada.barandbench.com