ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಸ್ಥಾನಕ್ಕೆ ವಕೀಲ ಸಿ ಎಂ ಪೂಣಚ್ಚ ಅವರ ಹೆಸರು ಪುನರುಚ್ಚರಿಸಿದ ಸುಪ್ರೀಂ ಕೊಲಿಜಿಯಂ

ಕರ್ನಾಟಕ ಹೈಕೋರ್ಟ್‌ಗೆ ಮಂಜೂರಾಗಿರುವ ನ್ಯಾಯಮೂರ್ತಿ ಸ್ಥಾನಗಳ ಒಟ್ಟು ಸಂಖ್ಯೆ 62 ಆಗಿದ್ದು, ಪ್ರಸಕ್ತ ಅದು 45 ನ್ಯಾಯಮೂರ್ತಿಗಳನ್ನು ಹೊಂದಿದೆ. 17 ಸ್ಥಾನಗಳು ಖಾಲಿ ಇವೆ.
ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಸ್ಥಾನಕ್ಕೆ ವಕೀಲ ಸಿ ಎಂ ಪೂಣಚ್ಚ ಅವರ ಹೆಸರು ಪುನರುಚ್ಚರಿಸಿದ ಸುಪ್ರೀಂ ಕೊಲಿಜಿಯಂ

Karnataka High Court

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಸ್ಥಾನಕ್ಕೆ ವಕೀಲ ಚೆಪ್ಪುಡಿರ ಮೊನ್ನಪ್ಪ ಪೂಣಚ್ಚ ಅವರ ಹೆಸರನ್ನು ಸುಪ್ರೀಂ ಕೋರ್ಟ್‌ ಮತ್ತೊಮ್ಮೆ ಪುನರುಚ್ಚರಿಸಿ ಶಿಫಾರಸ್ಸು ಮಾಡಿದೆ. ಫೆಬ್ರವರಿ 1ರಂದು ನಡೆದ ಕೊಲಿಜಿಯಂ ಸಭೆಯ ವೇಳೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪೂಣಚ್ಚ ಅವರ ಹೆಸರನ್ನು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಸ್ಥಾನಕ್ಕೆ ಮೊದಲ ಬಾರಿಗೆ ಅಕ್ಟೋಬರ್‌ 2021ರಂದು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸ್ಸು ಮಾಡಿತ್ತು. ಆದರೆ, ಕೇಂದ್ರ ಸರ್ಕಾರವು ಈ ಕುರಿತ ಕಡತವನ್ನು ಕೊಲಿಜಿಯಂಗೆ ಅಕ್ಟೋಬರ್‌ 2021ರಂದು ಮರಳಿಸಿತ್ತು. ಪೂಣಚ್ಚ ಅವರ ಹೆಸರನ್ನು ಮರಳಿ ಶಿಫಾರಸ್ಸು ಮಾಡುವ ನಿರ್ಧಾರವನ್ನು ಕೊಲಿಜಿಯಂ ಕೈಗೊಂಡಿತ್ತು.

ಕರ್ನಾಟಕ ಹೈಕೋರ್ಟ್‌ಗೆ ಮಂಜೂರಾಗಿರುವ ನ್ಯಾಯಮೂರ್ತಿ ಸ್ಥಾನಗಳ ಒಟ್ಟು ಸಂಖ್ಯೆ 62 ಆಗಿದ್ದು, ಪ್ರಸಕ್ತ ಅದು 45 ನ್ಯಾಯಮೂರ್ತಿಗಳನ್ನು ಹೊಂದಿದೆ. 17 ಸ್ಥಾನಗಳು ಖಾಲಿ ಇವೆ.

Attachment
PDF
Recommendation_of_Advocate_Cheppudira_Monnappa.pdf
Preview

Related Stories

No stories found.