ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಇಬ್ಬರು ವಕೀಲರನ್ನು ನೇಮಿಸುವ ಪ್ರಸ್ತಾಪ ಪುನರುಚ್ಚರಿಸಿದ ಸುಪ್ರೀಂ ಕೊಲಿಜಿಯಂ

ರಾಜ್ಯ ಹೈಕೋರ್ಟ್‌ನಲ್ಲಿ ಅನುಮೋದಿತವಾಗಿರುವ ಒಟ್ಟು 62 ನ್ಯಾಯಮೂರ್ತಿಗಳ ಬದಲಾಗಿ ಈಗ 45 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಇಬ್ಬರು ವಕೀಲರನ್ನು ನೇಮಿಸುವ ಪ್ರಸ್ತಾಪ ಪುನರುಚ್ಚರಿಸಿದ ಸುಪ್ರೀಂ ಕೊಲಿಜಿಯಂ

ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಇಬ್ಬರು ವಕೀಲರನ್ನು ನೇಮಿಸುವ ಹಿಂದಿನ ಪ್ರಸ್ತಾಪವನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಪುನರುಚ್ಚರಿಸಿದೆ.

ಸೆಪ್ಟೆಂಬರ್ 1 ರಂದು ನಡೆದ ತನ್ನ ಸಭೆಯಲ್ಲಿ ವಕೀಲರಾದ ನಾಗೇಂದ್ರ ಆರ್ ನಾಯಕ್ ಹಾಗೂ ಆದಿತ್ಯ ಸೋಂಧಿ ಅವರನ್ನು ನ್ಯಾಯಮೂರ್ತಿಯಾಗಿ ಮಾಡುವ ಶಿಫಾರಸುಗಳನ್ನು ಪುನರುಚ್ಚರಿಸಲು ತೀರ್ಮಾನಿಸಿತು.

Also Read
ಕರ್ನಾಟಕ ಹೈಕೋರ್ಟ್‌ನ 6 ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಕಾಯಂ ನ್ಯಾಯಮೂರ್ತಿಗಳನ್ನಾಗಿಸಲು ಕೊಲಿಜಿಯಂ ಶಿಫಾರಸ್ಸು

ನಾಯಕ್ ಅವರ ಹೆಸರನ್ನು ಅಕ್ಟೋಬರ್ 2019 ರಲ್ಲಿ ಮತ್ತು ಆದಿತ್ಯ ಸೋಂಧಿ ಅವರ ಹೆಸರನ್ನು ಫೆಬ್ರವರಿ 2021 ರಲ್ಲಿ ನ್ಯಾಯಮೂರ್ತಿಗಳ ಸ್ಥಾನಕ್ಕೆ ಶಿಫಾರಸು ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

ಕರ್ನಾಟಕ ಹೈಕೋರ್ಟ್‌ಗೆ ಒಟ್ಟು 62 ನ್ಯಾಯಮೂರ್ತಿಗಳ ಸ್ಥಾನಕ್ಕೆ ಅನುಮೋದನೆ ಇದ್ದು ಪ್ರಸ್ತುತ 45 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

Related Stories

No stories found.
Kannada Bar & Bench
kannada.barandbench.com