ಅಭಿವೃದ್ಧಿ ಯೋಜನೆಗಳಿಗಾಗಿ ಮರಗಳ ತೆರವು; ಮಾರ್ಗಸೂಚಿ ರೂಪಿಸಲು ಏಳು ತಜ್ಞರ ಸಮಿತಿ ರಚಿಸಿದ ಸುಪ್ರೀಂಕೋರ್ಟ್

ಹವಾಮಾನ ಬದಲಾವಣೆ ರಾಷ್ಟ್ರೀಯ ಅಂತರರಾಷ್ಟ್ರೀಯ ಕಳವಳಕ್ಕೆ ಎಡೆ ಮಾಡಿಕೊಟ್ಟಿದ್ದು ಪರಿಸರಕ್ಕೆ ಮರಗಳ ನೀಡುತ್ತಿರುವ ಮೌಲ್ಯಯುತ ಕೊಡುಗೆಯನ್ನು ಗಮನದಲ್ಲಿರಿಸಿಕೊಂಡು ಸಿಜೆಐ ಬೊಬ್ಡೆ ಅವರ ನೇತೃತ್ವದ ಪೀಠ ಈ ಆದೇಶ ನೀಡಿದೆ.
SA Bobde, AS Bopanna and V Ramasubramanian
SA Bobde, AS Bopanna and V Ramasubramanian
Published on

ಅಭಿವೃದ್ಧಿ ಯೋಜನೆಗಳಿಗಾಗಿ ಮರಗಳನ್ನು ಕಡಿಯುವುದಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗುವಂತೆ ವೈಜ್ಞಾನಿಕ ಮತ್ತು ಮಾರ್ಗಸೂಚಿ ನೀತಿಗಳನ್ನು ರೂಪಿಸಲು ಸುಪ್ರೀಂಕೋರ್ಟ್‌ ಗುರುವಾರ ಏಳು ಸದಸ್ಯರ ಸಮಿತಿಯೊಂದನ್ನು ರಚಿಸಿದೆ. (ಅಸೋಸಿಯೇಷನ್ ​​ಫಾರ್ ಪ್ರೊಟೆಕ್ಷನ್ ಆಫ್ ಡೆಮಾಕ್ರಟಿಕ್ ರೈಟ್ಸ್ ಮತ್ತ. ಪಶ್ಚಿಮ ಬಂಗಾಳ ಸರ್ಕಾರ ನಡುವಣ ಪ್ರಕರಣ).

ಹವಾಮಾನ ಬದಲಾವಣೆ ರಾಷ್ಟ್ರೀಯ-ಅಂತರರಾಷ್ಟ್ರೀಯ ಕಳವಳಕ್ಕೆ ಎಡೆ ಮಾಡಿಕೊಡುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಹಾಗೂ ವಿ ರಾಮಸುಬ್ರಮಣಿಯನ್‌ ಅವರಿದ್ದ ಪೀಠ ಈ ಆದೇಶ ನೀಡಿದೆ.

Also Read
ಟೂಲ್‌ಕಿಟ್‌ ಪ್ರಕರಣ: ಪರಿಸರ ಕಾರ್ಯಕರ್ತೆ ದಿಶಾ ರವಿ ಅವರಿಗೆ ಜಾಮೀನು ನೀಡಿದ ದೆಹಲಿ ನ್ಯಾಯಾಲಯ

ಮರಗಳ ವಯಸ್ಸು, ಸುತ್ತಳತೆ ಇತ್ಯಾದಿ ಅಂಶಗಳನ್ನು ಪರಿಗಣಿಸಿ ಅವುಗಳ ಪರಿಸರ ಮೌಲ್ಯಗಳ ಆಧಾರದ ಮೇಲೆ ಮಾರ್ಗಸೂಚಿಗಳಲ್ಲಿ ಮರಗಳ ಜಾತಿಗಳನ್ನು ವರ್ಗೀಕರಿಸುವಂತೆ ನ್ಯಾಯಾಲಯ ಸಮಿತಿಗೆ ಸೂಚಿಸಿದೆ. ಇದು ಭೌಗೋಳಿಕ ಪ್ರದೇಶ ಅಥವಾ ಪರಿಸರ-ಸೂಕ್ಷ್ಮ ಪ್ರದೇಶಗಳಿಗೆ ವಿಶೇಷ ಕೊಡುಗೆ ನೀಡಬಹುದು ಎಂದು ಅದು ಹೇಳಿದೆ.

ಮೇಲ್ಸೇತುವೆಗಳನ್ನು (ಆರ್‌ಒಬಿ) ನಿರ್ಮಿಸಲು ಮತ್ತು ರಸ್ತೆಗಳನ್ನು ಅಗಲಗೊಳಿಸುವ ಸಲುವಾಗಿ ಮರಗಳನ್ನು ಕಡಿಯುವ ಪಶ್ಚಿಮ ಬಂಗಾಳ ಸರ್ಕಾರದ ನಿರ್ಧಾರದ ವಿರುದ್ಧ 'ಅಸೋಸಿಯೇಷನ್ ​​ಫಾರ್ ಪ್ರೊಟೆಕ್ಷನ್ ಆಫ್ ಡೆಮಾಕ್ರಟಿಕ್ ರೈಟ್ಸ್' ಎಂಬ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯವು ಈ ಆದೇಶ ಹೊರಡಿಸಿತು.

ಖ್ಯಾತ ವನ್ಯಜೀವಿ ತಜ್ಞ ಮತ್ತು ಭಾರತ ವನ್ಯಜೀವಿ ಟ್ರಸ್ಟ್‌ ಅಧ್ಯಕ್ಷರಾದ ರಂಜಿತ್‌ಸಿನ್ಹ್‌ ಝಲಾ ಅವರು ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಸಮಿತಿಯ ಉಳಿದ ಸದಸ್ಯರ ಹೆಸರು ಹೀಗಿದೆ: ಜಿಗ್ಮತ್‌ ತಕ್ಪಾ, ಅರುಣ್‌ ಸಿಂಗ್‌ ರಾವತ್‌, ಪ್ರೊ. ಸಂದೀಪ್‌ ತಂಬೆ, ಗೋಪಾಲ್‌ ಸಿಂಗ್‌ ರಾವತ್‌, ಡಾ. ನೀಲಾಂಜನ್‌ ಘೋಷ್‌, ಪ್ರದೀಪ್‌ ಕ್ರಿಷನ್‌.

ಪ್ರಕರಣದಲ್ಲಿ ಅಮಿಕಸ್‌ ಕ್ಯೂರಿಯನ್ನಾಗಿ (ನ್ಯಾಯಾಲಯಕ್ಕೆ ಸಹಕರಿಸುವ ವಕೀಲ) ನ್ಯಾಯವಾದಿ ಕೆ ಪರಮೇಶ್ವರ್‌ ಅವರನ್ನು ನ್ಯಾಯಾಲಯ ನೇಮಿಸಿದೆ. ವೃಕ್ಷ ಸಂರಕ್ಷಣೆಗೆ ಸಂಬಂಧಿಸಿದ ಕೆಲ ಮಹತ್ವದ ವಿಚಾರಗಳನ್ನು ಪಟ್ಟಿ ಮಾಡಿರುವ ನ್ಯಾಯಾಲಯ ಅವುಗಳ ಕುರಿತು ಚರ್ಚಿಸುವಂತೆ ಸೂಚಿಸಿದೆ.

ಆದೇಶವನ್ನು ಇಲ್ಲಿ ಓದಿ:

Attachment
PDF
Association_for_Protection_of_Democratic_Rights_v__State_of_West_Bengal.pdf
Preview
Kannada Bar & Bench
kannada.barandbench.com