![ವರ್ಚುವಲ್ ವಿಚಾರಣೆ ಮೂಲಭೂತ ಹಕ್ಕು: ಮನವಿಯ ತುರ್ತು ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ನಕಾರ [ಚುಟುಕು]](https://gumlet.assettype.com/barandbench-kannada%2F2022-01%2F26743e0c-b064-4c10-a1ad-93b838b28fc0%2Fbarandbench_2021_03_1df90ae6_6634_41a9_b8cc_8a71a887e8e5_virtual_heARING.jpg?auto=format%2Ccompress&fit=max)
ವರ್ಚುವಲ್ ವಿಚಾರಣೆಯನ್ನು ಮೂಲಭೂತ ಹಕ್ಕು ಎಂದು ಘೋಷಿಸುವಂತೆ ಕೋರಿರುವ ಮನವಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ನೇತೃತ್ವದ ಪೀಠದ ಮುಂದೆ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಅವರು ವಿಚಾರ ಪ್ರಸ್ತಾಪಿಸಿದರು. ಕೋವಿಡ್ ಪ್ರಕರಣಗಳ ಹೆಚ್ಚಳ ಉಲ್ಲೇಖಿಸಿದ ಲೂಥ್ರಾ ಅವರು ನಮಗೆ ಹೈಬ್ರಿಡ್ ವಿಚಾರಣೆ ಬೇಕಿದೆ. ಹೀಗಾಗಿ, ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ಕೋರಿದರು.
“ಹೈಬ್ರಿಡ್ ಎಂದರೆ ನಾವು ಲೂಥ್ರಾ ಅವರನ್ನು ನ್ಯಾಯಾಲಯದಲ್ಲಿ ನೋಡುವ ಸಂತಸ ಇಲ್ಲವಾಗುತ್ತದೆ. ಸದ್ಯಕ್ಕೆ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸುವ ಯಾವುದೇ ತುರ್ತು ಇಲ್ಲ. ಎಲ್ಲರೂ ನ್ಯಾಯಾಲಯಕ್ಕೆ ಬರುತ್ತಿದ್ದಾರೆ. ಪರಿಸ್ಥಿತಿ ಹದಗೆಟ್ಟರೆ ನೋಡೋಣ” ಎಂದು ಪೀಠ ಹೇಳಿತು.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.