ಹಿರಿಯ ನ್ಯಾಯವಾದಿಗಳಾಗಿ 56 ವಕೀಲರನ್ನು ನೇಮಿಸಿದ ಸುಪ್ರೀಂ ಕೋರ್ಟ್: ಅವರಲ್ಲಿ 11 ಮಂದಿ ಮಹಿಳೆಯರು

ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಸಮಿತಿ 200ಕ್ಕೂ ಹೆಚ್ಚು ಅರ್ಜಿದಾರರ ಸಂದರ್ಶನ ನಡೆಸಿ ಈ ಪದೋನ್ನತಿ ನೀಡಿದೆ.
ಸುಪ್ರೀಂ ಕೋರ್ಟ್ ವಕೀಲರು
ಸುಪ್ರೀಂ ಕೋರ್ಟ್ ವಕೀಲರು

*ಹನ್ನೊಂದು ಮಂದಿ ವಕೀಲೆಯರು ಸೇರಿದಂತೆ 56 ನ್ಯಾಯವಾದಿಗಳನ್ನು ಹಿರಿಯ ವಕೀಲರನ್ನಾಗಿ ಸುಪ್ರೀಂ ಕೋರ್ಟ್‌ ಶುಕ್ರವಾರ ಪದೋನ್ನತಿ ನೀಡಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಸಮಿತಿ 200ಕ್ಕೂ ಹೆಚ್ಚು ಅರ್ಜಿದಾರರ ಸಂದರ್ಶನ ನಡೆಸಿ ಈ ಪದವಿ ನೀಡಿದೆ.

ಹಿರಿಯ ನ್ಯಾಯವಾದಿ ಹುದ್ದೆಗೇರಿದವರ ಪಟ್ಟಿ:

1. ಗೌರವ್ ಅಗರ್‌ವಾಲ್‌, ಅಡ್ವೊಕೇಟ್ ಆನ್ ರೆಕಾರ್ಡ್
2. ಶೋಭಾ ಗುಪ್ತಾ, ಅಡ್ವೊಕೇಟ್ ಆನ್ ರೆಕಾರ್ಡ್
3. ಸೈತೇಶ್ ಮುಖರ್ಜಿ, ವಕೀಲ
4. ಅಮಿತ್ ಆನಂದ್ ತಿವಾರಿ, ಅಡ್ವೊಕೇಟ್ ಆನ್ ರೆಕಾರ್ಡ್
5. ಸಾಕೇತ್ ಸಿಂಗ್, ವಕೀಲ
6. ಅಮರ್ ಪ್ರದೀಪ್‌ಭಾಯ್‌ ದವೆ (ಅಮರ್ ಪ್ರದೀಪ್ ದವೆ), ವಕೀಲ
7. ದೇವಶಿಶ್ ಭರೂಕಾ, ಅಡ್ವೊಕೇಟ್ ಆನ್ ರೆಕಾರ್ಡ್
8. ಸ್ವರೂಪಮಾ ಚತುರ್ವೇದಿ, ಅಡ್ವೊಕೇಟ್ ಆನ್ ರೆಕಾರ್ಡ್
9. ಡಾ.ಅಮನ್ ಮೋಹಿತ್ ಹಿಂಗೋರಾನಿ, ಅಡ್ವೊಕೇಟ್-ಆನ್-ರೆಕಾರ್ಡ್
10. ಅಭಿನವ್ ಮುಖರ್ಜಿ, ಅಡ್ವೊಕೇಟ್ ಆನ್ ರೆಕಾರ್ಡ್
11. ಸೌರಭ್ ಮಿಶ್ರಾ, ಅಡ್ವೊಕೇಟ್ ಆನ್ ರೆಕಾರ್ಡ್
12. ನಿಖಿಲ್ ಗೋಯೆಲ್, ಅಡ್ವೊಕೇಟ್-ಆನ್-ರೆಕಾರ್ಡ್
13. ಸುನಿಲ್ ಫರ್ನಾಂಡಿಸ್, ಅಡ್ವೊಕೇಟ್ ಆನ್ ರೆಕಾರ್ಡ್
14. ಸುಜಿತ್ ಕುಮಾರ್ ಘೋಷ್, ವಕೀಲ
15. ಶಿಖಿಲ್ ಶಿವ ಮಧು ಸೂರಿ, ವಕೀಲ
16. ಲಿಜ್ ಮ್ಯಾಥ್ಯೂ (ಆಂಥ್ರಾಪರ್), ಅಡ್ವೊಕೇಟ್-ಆನ್-ರೆಕಾರ್ಡ್
17. ಸಂಜಯ್ ಉಪಾಧ್ಯಾಯ, ವಕೀಲ
18. ಸುಧಾಂಶು ಶಶಿಕುಮಾರ್ ಚೌಧರಿ, ಅಡ್ವೊಕೇಟ್ ಆನ್ ರೆಕಾರ್ಡ್
19. ಕರುಣಾ ನಂದಿ, ವಕೀಲೆ
20. ಪ್ರತಾಪ್ ವೇಣುಗೋಪಾಲ್, ಅಡ್ವೊಕೇಟ್ ಆನ್ ರೆಕಾರ್ಡ್
21. ಗಗನ್ ಗುಪ್ತಾ, ಅಡ್ವೊಕೇಟ್-ಆನ್-ರೆಕಾರ್ಡ್
22. ರಘೇಂತ್ ಬಿ (ರಘೇಂತ್ ಬಸಂತ್), ವಕೀಲ
23. ತಪೇಶ್ ಕುಮಾರ್ ಸಿಂಗ್, ಅಡ್ವೊಕೇಟ್ ಆನ್ ರೆಕಾರ್ಡ್
24. ನಿಶಾ ಬಾಗ್ಚಿ, ವಕೀಲೆ
25. ರವೂಫ್ ರಹೀಮ್, ಅಡ್ವೊಕೇಟ್ ಆನ್ ರೆಕಾರ್ಡ್
26. ಪಿ ಬಿ ಸುರೇಶ್, ಅಡ್ವೊಕೇಟ್ ಆನ್ ರೆಕಾರ್ಡ್
27. ಉತ್ತರಾ ಬಬ್ಬರ್, ಅಡ್ವೊಕೇಟ್ ಆನ್ ರೆಕಾರ್ಡ್
28. ಡಾ. ಜೋಸೆಫ್ ಅರಿಸ್ಟಾಟಲ್ ಎಸ್, ಅಡ್ವೊಕೇಟ್-ಆನ್-ರೆಕಾರ್ಡ್
29. ಶ್ರೀಧರ್ ಪೋತರಾಜು, ಅಡ್ವೊಕೇಟ್ ಆನ್ ರೆಕಾರ್ಡ್
30. ಹರಿಪ್ರಿಯಾ ಪದ್ಮನಾಭನ್, ವಕೀಲೆ
31. ಡಾ.ಕೆ ಬಿ ಸೌಂದರ್ ರಾಜನ್, ಅಡ್ವೊಕೇಟ್ ಆನ್ ರೆಕಾರ್ಡ್
32. ಜಿ.ಸಾಯಿಕುಮಾರ್, ವಕೀಲ
33. ಆನಂದ್ ಸಂಜಯ್ ಎಂ ನೂಲಿ, ವಕೀಲ
34. ಸೆಂಥಿಲ್ ಜಗದೀಶ್ (ಸೆಂಥಿಲ್ ಜೆ), ಅಡ್ವೊಕೇಟ್ ಆನ್ ರೆಕಾರ್ಡ್
35. ದೀಪೇಂದ್ರ ನಾರಾಯಣ್ ರೇ, ವಕೀಲ
36. ಮೊಹಮ್ಮದ್ ಶೋಯೆಬ್ ಆಲಂ, ಅಡ್ವೊಕೇಟ್ ಆನ್ ರೆಕಾರ್ಡ್
37. ಪಿಜುಶ್ ಕಾಂತಿ ರಾಯ್, ವಕೀಲರು
38. ಅರ್ಚನಾ ಪಾಠಕ್ ದವೆ, ಅಡ್ವೊಕೇಟ್-ಆನ್-ರೆಕಾರ್ಡ್
39. ಎನ್ ಎಸ್ ನಪ್ಪಿನಾಯಿ, ವಕೀಲ
40. ಅನಿಲ್ ಕೌಶಿಕ್, ವಕೀಲ
41. ಎಸ್ ಜನನಿ, ಅಡ್ವೊಕೇಟ್ ಆನ್ ರೆಕಾರ್ಡ್
42. ನರೇಶ್ ಕೌಶಿಕ್, ವಕೀಲ
43. ಆನಂದ ಪದ್ಮನಾಭನ್, ವಕೀಲ
44. ಡಾ. ಜೋಸ್ ಪೊರತೂರ್, ವಕೀಲ
45. ಉದಯ್ ಗುಪ್ತಾ, ವಕೀಲ
46. ಶ್ರೀಧರ್ ಯಶವಂತ್ ಚಿತಾಲೆ, ವಕೀಲ
47. ಅನಂತ್ ವಿಜಯ್ ಪಲ್ಲಿ, ವಕೀಲ
48. ರೂಪೇಶ್ ಕುಮಾರ್, ಅಡ್ವೊಕೇಟ್ ಆನ್ ರೆಕಾರ್ಡ್
49. ಸಂಜಯ್ ವಸಂತರಾವ್ ಖಾರ್ಡೆ, ವಕೀಲ
50. ವಿ ಪ್ರಭಾಕರ್, ವಕೀಲ
51. ಅಭಿಜಿತ್ ಸಿನ್ಹಾ, ವಕೀಲ
52. ಅರವಿಂದ್ ಕುಮಾರ್ ಶರ್ಮಾ, ವಕೀಲ
53. ಶೈಲೇಶ್ ಮಡಿಯಾಳ್, ಅಡ್ವೊಕೇಟ್ ಆನ್ ರೆಕಾರ್ಡ್
54. ಶಿರಿನ್ ಖಜುರಿಯಾ, ಅಡ್ವೊಕೇಟ್-ಆನ್-ರೆಕಾರ್ಡ್
55. ರಾಘವೇಂದ್ರ ಎಸ್ ಶ್ರೀವತ್ಸ, ಅಡ್ವೊಕೇಟ್ ಆನ್ ರೆಕಾರ್ಡ್
56. ಅರ್ಧೇಂದುಮೌಳಿ ಕುಮಾರ್ ಪ್ರಸಾದ್, ಅಡ್ವೊಕೇಟ್ ಆನ್ ರೆಕಾರ್ಡ್

ಹದಿನೆಂಟು ವಕೀಲರಿಗೆ 2021ರ ಡಿಸೆಂಬರ್‌ನಲ್ಲಿ ಹಿರಿಯ ನ್ಯಾಯವಾದಿ ಪದವಿ ನೀಡಲಾಗಿತ್ತು. ಮೇ 2022 ಮತ್ತು ಅಕ್ಟೋಬರ್ 2023ರಲ್ಲಿ, ತಲ್ವಂತ್ ಸಿಂಗ್, ಡಾ. ಎಸ್ ಮುರಳೀಧರ್ ಮತ್ತು ಪಿ ಎನ್ ಪ್ರಕಾಶ್ ಸೇರಿದಂತೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಸುಪ್ರೀಂ ಕೋರ್ಟ್ ಈ ಪದವಿ ನೀಡಿತ್ತು.

ಹಿರಿಯ ವಕೀಲರ ಪದವಿಗೆ ಆಯ್ಕೆ ಮಾಡುವಾಗ ಉದಾರ ನೀತಿ ಅಳವಡಿಸಿಕೊಳ್ಳುವಂತೆ ಸಿಜೆಐ ಹಾಗೂ ಉಳಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಿಗೆ ಕಳೆದ ಆಗಸ್ಟ್‌ನಲ್ಲಿ ಸರ್ವೋಚ್ಚ ನ್ಯಾಯಾಲಯ ವಕೀಲರ ಸಂಘ ಒತ್ತಾಯಿಸಿತ್ತು.

ಕೋವಿಡ್‌ ಕಾರಣಕ್ಕೆ ನ್ಯಾಯಾಂಗ ಎದುರಿಸಿದ ಸವಾಲಿನಿಂದಾಗಿ ಕಳೆದ ಎಂಟು ವರ್ಷಗಳಲ್ಲಿ ಒಮ್ಮೆ ಮಾತ್ರ ಈ ಪದವಿ ನೀಡಲಾಗಿದೆ ಎಂದು ಸಂಘ ಒತ್ತಿ ಹೇಳಿತ್ತು.

ಇದಕ್ಕೂ ಮೊದಲು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಸರ್ವೋಚ್ಚ ನ್ಯಾಯಾಲಯ ಅಡ್ವೊಕೇಟ್‌ ಆನ್‌ ರೆಕಾರ್ಡ್‌ ಸಂಘ ಫೆಬ್ರವರಿ 2022ರಲ್ಲಿ ಆಹ್ವಾನಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಹಿರಿಯ ವಕೀಲರನ್ನು ನೇಮಕ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಹಿರಿಯ ವಕೀಲರ ಪದನಾಮ ಸಮಿತಿಗೆ (ಸಿಡಿಎಸ್ಎ) ನಿರ್ದೇಶನ ನೀಡಬೇಕು ಎಂದು ಕೋರಿತ್ತು.

[ಅಧಿಸೂಚನೆಯ ಪ್ರತಿಯನ್ನು ಇಲ್ಲಿ ಓದಿ]

Attachment
PDF
2024 Supreme Court Senior Advocates designated.pdf
Preview

Related Stories

No stories found.
Kannada Bar & Bench
kannada.barandbench.com