ಕಳೆದ ವರ್ಷ ಒಂದೂ ಮರಣ ದಂಡನೆ ವಿಧಿಸದ ಸುಪ್ರೀಂ ಕೋರ್ಟ್‌; ಐವರ ಶಿಕ್ಷೆ ಪರಿವರ್ತನೆ, ನಾಲ್ಕು ಪ್ರಕರಣದಲ್ಲಿ ಖುಲಾಸೆ

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಹೈಬ್ರಿಡ್‌ ವಿಚಾರಣೆಗೆ ಪುನಾರಂಭಿಸಿದ ಬಳಿಕ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರು ಮರಣ ದಂಡನೆ ಪ್ರಕರಣಗಳಿಗೆ ಆದ್ಯತೆ ನೀಡಿದ್ದಾರೆ.
Supreme Court, Bail

Supreme Court, Bail

ಕಳೆದ ವರ್ಷ ಸುಪ್ರೀಂ ಕೋರ್ಟ್‌ ಒಂದೇ ಒಂದು ಮರಣದಂಡನೆ ಶಿಕ್ಷೆಯನ್ನೂ ಕಾಯಂಗೊಳಿಸಲ್ಲ ಎಂದು ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಸಂಶೋಧನಾ ಸಂಸ್ಥೆಯಾದ ಪ್ರಾಜೆಕ್ಟ್‌ 39ಎ ತನ್ನ ವರದಿಯಲ್ಲಿ ಹೇಳಿದೆ.

ಸುಪ್ರೀಂ ಕೋರ್ಟ್‌ ಒಂಭತ್ತು ಕೈದಿಗಳ ಮರಣ ದಂಡನೆ ವಿಚಾರವನ್ನು ನಿರ್ಧರಿಸಿದ್ದು, ಈ ಪೈಕಿ ಐವರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಡಿಸಿದ್ದು, ನಾಲ್ವರನ್ನು ಎಲ್ಲ ಆರೋಪಗಳಿಂದ ಮುಕ್ತಗೊಳಿಸಿದೆ.

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಹೈಬ್ರಿಡ್‌ ವಿಚಾರಣೆಗೆ ಪುನಾರಂಭಿಸಿದ ಬಳಿಕ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರು ಮರಣ ದಂಡನೆ ಪ್ರಕರಣಗಳಿಗೆ ಆದ್ಯತೆ ನೀಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

2021ರ ಸೆಪ್ಟೆಂಬರ್-ಡಿಸೆಂಬರ್‌ ಅವಧಿಯಲ್ಲಿ ನಾಲ್ಕು ಪೀಠಗಳ ಮುಂದೆ 40 ಜೀವಾವಧಿ ಶಿಕ್ಷೆಯ ಪ್ರಕರಣಗಳನ್ನು ಆದ್ಯತೆಯ ಮೇಲೆ ವಿಚಾರಣೆ ನಡೆಸಲು ನ್ಯಾಯಾಲಯ ನಿಗದಿಪಡಿಸಿತ್ತು. 17 ಕೈದಿಗಳನ್ನು ಒಳಗೊಂಡಿದ್ದ 14 ಪ್ರಕರಣಗಳ ವಾದ-ಪ್ರತಿವಾದವನ್ನು ಸುಪ್ರೀಂ ಕೋರ್ಟ್‌ನ ಮೂರು ಪೀಠಗಳು ಆಲಿಸಿದ್ದು, ಈ ಪೈಕಿ ಐದು ಪ್ರಕರಣಗಳಲ್ಲಿ ತೀರ್ಪು ಪ್ರಕಟಿಸಲಾಗಿದೆ.

Also Read
ಅವಿವಾಹಿತ/ಏಕ ಪೋಷಕ ತಾಯಂದಿರ ಮಕ್ಕಳ ಜನನ, ಮರಣ ಪ್ರಮಾಣ ಪತ್ರ: ತಂದೆ ವಿವರವಿಲ್ಲದ ಅರ್ಜಿ ರೂಪಿಸಿ ಎಂದ ಕೇರಳ ಹೈಕೋರ್ಟ್

ನ್ಯಾಯಮೂರ್ತಿ ಎಲ್‌ ನಾಗೇಶ್ವರ ರಾವ್‌ ನೇತೃತ್ವದ ಪೀಠವು ಮರಣ ದಂಡನೆ ಶಿಕ್ಷೆಗೆ ಗುರಿಯಾಗಿದ್ದ ನಾಲ್ವರು ಅಪರಾಧಿಗಳ ಶಿಕ್ಷೆ ಮಾರ್ಪಾಟು ಮಾಡುವಾಗ ಕುಟುಂಬ ಸದಸ್ಯರು ಮತ್ತು ಸಮುದಾಯದವರ ಅಫಿಡವಿಟ್‌ಗಳು ಆಧರಿಸಿತ್ತು.

2021ರಲ್ಲಿ ಒಟ್ಟಾರೆ 25 ಹೈಕೋರ್ಟ್‌ಗಳಲ್ಲಿ 6 ಮರಣ ದಂಡನೆ ಶಿಕ್ಷೆ ಕಾಯಂಗೊಳಿಸಲಾಗಿದೆ. 21 ಗಲ್ಲು ಶಿಕ್ಷೆಗಳನ್ನು ಮಾರ್ಪಡಿಸಲಾಗಿದ್ದು, 29 ಪ್ರಕರಣಗಳಲ್ಲಿ ಖುಲಾಸೆ ತೀರ್ಪು ಹೊರಡಿಸಲಾಗಿದೆ. ಹೊಸದಾಗಿ ನಿರ್ಧರಿಸುವಂತೆ ಎರಡು ಪ್ರಕರಣಗಳನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಮರಳಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com