ಪಂಜಾಬ್ ಪೊಲೀಸರು ದಾಖಲಿಸಿರುವ ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಜ. 31ರವರೆಗೆ ಬಂಧಿಸದಂತೆ ಶಿರೋಮಣಿ ಅಕಾಲಿದಳದ ಮುಖಂಡ ಬಿಕ್ರಮ್ ಮಜೀಠಿಯಾ ಅವರಿಗೆ ಸುಪ್ರೀಂಕೋರ್ಟ್ ಮಧ್ಯಂತರ ರಕ್ಷಣೆ ನೀಡಿದೆ. ಮಜೀಠಿಯಾ ಅವರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮುಂದಿನ ಸೋಮವಾರ ಸುಪ್ರೀಂಕೋರ್ಟ್ ಆಲಿಸಲಿದ್ದು ಅಲ್ಲಿಯವರೆಗೆ ಪಂಜಾಬ್ ಸರ್ಕಾರ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಬಾರದು ಎಂದು ಸಿಜೆಐ ಎನ್ ವಿ ರಮಣ ಸೂಚಿಸಿದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ವಿರುದ್ಧ ಶಿರೋಮಣಿ ಅಕಾಲಿದಳದ ಘಟಾನುಘಟಿ ನಾಯಕ ಮಜೀಠಿಯಾ ಸ್ಪರ್ಧಿಸುವುದಾಗಿ ಘೋಷಿಸಿದ ಬಳಿಕ ಅಮೃತಸರ ಪೂರ್ವ ಕ್ಷೇತ್ರ ಕುತೂಹಲದ ಕಣವಾಗಿ ಮಾರ್ಪಟ್ಟಿದೆ.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.