ಮಧ್ಯಸ್ಥಿಕೆ ಪ್ರಕ್ರಿಯೆಗಳಿಗೆ ಕಂಪನಿ ಸಮೂಹ ತತ್ವ ಅನ್ವಯ: ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ

ಒಪ್ಪಂದಕ್ಕೆ ಸಹಿ ಹಾಕದ ಪಕ್ಷಕಾರರು, ಸಹಿ ಹಾಕುವವರೊಂದಿಗಿನ ಸಂಬಂಧದ ಕಾರಣದಿಂದಾಗಿ (ಒಂದೇ ಕಂಪನಿಗಳ ಸಮೂಹಕ್ಕೆ ಸೇರಿದ ಘಟಕ), ಮಧ್ಯಸ್ಥಿಕೆ ವಿವಾದಕ್ಕೆ ಅಪರಿಚಿತರು ಎಂದು ಪರಿಗಣಿಸಲಾಗದು ಎಂದು ನ್ಯಾಯಾಲಯ ತೀರ್ಮಾನಿಸಿತು.
ಸಿಜೆಐ  ಚಂದ್ರಚೂಡ್, ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ನರಸಿಂಹ,ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ
ಸಿಜೆಐ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ನರಸಿಂಹ,ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ

ಕಂಪನಿಗಳ ಸಮೂಹ ತತ್ವವು (ಗ್ರೂಪ್‌ ಆಫ್‌ ಕಂಪೆನೀಸ್) ಭಾರತದಲ್ಲಿನ ಮಧ್ಯಸ್ಥಿಕೆ ಪ್ರಕ್ರಿಯೆಗಳಿಗೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ಬುಧವಾರ ತೀರ್ಪು ನೀಡಿದೆ (ಕಾಕ್ಸ್ ಅಂಡ್ ಕಿಂಗ್ಸ್ ಮತ್ತು ಎಸ್ಎಪಿ ಪ್ರೈವೇಟ್ ಲಿಮಿಟೆಡ್ ನಡುವಣ ಪ್ರಕರಣ).

ಮಧ್ಯಸ್ಥಿಕೆ ಒಪ್ಪಂದಕ್ಕೆ ಸಹಿ ಹಾಕದ ಕಂಪನಿಯು ಒಪ್ಪಂದಕ್ಕೆ ಸಹಿ ಹಾಕಿದ ಅದೇ ಕಂಪನಿಗಳ ಗುಂಪಿನ ಸದಸ್ಯನಾಗಿದ್ದರೆ ಒಪ್ಪಂದಕ್ಕೆ ಬದ್ಧವಾಗಿರುತ್ತದೆ ಎಂದು ಕಂಪನಿ ಸಮೂಹ ಸಿದ್ಧಾಂತ ಹೇಳುತ್ತದೆ. ಮಧ್ಯಸ್ಥಿಕೆ ಒಪ್ಪಂದವು ಸಹಿ ಹಾಕಿದ ಪಕ್ಷಕಾರರನ್ನು ಅದಕ್ಕೆ ಪರಸ್ಪರ ಬದ್ಧವಾಗಿರಿಸಲು ಉದ್ದೇಶಿಸುತ್ತದೆ ಎಂದು ತತ್ವ ಪರಿಗಣಿಸುತ್ತದೆ.

ಸಹಿ ಹಾಕದ ಪಕ್ಷಕಾರರು, ಸಹಿ ಹಾಕಿದವರೊಂದಿಗೆ ನಂಟು ಹೊಂದಿರುವುದು ಮತ್ತು ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿವುದರಿಂದಾಗಿ  ಮಧ್ಯಸ್ಥಿಕೆ ವಿವಾದಕ್ಕೆ ಅಪರಿಚಿತರೆಂದು ಪರಿಗಣಿಸಲಾಗುವುದಿಲ್ಲ ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಪಿ‌ ಎಸ್ ನರಸಿಂಹ, ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಸಾಂವಿಧಾನಿಕ ಪೀಠ ತೀರ್ಪು ನೀಡಿದೆ.

"ಸಹಿ ಹಾಕದವರೊಂದಿಗಿನ ಸಂಬಂಧ ಮತ್ತು ವಾಣಿಜ್ಯ ಕರ್ತವ್ಯಗಳನ್ನು ನಿರ್ವಹಿಸುವ ಮೂಲಕ ಸಹಿ ಹಾಕದವರು ಸಹಿ ಹಾಕಿದ ಪಕ್ಷಕಾರರಿಗೆ ಹೋಲಿಸಿದರೆ ವಿವಾದಕ್ಕೆ ಅವರು ಅಪರಿಚಿತರಲ್ಲ. ಜಿಒಸಿ (ಕಂಪನಿಗಳ ಸಮೂಹ ತತ್ವ) ಪಕ್ಷಕಾರರ ಪರಸ್ಪರ ಉದ್ದೇಶದ ಮೇಲೆ ಸ್ಥಾಪಿತವಾಗಿದೆ ... ಮಧ್ಯಸ್ಥಿಕೆ ಒಪ್ಪಂದಕ್ಕೆ ಸಹಿ ಹಾಕದವರನ್ನು ಹಿಡಿದಿಡಲು ಈ ತತ್ವ ಬಳಸಲಾಗುತ್ತದೆ, ಇದರಿಂದಾಗಿ ಅದು ಲಾಭ ಮತ್ತು ಹೊರೆಯನ್ನು ಹಂಚಿಕೊಳ್ಳುತ್ತದೆ" ಎಂದು ನ್ಯಾಯಾಲಯ ಹೇಳಿದೆ.

ಮಧ್ಯಸ್ಥಿಕೆ ಪ್ರಕ್ರಿಯೆಗಳಿಂದ ಉದ್ಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.

ಮಧ್ಯಸ್ಥಿಕೆಯು ಒಪ್ಪಂದದ ವಿಷಯವಾಗಿದ್ದು ಒಪ್ಪಿಗೆಯೇ ಪರಮೋಚ್ಛವಾದುದಾಗಿದೆ. ಒಬ್ಬರ ಒಪ್ಪಿಗೆಯಿಲ್ಲದೆ ಮಧ್ಯಸ್ಥಿಕೆಗೆ ತೊಡಗುವಂತೆ ಯಾರನ್ನೂ ಒತ್ತಾಯಿಸಲಾಗುವುದಿಲ್ಲ ಎಂದು ನ್ಯಾಯಾಲಯ ಒತ್ತಿಹೇಳಿತು.

ಮಧ್ಯಸ್ಥಿಕೆ ಒಪ್ಪಂದಕ್ಕೆ ಸಹಿ ಹಾಕದ ವ್ಯಕ್ತಿಯು ಸಹಿ ಹಾಕಿದವರೊಂದಿಗೆ ಕಾನೂನಾತ್ಮಕ ಸಂಬಂಧವನ್ನು ಹೊಂದುವ ಉದ್ದೇಶವನ್ನು ಹೊಂದಿದ್ದಾನೆಯೇ ಮತ್ತು ಮಧ್ಯಸ್ಥಿಕೆ ಒಪ್ಪಂದಕ್ಕೆ ಬದ್ಧನಾಗಿರಲು ಒಪ್ಪಿಕೊಂಡಿದ್ದಾನೆಯೇ ಎಂಬುದನ್ನು ನ್ಯಾಯಾಲಯಗಳು ನಿರ್ಧರಿಸಬೇಕು ಎಂದು ಅದು ಹೇಳಿದೆ.

ಮಧ್ಯಸ್ಥಿಕೆ ಮತ್ತು ಸಂಧಾನ ಕಾಯಿದೆಯ ಸೆಕ್ಷನ್ 7 ಎಯನ್ನು ಉಲ್ಲೇಖಿಸಿದ ನ್ಯಾಯಾಲಯ, ಮಧ್ಯಸ್ಥಿಕೆ ಎಂಬುದು ಒಪ್ಪಂದ ಆಧರಿತವಾಗಿದ್ದರೂ ಪಕ್ಷಗಳು ಸಹಿ ಮಾಡುವ ಅಗತ್ಯವಿಲ್ಲ ಎಂದು ಒತ್ತಿಹೇಳಿತು.

ಸಮತೋಲಿತ ವಿಧಾನಕ್ಕೆ ಕರೆ ನೀಡಿದ ನ್ಯಾಯಾಲಯ, ಮಧ್ಯಸ್ಥಿಕೆ ಒಪ್ಪಂದದಲ್ಲಿ ಯಾರನ್ನಾದರೂ ಸೇರಿಸದಿರುವ ಪಕ್ಷಕಾರರ ನಿರ್ಧಾರವನ್ನು ಬದಿಗಿಡಬಾರದು ಎಂದು ಒತ್ತಿಹೇಳಿತು. ಅದೇ ಸಮಯದಲ್ಲಿ, ನ್ಯಾಯಾಲಯ ತಮ್ಮ ನಡವಳಿಕೆಯ ಮೂಲಕ, ಮಧ್ಯಸ್ಥಿಕೆ ಒಪ್ಪಂದಕ್ಕೆ ಬದ್ಧರಾಗುವ ಉದ್ದೇಶವನ್ನು ಪ್ರದರ್ಶಿಸಿದ ವ್ಯಕ್ತಿಗಳನ್ನು ಹೊರಗಿಡದಿರುವ ಮಹತ್ವವನ್ನು ಎತ್ತಿ ತೋರಿಸಿತು.

ಆದರೂ, ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿಗಳು ರೂಪಿಸಿದ ತತ್ವವು ಪಕ್ಷಕಾರ ಕಂಪೆನಿ ಒಪ್ಪಂದಕ್ಕೆ ಬದ್ಧವಾಗಿದೆಯೇ ಎಂದು ನಿರ್ಧರಿಸಲು ಸಾಕಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಆದ್ದರಿಂದ, ಅದು ಮೊದಲು ಕಂಪನಿಗಳ ಸಮೂಹ ತತ್ವವನ್ನು ಸಾಬೀತುಪಡಿಸಲು ನ್ಯಾಯಾಲಯಗಳಿಗೆ ಕರೆ ನೀಡಿತು.

"ಜಿಒಸಿ ಸಮ್ಮತಿ ಆಧಾರಿತ ತತ್ವವಾಗಿದ್ದು, ಸಹಿ ಮಾಡಿದ ಮತ್ತು ಸಹಿ ಹಾಕದ ಇಬ್ಬರೂ ಮಧ್ಯಸ್ಥಿಕೆ ಒಪ್ಪಂದಕ್ಕೆ ಬದ್ಧರಾಗಿರಬೇಕು ಎಂಬುದನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ" ಎಂದು ಅದು ಹೇಳಿದೆ.

ಮಧ್ಯಸ್ಥಿಕೆ ಪ್ರಕ್ರಿಯೆಗಳಿಗೆ ಈ ತತ್ವದ ಅನ್ವಯವನ್ನು ಎತ್ತಿಹಿಡಿದ ನ್ಯಾಯಾಲಯ, ಪಕ್ಷಕಾರರ ವ್ಯಾಖ್ಯಾನವು ಒಂದೇ ಗುಂಪಿನ ಕಂಪನಿಗಳ ಭಾಗವಾಗಿರುವ ಸಹಿ ಮಾಡಿದ ಮತ್ತು ಸಹಿ ಮಾಡದ ಪಕ್ಷಕಾರರನ್ನು ಒಳಗೊಂಡಿದೆ ಎಂದು ಹೇಳಿದೆ.

ಆದ್ದರಿಂದ, ಸಹಿ ಹಾಕದ ಕೃತ್ಯವು ಅದೇ ಗುಂಪಿನ ಭಾಗವಾಗಿರುವ ಸಹಿ ಮಾಡದ ಕಂಪನಿಗಳನ್ನು ಕೂಡ ಒಪ್ಪಂದದ ಪಕ್ಷಕಾರರನ್ನಾಗಿ ಮಾಡಲಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Related Stories

No stories found.
Kannada Bar & Bench
kannada.barandbench.com