[ಚುಟುಕು] ನಿರೀಕ್ಷಣಾ ಜಾಮೀನು ಮನವಿಗಳ ವಿಚಾರಣೆಯ ನ್ಯಾಯಾಲಯವಾಗಿ ಬದಲಾದ ಸುಪ್ರೀಂ: ಸಿಜೆಐ ರಮಣ

CJI NV Ramana and Supreme Court
CJI NV Ramana and Supreme Court

ನಿರೀಕ್ಷಣಾ ಜಾಮೀನು ಕೋರಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗುತ್ತಿರುವ ಅಪಾರ ಮನವಿಗಳನ್ನು ಉಲ್ಲೇಖಿಸಿ ಸೋಮವಾರ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರು “ನಿರೀಕ್ಷಣಾ ಜಾಮೀನು ಮನವಿಗಳನ್ನು ಮಾತ್ರ ಆಲಿಸುವ ನ್ಯಾಯಾಲಯವಾಗಿ ಸುಪ್ರೀಂ ಬದಲಾಗಿದೆ” ಎಂದರು. ಕೊಲೆ ಯತ್ನ ಪ್ರಕರಣದಲ್ಲಿ ಬಿಜೆಪಿ ನಾಯಕ ನಿತೇಶ್‌ ರಾಣಾ ಜೊತೆ ಸಹ ಆರೋಪಿಯಾಗಿರುವ ಗೊತ್ಯಾ ಸಾವಂತ್‌ ಅವರಿಗೆ ನಿರೀಕ್ಷಣಾ ಜಾಮೀನು ಕೋರಿದ್ದ ಮನವಿಯ ತುರ್ತು ವಿಚಾರಣೆ ಕೋರಿಕೆಯ ಸಂದರ್ಭದಲ್ಲಿ ಸಿಜೆಐ ರಮಣ ನೇತೃತ್ವದ ಪೀಠವು ಮೇಲಿನಂತೆ ಹೇಳಿತು.

ಹೆಚ್ಚಿನ ವಿವರಗಳಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com