ಮೊಬೈಲ್ ಫೋನ್ ಮೂಲಕ ಅರ್ಜಿದಾರೆಯ ಅಹವಾಲು ಕೇಳಿದ ಸುಪ್ರೀಂ ಕೋರ್ಟ್

ಪ್ರಕರಣ ಸಂಬಂಧ ಯಾವುದೇ ಪರಿಹಾರ ನೀಡಲು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ನಿರಾಕರಿಸಿತು. ಅರ್ಜಿದಾರೆಯು ದೂರವಾಣಿ ಮುಖೇನ ವಿಚಾರಣೆಯಲ್ಲಿ ಪಾಲ್ಗೊಂಡರು.
ಮೊಬೈಲ್ ಫೋನ್ ಮೂಲಕ ಅರ್ಜಿದಾರೆಯ ಅಹವಾಲು ಕೇಳಿದ ಸುಪ್ರೀಂ ಕೋರ್ಟ್
A1

ಅರ್ಜಿದಾರೆಯೊಬ್ಬರ ಅಹವಾಲನ್ನು ಸುಪ್ರೀಂ ಕೋರ್ಟ್‌ ಮೊಬೈಲ್‌ ಫೋನ್‌ ಮೂಲಕ ಬುಧವಾರ ಆಲಿಸಿತು.

ಪ್ರಕರಣ ಸಂಬಂಧ ಯಾವುದೇ ಪರಿಹಾರ ನೀಡಲು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್  ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ನಿರಾಕರಿಸಿತು. ಅರ್ಜಿದಾರೆಯು ದೂರವಾಣಿ ಮುಖೇನ ವಿಚಾರಣೆಯಲ್ಲಿ ಪಾಲ್ಗೊಂಡರು.

Also Read
ಡಿಜಿಟಲ್‌ ಸಹಿ ಹೊಂದಿರುವ ತೀರ್ಪಿನ ಪ್ರತಿಗಳು ಸುಲಭವಾಗಿ ಸಿಗಬೇಕು: ಸುಪ್ರೀಂ ಕೋರ್ಟ್‌

ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ ಹಾಜರಾಗದ ತಮ್ಮ ಪುತ್ರಿಗೆ ವೈದ್ಯಕೀಯ ಸೀಟು ನೀಡುವಂತೆ ಕೋರಿ ಅರ್ಜಿದಾರರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.  ಉದ್ಯೋಗಿಗಳ ರಾಜ್ಯ ವಿಮಾ ನಿಗಮದ ಸಂಸ್ಥೆಯಲ್ಲಿ ವಿಮಾದಾರರ ಕೋಟಾದಡಿ ತಮ್ಮ ಪುತ್ರಿಗೆ ಪ್ರವೇಶ ಪಡೆಯಲು ಅವರು ಬಯಸಿದ್ದರು.

ಅರ್ಜಿದಾರೆಯ ವಾದವನ್ನು ದೂರವಾಣಿ ಮೂಲಕ ಆಲಿಸಿದ ಪೀಠ ನೀಟ್‌ ಪರೀಕ್ಷೆಗೆ ಹಾಜರಾಗದ ಕಾರಣ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೇಳಿತು.

ಪರೀಕ್ಷೆಯಲ್ಲಿ ಹಾಜರಾದ ಬಳಿಕ ಸುಪ್ರೀಂ ಕೋರ್ಟ್‌ ಅಥವಾ ಸಂಬಂಧಪಟ್ಟ ಹೈಕೋರ್ಟ್‌ಗಳಿಗೆ ತೆರಳುವ ಸ್ವಾತಂತ್ರ್ಯವನ್ನು ಅರ್ಜಿದಾರರಿಗೆ ಕಲ್ಪಿಸಿದ ಪೀಠ ನಂತರ ಅರ್ಜಿಯನ್ನು ವಿಲೇವಾರಿ ಮಾಡಿತು.

Related Stories

No stories found.
Kannada Bar & Bench
kannada.barandbench.com