ಎಂಟರಿಂದ ಹತ್ತು ದಿನಗಳಲ್ಲಿ ಭೌತಿಕ ವಿಚಾರಣೆ ಆರಂಭದ ಸುಳಿವು ನೀಡಿದ ಸುಪ್ರೀಂಕೋರ್ಟ್

ಇಂಡಿಯನ್ ಬ್ರಾಡ್ಕಾಸ್ಟಿಂಗ್ ಫೌಂಡೇಶನ್ (ಐಬಿಎಫ್) ಸಲ್ಲಿಸಿದ ಅರ್ಜಿಯ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಈ ಬಗ್ಗೆ ಪ್ರಸ್ತಾಪಿಸಿದರು.
ಎಂಟರಿಂದ ಹತ್ತು ದಿನಗಳಲ್ಲಿ ಭೌತಿಕ ವಿಚಾರಣೆ ಆರಂಭದ ಸುಳಿವು ನೀಡಿದ ಸುಪ್ರೀಂಕೋರ್ಟ್

ಕೋವಿಡ್‌ ಎರಡನೇ ಅಲೆಯ ಬಳಿಕ ಸ್ಥಗಿತಗೊಂಡಿದ್ದ ಭೌತಿಕ ವಿಚಾರಣೆಯನ್ನು 8 ರಿಂದ 10 ದಿನಗಳಲ್ಲಿ ಪುನರಾರಂಭಿಸುವ ಸುಳಿವನ್ನು ಸುಪ್ರೀಂಕೋರ್ಟ್‌ ನೀಡಿದೆ.

ಇಂಡಿಯನ್ ಬ್ರಾಡ್ಕಾಸ್ಟಿಂಗ್ ಫೌಂಡೇಶನ್ (ಐಬಿಎಫ್) ಸಲ್ಲಿಸಿದ ಅರ್ಜಿಯ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಹೊಸ ದರದ ಸಾಂವಿಧಾನಿಕತೆಯನ್ನು ಎತ್ತಿ ಹಿಡಿದಿದ್ದ ಬಾಂಬೆ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಐಬಿಎಫ್‌ ಅರ್ಜಿ ಸಲ್ಲಿಸಿತ್ತು.

Also Read
ವರ್ಚುವಲ್ ಬದಲು ಭೌತಿಕ ವಿಚಾರಣೆ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದ ರಿಜಿಜು

Related Stories

No stories found.
Kannada Bar & Bench
kannada.barandbench.com