ಭೌತಿಕ ವಿಚಾರಣೆ ಕುರಿತು ಸುತ್ತೋಲೆ ಹೊರಡಿಸಿದ ಸುಪ್ರೀಂ ಕೋರ್ಟ್‌

ವರ್ಚುವಲ್‌ ವಿಚಾರಣೆಯ ಆಯ್ಕೆಯನ್ನು ಮಿಸಲೇನಿಯಸ್‌ ವಿಚಾರಣಾ ದಿನಗಳಾದ ಸೋಮವಾರ ಮತ್ತು ಶುಕ್ರವಾರದಂದು ನೀಡಲಾಗಿದೆ.
ಭೌತಿಕ ವಿಚಾರಣೆ ಕುರಿತು ಸುತ್ತೋಲೆ ಹೊರಡಿಸಿದ ಸುಪ್ರೀಂ ಕೋರ್ಟ್‌

ಭೌತಿಕ ವಿಚಾರಣೆಯನ್ನು ನಡೆಸುವ ಬಗ್ಗೆ ಸುಪ್ರೀಂ ಕೋರ್ಟ್‌ ಅಧಿಕೃತವಾಗಿ ಸುತ್ತೋಲೆ ಹೊರಡಿಸಿದ್ದು ಸೋಮವಾರ, ಏಪ್ರಿಲ್‌ 4ರಿಂದ ಭೌತಿಕ ವಿಚಾರಣೆಗಳು ಅರಂಭವಾಗಲಿವೆ.

ಇದೇ ವೇಳೆ, ಮಿಸಲೇನಿಯಸ್‌ ವಿಚಾರಣಾ ದಿನಗಳಾದ ಸೋಮವಾರ ಮತ್ತು ಶುಕ್ರವಾರಗಳಂದು ನ್ಯಾಯಾಲಯವು ವರ್ಚುವಲ್‌ ವಿಚಾರಣಾ ಆಯ್ಕೆಗಳನ್ನು ದಾವೆದಾರರಿಗೆ ನೀಡಿದೆ.

ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಭೌತಿಕ ವಿಚಾರಣೆಯಿಂದ ವಿಮುಖವಾಗಿತ್ತು. ಈ ಕುರಿತು ಸುಪ್ರೀಂ ಕೋರ್ಟ್‌ ಪ್ರಮಾಣಿತ ಕಾರ್ಯಾಚಾರಣಾ ವಿಧಾನದ (ಎಸ್‌ಒಪಿ) ಕುರಿತಾದ ಅಧಿಸೂಚನೆಗಳನ್ನು ಅಕ್ಟೋಬರ್‌ 27, 2021, ಜನವರಿ 21, 2022ರಂದು ಹೊರಡಿಸಿತ್ತು. ಇದೀಗ ಈ ಎಸ್‌ಒಪಿಯಲ್ಲಿ ಮಾರ್ಪಾಡು ಮಾಡಿ ಸುತ್ತೋಲೆ ಹೊರಡಿಸಲಾಗಿದೆ.

ಸೋಮವಾರ ಮತ್ತು ಶುಕ್ರವಾರಗಳಂದು ವರ್ಚುವಲ್‌ ವಿಧಾನದಲ್ಲಿ ವಿಚಾರಣೆ ಹಾಜರಾಗಲು ಸಂಬಂಧಪಟ್ಟ ಅಡ್ವೊಕೇಟ್‌ ಆನ್ ರೆಕಾರ್ಡ್‌ ಅವರು ನಿರ್ದಿಷ್ಟ ದಿನದ ವಿಚಾರಣಾ ಪಟ್ಟಿ ಲಭ್ಯವಾದ ನಂತರ ಆನ್‌ಲೈನ್‌ಗಾಗಿ ಮನವಿ ಸಲ್ಲಿಕೆ ಮಾಡಬೇಕು.

ಪ್ರಸ್ತುತ ಸುಪ್ರೀಂ ಕೋರ್ಟ್‌ ಮಿಸಲೇನಿಯಸ್‌ ಪ್ರಕರಣ ರಹಿತ ದಿನಗಳಾದ ಮಂಗಳವಾರ, ಬುಧವಾರ ಮತ್ತು ಗುರುವಾರಗಳಂದು ಭೌತಿಕವಾಗಿ ವಿಚಾರಣೆ ನಡೆಸುತ್ತಿದೆ. ಮಿಸಲೇನಿಯಸ್‌ ದಿನಗಳಾದ ಸೋಮವಾರ ಮತ್ತು ಶುಕ್ರವಾರಗಳಂದು ಕಡ್ಡಾಯವಾಗಿ ವಿಡಿಯೋ ಕಾನ್ಫೆರೆನ್ಸ್‌ ಮೂಲಕ (ವರ್ಚುವಲ್‌ ವಿಧಾನ) ವಿಚಾರಣೆಯನ್ನು ನಡೆಸುತ್ತಿದೆ.

ಹೆಚ್ಚಿನ ವಿವರಗಳಿಗೆ ಸುತ್ತೋಲೆಯನ್ನು ಗಮನಿಸಿ:

Attachment
PDF
SOP_on_Physical_Hearing.pdf
Preview

Related Stories

No stories found.
Kannada Bar & Bench
kannada.barandbench.com