ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕ್ಷೇತ್ರದಲ್ಲಿ ಲಿಂಗ ವೈವಿಧ್ಯತೆಯ ಕೊರತೆ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹಿಮಾ ಕೊಹ್ಲಿ

‘ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ದಿನʼದ ಅಂಗವಾಗಿ ಶಾರ್ದೂಲ್ ಅಮರಚಂದ್ ಮಂಗಲದಾಸ್ ಕಾನೂನು ಸಂಸ್ಥೆ ಸಹಯೋಗದಲ್ಲಿ ಹೈದರಾಬಾದ್ನ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾ. ಕೊಹ್ಲಿ ಮಾತನಾಡಿದರು.
Justice Hima Kohli
Justice Hima Kohli

ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕ್ಷೇತ್ರದಲ್ಲಿ ಲಿಂಗ ವೈವಿಧ್ಯ ಸೇರಿದಂತೆ ವೈವಿಧ್ಯತೆಯ ಕೊರತೆ ಇದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹಿಮಾ ಕೊಹ್ಲಿ ಈಚೆಗೆ ಹೇಳಿದ್ದಾರೆ.

ವ್ಯಾಜ್ಯ ಪರಿಹಾರ ಕ್ಷೇತ್ರದಲ್ಲಿ ಲಿಂಗತ್ವ ಒಳಗೊಳ್ಳುವಿಕೆ ಮತ್ತು ನ್ಯಾಯಸಮ್ಮತತೆ ಉತ್ತೇಜಿಸಲು ಮಧ್ಯಸ್ಥಿಕೆದಾರರಲ್ಲಿ ಲಿಂಗ ವೈವಿಧ್ಯತೆ ಅತ್ಯಗತ್ಯ ಎಂದು ನ್ಯಾ. ಕೊಹ್ಲಿ ಹೇಳಿದರು.

‘ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ದಿನʼದ ಅಂಗವಾಗಿ ಶಾರ್ದೂಲ್ ಅಮರಚಂದ್ ಮಂಗಲದಾಸ್ ಕಾನೂನು ಸಂಸ್ಥೆ ಸಹಯೋಗದಲ್ಲಿ ಹೈದರಾಬಾದ್‌ನ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Also Read
ಸರಾಫ್- ಲೂತ್ರಾ ಮಧ್ಯಸ್ಥಿಕೆ ವ್ಯಾಜ್ಯ: ಎಲ್ಲಾ ಮೂವರು ಮಧ್ಯಸ್ಥಿಕೆದಾರರ ರಾಜೀನಾಮೆ

ಲಿಂಗತ್ವ ವೈವಿಧ್ಯ ಕುರಿತಾದ ಅಂತರ್‌ ಸಂಸ್ಥೀಯ ಟಾಸ್ಕ್‌ಫೋರ್ಸ್‌ ವರದಿ ಉಲ್ಲೇಖಿಸಿ ಮಾತನಾಡಿದ ಅವರು “ 145 ಹೂಡಿಕೆ ಒಪ್ಪಂದದ ಮಧ್ಯಸ್ಥಿಕೆದಾರರಲ್ಲಿ ಐವರು ಮಹಿಳೆಯರು  (3.5%) ಮಾತ್ರ ದ್ದು ಎರಡು ಅಥವಾ ಅದಕ್ಕಿಂತ ಹೆಚ್ಚು ಮಹಿಳೆಯರನ್ನು ಒಳಗೊಂಡ ನ್ಯಾಯಮಂಡಳಿಗಳೇ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಆದರೂ ಇತ್ತೀಚಿನ ದಿನಗಳಲ್ಲಿ ಮಹಿಳಾ ಮಧ್ಯಸ್ಥಿಕೆದಾರರನ್ನು ನೇಮಿಸುವಲ್ಲಿ ಗಮನಾರ್ಹ ಸುಧಾರಣೆ ಕಂಡುಬರುತ್ತಿದೆ. ಎಂದ ಅವರು ಮಧ್ಯಸ್ಥಿಕೆ ಕ್ಷೇತ್ರದಲ್ಲಿ ಮಹಿಳೆಯರಿಗೆ ಉತ್ತೇಜನ ನೀಡಲು ಇನ್ನೂ ಹಲವು ಮಾರ್ಗಗಳಿವೆ.  ಅಂತಹ ಒಂದು ಮಾರ್ಗವೆಂದರೆ ಮಧ್ಯಸ್ಥಿಕೆ ಸಂಸ್ಥೆಗಳು ಪ್ರಮುಖ ಕ್ಷೇತ್ರಗಳಲ್ಲಿ ವ್ಯವಸ್ಥಿತ ಮತ್ತು ಸಹಯೋಗದ ಕಾರ್ಯತಂತ್ರ ಅಭಿವೃದ್ಧಿಪಡಿಸುವುದಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

Related Stories

No stories found.
Kannada Bar & Bench
kannada.barandbench.com