ಯೂಟ್ಯೂಬ್ ಚಾನೆಲ್ ಆರಂಭಿಸಿದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್

'Justice Nariman Official Channel' ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ನ್ಯಾ. ರೋಹಿಂಟನ್‌ ನಾರಿಮನ್‌ ಅವರ ಎಲ್ಲ ಭಾಷಣಗಳು ಲಭ್ಯ ಇವೆ.
Justice (retd). Rohinton Nariman
Justice (retd). Rohinton Nariman

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಅವರ ಭಾಷಣಗಳು ಈಗ ಅವರ ಅಧಿಕೃತ ಯೂಟ್ಯೂಬ್ ಚಾನೆಲ್ 'Justice Nariman Official Channel' ಲಭಿಸುತ್ತಿವೆ.

ನ್ಯಾ. ನಾರಿಮನ್‌ ಅವರ ಕನಸಿನ ಕೂಸಾದ ಈ ಯೂಟ್ಯೂಬ್‌ ಚಾನೆಲ್‌ನ ಪ್ರಸಾರ ಏಪ್ರಿಲ್ 16 ರಿಂದ ಆರಂಭವಾಗಿದೆ. ನ್ಯಾ. ನಾರಿಮನ್‌ ಮತ್ತು ಅವರ ತಂಡ ಚಾನೆಲ್ ನಿರ್ವಹಣೆ ಮಾಡುತ್ತಿದೆ.

Also Read
ನ್ಯಾಯವಾದಿ ಸಮುದಾಯದಿಂದ ಸುಪ್ರೀಂ ಕೋರ್ಟ್‌ಗೆ ನೇರ ನೇಮಕಾತಿ ಮಾಡಲು ಸೂಕ್ತ ಸಮಯ: ನಿವೃತ್ತ ನ್ಯಾ. ರೋಹಿಂಟನ್‌ ನಾರಿಮನ್

ಕಾನೂನು, ಇತಿಹಾಸ, ಧರ್ಮ, ಸಂಗೀತ ಮತ್ತು ಇತರ ಹಲವು ವಿಷಯಗಳ ಕುರಿತು ನ್ಯಾ. ನಾರಿಮನ್‌ ಅವರು ನೀಡಿರುವ ಉಪನ್ಯಾಸಗಳ 48 ವೀಡಿಯೊಗಳು ಯೂಟ್ಯೂಬ್‌ ಚಾನೆಲ್‌ನಲ್ಲಿ ದೊರೆಯುತ್ತಿವೆ.

ಅವರ ಹೊಸ ಭಾಷಣಗಳು ಕೂಡ ಚಾನೆಲ್‌ನಲ್ಲಿ ಅಪ್‌ಲೋಡ್‌ ಆಗಲಿವೆ.

ನ್ಯಾ. ನಾರಿಮನ್‌ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಲಾದ ಭಾಷಣವೊಂದರ ಲಿಂಕ್‌:

Related Stories

No stories found.
Kannada Bar & Bench
kannada.barandbench.com