Tiger
Tiger

ವಾರಾಂತ್ಯದ ರಜೆ: ರಣಥಂಬೋರ್‌ಗೆ ಎರಡು ದಿನಗಳ ಪ್ರವಾಸ ಕೈಗೊಂಡ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು

ಮೂಲಗಳ ಪ್ರಕಾರ, ಶುಕ್ರವಾರ ರಾತ್ರಿ ಮೂರು ಬಸ್ಸುಗಳಲ್ಲಿ ದೆಹಲಿಯಿಂದ ಹೊರಟ ನ್ಯಾಯಮೂರ್ತಿಗಳು ಇಂದು (ಸೆಪ್ಟೆಂಬರ್ 14) ಹಿಂತಿರುಗಲಿದ್ದಾರೆ.
Published on

ಎರಡು ದಿನಗಳ ಪ್ರವಾಸಕ್ಕಾಗಿ ವಾರಾಂತ್ಯದ ರಜೆ ಪಡೆದಿರುವ ಸುಪ್ರೀಂ ಕೋರ್ಟ್ನ ಇಪ್ಪತ್ತು ನ್ಯಾಯಮೂರ್ತಿಗಳು ರಾಜಸ್ಥಾನದಲ್ಲಿರುವ ರಣಥಂಬೋರ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದಾರೆ.

ಮೂಲಗಳ ಪ್ರಕಾರ, ಶುಕ್ರವಾರ ರಾತ್ರಿ ಮೂರು ಬಸ್ಗಳಲ್ಲಿ ದೆಹಲಿಯಿಂದ ಹೊರಟ ನ್ಯಾಯಮೂರ್ತಿಗಳು ಇಂದು (ಸೆಪ್ಟೆಂಬರ್ 14) ಹಿಂತಿರುಗಲಿದ್ದಾರೆ.

ರಾಜಸ್ಥಾನ ಹೈಕೋರ್ಟ್, ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಪ್ರವಾಸಕ್ಕೆ ಅಗತ್ಯವಾದ ವ್ಯವಸ್ಥೆ ಮಾಡಿದೆ.

ಈ ವರ್ಷದ ಆರಂಭದಲ್ಲಿ, ಮಾಜಿನಿವೃತ್ತ ಸಂಜೀವ್ ಖನ್ನಾ ಅವರು 24 ನ್ಯಾಯಮೂರ್ತಿಗಳೊಂದಿಗೆ ವಿಶಾಖಪಟ್ಟಣಕ್ಕೆ ತೆರಳಿ ಇದೇ ರೀತಿಯ ಎರಡು ದಿನಗಳ ವಿಶ್ರಾಂತಿ ಕೂಟ ಆಯೋಜಿಸಿದ್ದರು.

Kannada Bar & Bench
kannada.barandbench.com