ಆನ್‌ಲೈನ್ ಆರ್‌ಟಿಐ ಪೋರ್ಟಲ್ ಆರಂಭಿಸಿದ ಸುಪ್ರೀಂ ಕೋರ್ಟ್

ಆನ್‌ಲೈನ್ ಆರ್‌ಟಿಐ ಪೋರ್ಟಲ್ ಆರಂಭಿಸಿದ ಸುಪ್ರೀಂ ಕೋರ್ಟ್

ಆರ್‌ಟಿಐ ಅರ್ಜಿ, ಪ್ರಥಮ ಮೇಲ್ಮನವಿಗಳನ್ನು ಸಲ್ಲಿಸಲು ಮತ್ತು ಪ್ರತಿ ಮಾಡಿಕೊಳ್ಳುವ ಶುಲ್ಕ, ಇತ್ಯಾದಿಗಳಿಗೆ ಪಾವತಿ ಮಾಡಲು ಇದನ್ನು ಬಳಸಬಹುದಾಗಿದ್ದು ಭಾರತೀಯ ನಾಗರಿಕರಿಗೆ ಮಾತ್ರ ಈ ಸಂಬಂಧ ಅವಕಾಶ ಕಲ್ಪಿಸಲಾಗಿದೆ.

ಸುಪ್ರಿಂ ಕೋರ್ಟ್‌ ಇಂದಿನಿಂದ (ಗುರುವಾರ) ತನ್ನ ಆನ್‌ಲೈನ್‌ ಮಾಹಿತಿ ಹಕ್ಕು ಪೋರ್ಟಲ್‌ ಆರಂಭಿಸಿದ್ದು ಅದನ್ನು ಬಳಸಿ ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ ಕಾಯಿದೆ) ಅಡಿಯಲ್ಲಿ ನಾಗರಿಕರು ಅರ್ಜಿ ಸಲ್ಲಿಸಬಹುದಾಗಿದೆ.

ಪೋರ್ಟಲ್‌ ಮಾಹಿತಿಗಾಗಿ ಈ ಲಿಂಕ್‌ ಇಲ್ಲಿ ಕ್ಲಿಕ್ಕಿಸಿ.

ಇಂದು ಬೆಳಗ್ಗೆ 10:30 ಕ್ಕೆ ವಿಚಾರಣೆ  ಪ್ರಾರಂಭಿಸುವ ಮೊದಲು, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಆನ್‌ಲೈನ್ ಆರ್‌ಟಿಐ ಪೋರ್ಟಲ್ ಇನ್ನು ಕೆಲ ಹೊತ್ತಿನಲ್ಲಿ ಸಕ್ರಿಯವಾಗಲಿದೆ ಎಂದು ಘೋಷಿಸಿದರು. ತಾತ್ಕಾಲಿಕ ಸಮಸ್ಯೆಗಳಿದ್ದಲ್ಲಿ ನಾವು ಅದನ್ನು ಪರಿಶೀಲಿಸಿ ಸರಿಪಡಿಸುತ್ತೇವೆ”  ಎಂದು ಅವರು ಸ್ಪಷ್ಟಪಡಿಸಿದರು.  ಕಳೆದ ಮಂಗಳವಾರ ಪೋರ್ಟಲ್‌ನ ಪರೀಕ್ಷಾರ್ಥ ಆವೃತ್ತಿಯನ್ನು ನ್ಯಾಯಾಲಯ ಸಕ್ರಿಯಗೊಳಿಸಿತ್ತು.

ಆರ್‌ಟಿಐ ಅರ್ಜಿ, ಪ್ರಥಮ ಮೇಲ್ಮನವಿಗಳನ್ನು ಸಲ್ಲಿಸಲು ಮತ್ತು ಪ್ರತಿ ಮಾಡಿಕೊಳ್ಳುವ ಶುಲ್ಕ, ಇತ್ಯಾದಿಗಳಿಗೆ ಪಾವತಿ ಮಾಡಲು ಇದನ್ನು ಬಳಸಬಹುದಾಗಿದ್ದು ಭಾರತೀಯ ನಾಗರಿಕರಿಗೆ ಮಾತ್ರ ಈ ಸಂಬಂಧ ಅವಕಾಶ ಕಲ್ಪಿಸಲಾಗಿದೆ.

ಅರ್ಜಿದಾರರು ನಿಗದಿತ ಶುಲ್ಕವನ್ನು ಇಂಟರ್ನೆಟ್ ಬ್ಯಾಂಕಿಂಗ್, ಮಾಸ್ಟರ್/ವೀಸಾ ಅಥವಾ ಯುಪಿಐನ ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಪಾವತಿಸಬಹುದು.ಪ್ರತಿ ಆರ್‌ಟಿಐ ಅರ್ಜಿ ಶುಲ್ಕ ₹10.

ಇದಕ್ಕೂ ಮುನ್ನ, ಸುಪ್ರೀಂ ಕೋರ್ಟ್‌ಗೆ ಸಂಬಂಧಿಸಿದಂತೆ ಆರ್‌ಟಿಐ ಅರ್ಜಿಗಳನ್ನು ಭೌತಿಕವಾಗಿ ಸಲ್ಲಿಸಬೇಕಾಗಿತ್ತು.ನ್ಯಾಯಾಲಯಕ್ಕೆ ಆನ್‌ಲೈನ್‌ ಆರ್‌ಟಿಐ ಪೋರ್ಟಲ್‌ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಈ ಹಿಂದೆ ವಿವಿಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು (ಪಿಐಎಲ್) ಸಲ್ಲಿಸಲಾಗಿತ್ತು.

ಕಳೆದ ವಾರ ಅಂತಹ ಒಂದು ಮನವಿಯ ವಿಚಾರಣೆಯ ಸಂದರ್ಭದಲ್ಲಿ, ಸಿಜೆಐ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರಿದ್ದ ಪೀಠ ಶೀಘ್ರದಲ್ಲೇ ಪೋರ್ಟಲ್‌ಗೆ ಚಾಲನೆ ನೀಡಲಾಗುವುದು ಎಂದು ಹೇಳಿತ್ತು.

Kannada Bar & Bench
kannada.barandbench.com