ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಗೋವಿಂದ ದಾಸರಿ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ, ದರೋಡೆ: ಪ್ರಕರಣ ದಾಖಲು

ಇಬ್ಬರು ಆರೋಪಿಗಳ ಪೈಕಿ ಒಬ್ಬ ದಾಸರಿ ಅವರ ಫೋನ್‌ ಕಸಿದುಕೊಂಡಿದ್ದು, ಇನ್ನೊಬ್ಬನನ್ನು ದಾಸರಿ ಹಿಡಿದುಕೊಂಡಿದ್ದರು. ಆತನ ನೆರವಿಗೆ ಮತ್ತೊಬ್ಬ ಆರೋಪಿ ಬಂದಿದ್ದು, ಇಬ್ಬರೂ ದಾಸರಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
Lawyers
LawyersImage for representational purpose
Published on

ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಗೋವಿಂದ ದಾಸರಿ ಅವರ ಮೇಲೆ ದುಷ್ಕರ್ಮಿಗಳು ಬೆಂಗಳೂರಿನಲ್ಲಿ ಜೂನ್‌ 27ರಂದು ಹಲ್ಲೆ ನಡೆಸಿ, ದರೋಡೆ ನಡೆಸಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಜಾಲಹಳ್ಳಿ ಮೆಟ್ರೊ ನಿಲ್ದಾಣದಿಂದ ತಮ್ಮ ಅಪಾರ್ಟ್‌ಮೆಂಟ್‌ಗೆ ಹಿಂದಿರುಗುವ ವೇಳೆ ರಾತ್ರಿ 9.15ರಿಂದ 9.45ರ ವೇಳೆಯಲ್ಲಿ ಘಟನೆ ನಡೆದಿದೆ. ದಾಸರಿ ಅವರು ಒಬ್ಬ ಆರೋಪಿಯನ್ನು ಹಿಡಿದಿದ್ದು, ಮತ್ತೊಬ್ಬ ದಾಸರಿ ಅವರ ಫೋನ್‌ ಮತ್ತು 3 ಸಾವಿರ ರೂಪಾಯಿ ಕಸಿದುಕೊಂಡು ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.

ಇಬ್ಬರು ಆರೋಪಿಗಳ ಪೈಕಿ ಒಬ್ಬ ದಾಸರಿ ಅವರ ಫೋನ್‌ ಕಸಿದುಕೊಂಡ. ಈ ವೇಳೆ ದಾಸರಿ ಅವನನ್ನು ಹಿಡಿದುಕೊಂಡರು. ಈ ಸಂದರ್ಭದಲ್ಲಿ ಮತ್ತೊಬ್ಬ ಆರೋಪಿಯು ದಾಸರಿ ಅವರ ಮೇಲೆ ದಾಳಿ ಮಾಡಿದ. ಇಬ್ಬರೂ ಸೇರಿ ದಾಸರಿಯವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಸ್ಥಳದಲ್ಲಿದ್ದ ಕೆಲವರ ಸಹಾಯದಿಂದ ಒಬ್ಬನನ್ನು ದಾಸರಿ ಹಿಡಿದಿದ್ದರು. ಸ್ಥಳಕ್ಕೆ ಧಾವಿಸಿದ ಸಮೀಪದಲ್ಲೇ ಇದ್ದ ಹೊಯ್ಸಳ ಪೆಟ್ರೋಲಿಂಗ್‌ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದರು.

ಪೊಲೀಸರ ತನಿಖೆಯಿಂದ ಆರೋಪಿಗಳು ಕಳ್ಳತನವನ್ನು ಕಾಯಕ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಪ್ರಕರಣದ ಬೆನ್ನಿಗೆ ಆರೋಪಿಗಳಿಬ್ಬರ ವಿರುದ್ಧ ದರೋಡೆ, ಕೊಲೆ ಯತ್ನ ಹಾಗೂ ಗಂಭೀರ ಹಲ್ಲೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

Kannada Bar & Bench
kannada.barandbench.com