ಸುಪ್ರೀಂ ಕೋರ್ಟ್‌ನ ಬೇಸಿಗೆಯ ಭಾಗಶಃ ಕೆಲಸದ ದಿನಗಳು: 21 ಪೀಠಗಳ ಕಾರ್ಯ ನಿರ್ವಹಣೆ

ಮೊದಲು 'ಬೇಸಿಗೆ ರಜೆ' ಎಂದು ಉಲ್ಲೇಖಿಸಲಾಗಿದ್ದ ದಿನವನ್ನು 'ಭಾಗಶಃ ಕೆಲಸದ ದಿನಗಳು' ಎಂದು 2025 ರ ಸುಪ್ರೀಂ ಕೋರ್ಟ್ ಕ್ಯಾಲೆಂಡರ್‌ನಲ್ಲಿ ಮರುನಾಮಕರಣ ಮಾಡಲಾಗಿದೆ.
Supreme Court
Supreme Court
Published on

ಬೇಸಿಗೆಯ ಮೇ 26 ರಿಂದ ಜುಲೈ 13, 2025ರ ವರೆಗಿನ ಅವಧಿಯಲ್ಲಿ ಭಾಗಶಃ ಕೆಲಸದ ದಿನಗಳಂದು ವಿಚಾರಣೆ ನಡೆಸಬೇಕಾದ ಪೀಠಗಳ ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.

ಮೊದಲು 'ಬೇಸಿಗೆ ರಜೆ' ಎಂದು ಉಲ್ಲೇಖಿಸಲಾಗಿದ್ದ ಅವಧಿಯನ್ನು 'ಭಾಗಶಃ ಕೆಲಸದ ದಿನಗಳು' ಎಂದು 2025 ರ ಸುಪ್ರೀಂ ಕೋರ್ಟ್ ಕ್ಯಾಲೆಂಡರ್‌ನಲ್ಲಿ ಮರುನಾಮಕರಣ ಮಾಡಲಾಗಿದೆ.

ಈ ಅವಧಿಯಲ್ಲಿ ಪ್ರಕರಣಗಳನ್ನು ಆಲಿಸಲು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಅವರು ಈ ಕೆಳಗಿನ 21 ಪೀಠಗಳು ಕಾರ್ಯ ನಿರ್ವಹಿಸುವಂತೆ ಸೂಚಿಸಿದ್ದಾರೆ:

Also Read
ಕರ್ನಾಟಕ ಹೈಕೋರ್ಟ್‌ಗೆ ಮೇ 5ರಿಂದ ಮೇ 31ರವರೆಗೆ ಬೇಸಿಗೆ ರಜೆ; 8 ದಿನ ರಜಾಕಾಲೀನ ಪೀಠಗಳಿಂದ ವಿಚಾರಣೆ

ಮೇ 26ರಿಂದ ಜೂನ್ 1ರವರೆಗೆ (5 ಪೀಠಗಳು)

ಸಿಜೆಐ ಬಿ ಆರ್‌ ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸೀಹ್‌

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ದೀಪಂಕರ್ ದತ್ತಾ

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂಜಯ್ ಕುಮಾರ್

ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ಅರವಿಂದ್ ಕುಮಾರ್

ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ

 ಜೂನ್ 2 ರಿಂದ ಜೂನ್ 8 (3 ಪೀಠಗಳು)

ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಸತೀಶ್ ಚಂದ್ರ ಶರ್ಮಾ

ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಎಸ್‌ ವಿ ಎನ್ ಭಟ್ಟಿ

ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್‌

ಜೂನ್ 9 ರಿಂದ ಜೂನ್ 15 (2 ಪೀಠಗಳು)

ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಮನಮೋಹನ್

ನ್ಯಾಯಮೂರ್ತಿಗಳಾದ ಎಸ್ ವಿ ಎನ್ ಭಟ್ಟಿ ಮತ್ತು ಪಿ ಬಿ  ವರಾಳೆ

ಜೂನ್ 16ರಿಂದ ಜೂನ್ 22 (2 ಪೀಠಗಳು)

ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಮನಮೋಹನ್

ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ಪಿಬಿ ವರಾಳೆ

ಜೂನ್ 23 ರಿಂದ ಜೂನ್ 29 (3 ಪೀಠಗಳು)

ನ್ಯಾಯಮೂರ್ತಿಗಳಾದ ಕೆ ವಿ ವಿಶ್ವನಾಥನ್ ಮತ್ತು ಎನ್ ಕೋಟೀಶ್ವರ್ ಸಿಂಗ್

ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಕೆ ವಿನೋದ್ ಚಂದ್ರನ್

ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ಜೊಯ್‌ಮಲ್ಯ ಬಾಗ್ಚಿ

ಜೂನ್ 30 ರಿಂದ ಜುಲೈ 6 (3 ಪೀಠಗಳು)

ನ್ಯಾಯಮೂರ್ತಿಗಳಾದ ಎಂ ಎಂ ಸುಂದ್ರೇಶ್ ಮತ್ತು ಕೆ ವಿನೋದ್ ಚಂದ್ರನ್

ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಆರ್ ಮಹಾದೇವನ್

ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಎನ್ ಕೋಟೀಶ್ವರ್ ಸಿಂಗ್

ಜುಲೈ 7 ರಿಂದ ಜುಲೈ 13 (3 ಪೀಠಗಳು)

ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೊಯ್‌ಮಲ್ಯ ಬಾಗ್ಚಿ

ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್‌ ಮತ್ತು ಕೆ ವಿ ವಿಶ್ವನಾಥನ್

ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಆರ್ ಮಹಾದೇವನ್

Also Read
ಇಂದಿನಿಂದ ಹೈಕೋರ್ಟ್‌ಗೆ ಚಳಿಗಾಲದ ರಜೆ, ಜ.6ಕ್ಕೆ ಕಲಾಪ ಪುನಾರಂಭ; ಮೂರು ದಿನಗಳು ನಡೆಯಲಿದೆ ರಜಾಕಾಲೀನ ಪೀಠ

ಈ ಅವಧಿಯಲ್ಲಿ, ಶನಿವಾರ (ಜುಲೈ 12, 2025 ಹೊರತುಪಡಿಸಿ), ಭಾನುವಾರ ಹಾಗೂ ಇತರ ರಜಾದಿನಗಳನ್ನು ಹೊರತುಪಡಿಸಿ, ಎಲ್ಲಾ ಕೆಲಸದ ದಿನಗಳಲ್ಲಿ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಿಜಿಸ್ಟ್ರಿ ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ ತೆರೆದಿರುತ್ತದೆ.

ಈ ದಿನಗಳಲ್ಲಿ ವಕೀಲ ಗುಮಾಸ್ತರಲ್ಲದ ಸದಸ್ಯರು ಬೆಳಿಗ್ಗೆ 9:30 ರಿಂದ ಸಂಜೆ 5:30 ರವರೆಗೆ ಕೆಲಸ ಮಾಡುತ್ತಾರೆ. ಜುಲೈ 14, 2025 ರಿಂದ ಸುಪ್ರೀಂ ಕೋರ್ಟ್‌ನ ನಿಯಮಿತ ಕಾರ್ಯಚಟುವಟಿಕೆ ಪುನರಾರಂಭಗೊಳ್ಳುತ್ತದೆ.

Kannada Bar & Bench
kannada.barandbench.com