ಬೇಸಿಗೆ ರಜೆಯಲ್ಲಿ ಪ್ರಕರಣಗಳ ವಿಚಾರಣೆ ನಡೆಸಲು ರಜಾಕಾಲೀನ ಪೀಠಗಳ ಅಧಿಸೂಚನೆ ಹೊರಡಿಸಿದ ಸುಪ್ರೀಂ ಕೋರ್ಟ್‌

ಸುಪ್ರೀಂ ಕೋರ್ಟ್‌ಗೆ ಆರು ವಾರಗಳ ಬೇಸಿಗೆ ರಜೆ ಇರಲಿದ್ದು, ಈ ಸಂದರ್ಭದಲ್ಲಿ ಅರ್ಜಿಗಳ ವಿಚಾರಣೆ ನಡೆಸಲು ನಿಯಮಗಳ ಪ್ರಕಾರ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರು 14 ಪೀಠಗಳನ್ನು ನಾಮನಿರ್ದೇಶನ ಮಾಡಿದ್ದಾರೆ.
ಬೇಸಿಗೆ ರಜೆಯಲ್ಲಿ ಪ್ರಕರಣಗಳ ವಿಚಾರಣೆ ನಡೆಸಲು ರಜಾಕಾಲೀನ ಪೀಠಗಳ ಅಧಿಸೂಚನೆ ಹೊರಡಿಸಿದ ಸುಪ್ರೀಂ ಕೋರ್ಟ್‌

ಸುಪ್ರೀಂ ಕೋರ್ಟ್‌ಗೆ ಮೇ 22ರಿಂದ ಜುಲೈ 3ರವರೆಗೆ ಬೇಸಿಗೆ ರಜೆ ಇರಲಿದ್ದು, ಈ ಸಂದರ್ಭದಲ್ಲಿ ಪ್ರಕರಣಗಳ ವಿಚಾರಣೆ ನಡೆಸಲು ರಜಾಕಾಲೀನ ಪೀಠಗಳನ್ನು ರಚಿಸಿ ಸರ್ವೋಚ್ಚ ನ್ಯಾಯಾಲಯ ಅಧಿಸೂಚನೆ ಪ್ರಕಟಿಸಿದೆ.

ಸುಪ್ರೀಂ ಕೋರ್ಟ್‌ ನಿಯಮಗಳ ಅನುಸಾರ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರು 14 ವಿಭಾಗೀಯ ಪೀಠಗಳನ್ನು ನಾಮನಿರ್ದೇಶನ ಮಾಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಒಂದು ವಾರ ಕಡಿತವಾಗಿ ರಜಾಕಾಲವು ಆರು ವಾರಗಳಿಗಿರಲಿದೆ. ಒಂದು ಪೀಠವು ವಾರಾಂತ್ಯದಲ್ಲಿ ವಿಚಾರಣೆ ನಡೆಸಲಿದೆ.

ಮೇ 22ರಿಂದ 26:

1. ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್‌ ಮತ್ತು ಸಂಜಯ್‌ ಕರೋಲ್‌

2. ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ಪಿ ಎಸ್‌ ನರಸಿಂಹ

ಮೇ 27-28 (ಶನಿವಾರ-ಭಾನುವಾರ):

1. ನ್ಯಾಯಮೂರ್ತಿಗಳಾದ ಪಂಕಜ್‌ ಮಿತ್ತಲ್‌ ಮತ್ತು ಸಂಜಯ್‌ ಕರೋಲ್‌

2. ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ಪಿ ಎಸ್‌ ನರಸಿಂಹ

ಮೇ 20ರಿಂದ ಜೂನ್‌ 4:

1. ನ್ಯಾಯಮೂರ್ತಿಗಳಾದ ಬೆಲಾ ಎಂ ತ್ರಿವೇದಿ ಮತ್ತು ದೀಪಂಕರ್‌ ದತ್ತ

2. ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಪಂಕಜ್‌ ಮಿತ್ತಲ್‌

ಜೂನ್‌ 5ರಿಂದ ಜೂನ್‌ 11:

1. ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್‌ ಮತ್ತು ರಾಜೇಶ್‌ ಬಿಂದಾಲ್‌

2. ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್‌ ಮತ್ತು ಅಹ್ಸಾನುದ್ದೀನ್‌ ಅಮಾನುಲ್ಲಾ

ಜೂನ್‌ 12:

1. ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್‌ ಮತ್ತು ರಾಜೇಶ್‌ ಬಿಂದಾಲ್‌

2. ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್‌ ಮತ್ತು ಅಹ್ಸಾನುದ್ದೀನ್‌ ಅಮಾನುಲ್ಲಾ

ಜೂನ್‌ 13ರಿಂದ ಜೂನ್‌ 18:

1. ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್‌ ಮತ್ತು ಅಹ್ಸಾನುದ್ದೀನ್‌ ಅಮಾನುಲ್ಲಾ

2. ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ರಾಜೇಶ್‌ ಬಿಂದಾಲ್

ಜೂನ್‌ 19ರಿಂದ ಜೂನ್‌ 25:

1. ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಎಂ ಎಂ ಸುಂದರೇಶ್‌

2. ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಮನೋಜ್‌ ಮಿಶ್ರಾ

ಜೂನ್‌ 26 ಮತ್ತು ಜುಲೈ 2:

1. ನ್ಯಾಯಮೂರ್ತಿಗಳಾದ ಎ ಎಸ್‌ ಓಕಾ ಮತ್ತು ಮನೋಜ್‌ ಮಿಶ್ರಾ

2. ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ದೀಪಂಕರ್‌ ದತ್ತ

Kannada Bar & Bench
kannada.barandbench.com