ಪತ್ರಕರ್ತೆಯರ ವಿರುದ್ಧ 2018ರಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದ ನಟ ಮತ್ತು ಮಾಜಿ ಶಾಸಕ ಎಸ್‌ವಿ ಶೇಖರ್ ವಿರುದ್ಧದ ವಿಚಾರಣೆ ರದ್ದುಗೊಳಿಸಲು ನಿರಾಕರಿಸಿದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ [ಎಸ್‌ವಿ ಶೇಖರ್ ಮತ್ತು ಎಐ ಗೋಪಾಲಸಾಮಿ ನಡುವಣ ಪ್ರಕರಣ].
ವಿಚಾರಣೆ ವೇಳೆ ಶೇಖರ್ ಖುದ್ದು ಹಾಜರಾತಿಯಿಂದ ವಿನಾಯಿತಿ ಕೇಳಬಹುದು ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠ ಹೇಳಿದೆ.
ಕಳೆದ ಜುಲೈನಲ್ಲಿ ಮದ್ರಾಸ್ ಹೈಕೋರ್ಟ್ ಶೇಖರ್ ವಿರುದ್ಧದ ಕ್ರಿಮಿನಲ್ ಮೊಕದ್ದಮೆರದ್ದುಗೊಳಿಸಲು ನಿರಾಕರಿಸಿತ್ತು.
ಶೇಖರ್ ಸ್ವತಃ ಇದನ್ನು ಬರೆಯದೆ ಫೇಸ್‌ಬುಕ್ ಖಾತೆ ಮೂಲಕ ಇದನ್ನು ಹಂಚಿದ್ದರಾದರೂ ಅವರು ಸಾರ್ವಜನಿಕ ವ್ಯಕ್ತಿಯಾಗಿರುವುದರಿಂದ ಸಾಮಾಜಿಕ ಮಾಧ್ಯಮದಲ್ಲಿ ಗಣನೀಯವಾಗಿ ಪ್ರಸಾರವಾಗಿದ್ದರಿಂದ ಉಂಟಾದ ಹಾನಿಯ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ ಎಂದು ನ್ಯಾ. ಎನ್ ಆನಂದ್ ವೆಂಕಟೇಶ್ ಅವರಿದ್ದ ಪೀಠ ತಿಳಿಸಿತ್ತು.
ಹೇಳಿಕೆಗೆ ಸಂಬಂಧಿಸಿದಂತೆ ಹಲವು ದೂರುಗಳನ್ನು ನೀಡಲಾಗಿತ್ತು. ಬಳಿಕ ಶೇಖರ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು.