ಬಿಹಾರ ಉಪಚುನಾವಣೆ ಮುಂದೂಡಿಕೆ ಕೋರಿಕೆ: ಪ್ರಶಾಂತ್ ಕಿಶೋರ್ 'ಜನ್ ಸುರಾಜ್' ಪಕ್ಷದ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಛತ್ ಪೂಜೆಯನ್ನು ಉಲ್ಲೇಖಿಸಿ ಮನವಿ ಸಲ್ಲಿಸಲಾಗಿದೆ. ಆದರೆ ಛತ್ ಹಬ್ಬ ಈಗಾಗಲೇ ಮುಗಿದಿದೆ ಎಂದು ನ್ಯಾಯಾಲಯ ಹೇಳಿದೆ.
Prashant Kishor, Bihar and SC
Prashant Kishor, Bihar and SC
Published on

ಬಿಹಾರದಲ್ಲಿ ನಡೆಯಬೇಕಾದ ಉಪಚುನಾವಣೆ  ಮುಂದೂಡಲು ನಿರ್ದೇಶನ ನೀಡುವಂತೆ ಕೋರಿ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ [ಜನ್ ಸುರಾಜ್ ಪಕ್ಷ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ]

ಛತ್ ಪೂಜೆಯನ್ನು ಉಲ್ಲೇಖಿಸಿ ಮನವಿ ಸಲ್ಲಿಸಲಾಗಿದೆ. ಆದರೆ ಛತ್‌ ಹಬ್ಬ ಈಗಾಗಲೇ ಮುಗಿದಿದೆ. ನಾವು ಮಧ್ಯಪ್ರವೇಶಿಸಬಾರದು ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಹೇಳಿತು.

Also Read
ಕಾಂಗ್ರೆಸ್‌ ನಾಯಕರ ವಿರುದ್ಧ ಕೀಳು ವಿಡಿಯೋ: ಬಿಜೆಪಿ ಐಟಿ ಸೆಲ್‌ ಸಂಚಾಲಕ ಪ್ರಶಾಂತ್‌ ಮಾಕನೂರ್‌ಗೆ ನಿರೀಕ್ಷಣಾ ಜಾಮೀನು

"ಛತ್‌ ಪ್ರಾಮುಖ್ಯತೆ ನಿರಾಕರಿಸುವಂತಿಲ್ಲ. ಅದು ಮುಗಿದಿದೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಬೇರೆ ರಾಜ್ಯಗಳಿಗೆ ಸಂಬಂಧಿಸಿದಂತೆ ಚುನಾವಣೆ ಮುಂದೂಡಲಾಗಿದೆ” ಎಂದು ಅರ್ಜಿದಾರರ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಸೂಚಿಸಿದರು.

"ಬಿಹಾರದಲ್ಲಿ ಅದರ ಗುಂಗು ಇದೆ" ಎಂದು ನ್ಯಾಯಮೂರ್ತಿ ಕಾಂತ್ ಪ್ರತಿಕ್ರಿಯಿಸಿದಾಗ ಸಿಂಘ್ವಿ ಅವರು ನಗುತ್ತಾ ಚುನಾವಣೆ ಮುಂದೂಡುವಂತೆ ಮನವಿ ಮಾಡಿದರು.

Also Read
ಶಾಸಕ ವಿರೂಪಾಕ್ಷಪ್ಪ, ಪುತ್ರ ಪ್ರಶಾಂತ್‌ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳಿಗೆ ಪ್ರತಿಬಂಧಕಾದೇಶ

ಆದರೆ ಚುನಾವಣೆಗಾಗಿ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು ಈಗ ಇದು ಮಧ್ಯಪ್ರವೇಶಿಸುವಂತಹ ಪ್ರಕರಣವಲ್ಲ ಎಂದು ನ್ಯಾಯಾಲಯ ನುಡಿಯಿತು. ನವೆಂಬರ್ 13ರಂದು ರಾಜ್ಯದ ನಾಲ್ಕು ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.

ನವೆಂಬರ್ 6ರಿಂದ ನಾಲ್ಕು ದಿನಗಳ ಕಾಲ ಛತ್ ಪೂಜೆ ನಡೆಯಲಿದ್ದು ಆ ಕಾರಣಕ್ಕಾಗಿ ನವೆಂಬರ್ 13ರಂದು ನಡೆಯಬೇಕಿದ್ದ ಚುನಾವಣೆ ಮುಂದೂಡುವಂತೆ ಪಕ್ಷ ಮನವಿ ಮಾಡಿತ್ತು. ಬೇರೆ ರಾಜ್ಯಗಳಲ್ಲಿ ಚುನಾವಣೆ ಮುಂದೂಡಿದ್ದರೂ ರಾಜ್ಯದಲ್ಲಿ ಮುಂದೂಡಬೇಕೆಂದು ತಾನು ಬರೆದ ಪತ್ರಗಳಿಗೆ ಚುನಾವಣಾ ಆಯೋಗ ಸ್ಪಂದಿಸಿಲ್ಲ ಎಂದು ಅದು ದೂರಿತ್ತು.

ಛತ್‌ ಪೂಜೆಯ ಕಾರಣದಿಂದ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರಕ್ಕೆ ತೊಂದರೆಯಾಗಿದ್ದು ಚುನಾವಣೆ ಮುಂದೂಡಬೇಕು ಎಂದು ಮನವಿಯಲ್ಲಿ ಕೋರಲಾಗಿತ್ತು. ಆದರೆ, ಈ ಕುರಿತು ಯಾವುದೇ ಪ್ರಮುಖ ರಾಜಕೀಯ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿಲ್ಲದೆ ಇರುವುದನ್ನು ಸಹ ನ್ಯಾಯಾಲಯ ಗಮನಿಸಿತು.

Kannada Bar & Bench
kannada.barandbench.com