ನೀಟ್‌ ಪಿಜಿ 2022 ಮುಂದೂಡಿಕೆ ಕೋರಿದ್ದ ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌ [ಚುಟುಕು]

ನೀಟ್‌ ಪಿಜಿ 2022 ಮುಂದೂಡಿಕೆ ಕೋರಿದ್ದ ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌ [ಚುಟುಕು]

ಇದೇ ತಿಂಗಳು 21ಕ್ಕೆ ನಿಗದಿಯಾಗಿರುವ ನೀಟ್‌ ವೈದ್ಯಕೀಯ ಸ್ನಾತಕೋತ್ತರ ಪದವಿ (ಪಿಜಿ) ಪರೀಕ್ಷೆ 2022 ಅನ್ನು ಮುಂದೂಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ ವಜಾ ಮಾಡಿದೆ. ನೀಟ್‌ ಪಿಜಿ ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡು ಸಿದ್ಧತೆ ನಡೆಸಿರುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿರುವುದರಿಂದ ಪರೀಕ್ಷೆ ಮುಂದೂಡಲು ನಿರ್ದೇಶನ ನೀಡಲಾಗದು ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಮತ್ತು ಸೂರ್ಯಕಾಂತ್‌ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

“ಮೇ 21ರಂದು ನೀಟ್‌ ಪಿಜಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯನ್ನು ಮುಂದೂಡುವುದು ಹೇಗೆ? ನಿಮ್ಮ ಕಕ್ಷಿದಾರರಿಗೆ ಸಮಸ್ಯೆಯಾಗುತ್ತದೆ ಎಂದು ಉಳಿದ ಸಿದ್ಧತೆ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಸಮಸ್ಯೆ ಮಾಡುವುದೇ? ಅದು ಹೇಗೆ ಸಾಧ್ಯ? ಎಂದು ಪೀಠ ಕೇಳಿತು. ಅಂತಿಮವಾಗಿ ಪಕ್ಷಕಾರರನ್ನು ಆಲಿಸಿದ ಪೀಠವು ಮನವಿ ವಜಾ ಮಾಡಿತು.

Kannada Bar & Bench
kannada.barandbench.com