ಹಂತ ಹಂತವಾಗಿ ಮೀಸಲಾತಿ ರದ್ದತಿ: ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್; ಅರ್ಜಿದಾರರಿಗೆ ₹ 25 ಸಾವಿರ ದಂಡ

ಇದು ಕ್ಷುಲ್ಲಕ ಅರ್ಜಿಯಾಗಿದೆ ಎಂದ ಸಿಜೆಐ ಚಂದ್ರಚೂಡ್ ಮತ್ತು ನ್ಯಾ. ಪಿ ಎಸ್ ನರಸಿಂಹ ಅವರಿದ್ದ ಪೀಠ ಅರ್ಜಿದಾರರಾದ ವಕೀಲ ಸಚಿನ್ ಗುಪ್ತಾ ಅವರಿಗೆ ₹ 25,000 ದಂಡ ವಿಧಿಸಿತು.
ಹಂತ ಹಂತವಾಗಿ ಮೀಸಲಾತಿ ರದ್ದತಿ: ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್; ಅರ್ಜಿದಾರರಿಗೆ ₹ 25 ಸಾವಿರ ದಂಡ
A1

ದೇಶದಲ್ಲಿ ಜಾರಿಯಲ್ಲಿರುವ ಮೀಸಲಾತಿ ವ್ಯವಸ್ಥೆಯನ್ನು ಹಂತಹಂತವಾಗಿ ತೆಗೆದುಹಾಕಿ ಪರ್ಯಾಯ ವಿಧಾನ ಕಂಡುಕೊಳ್ಳುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ [ಅಡ್ವೊಕೇಟ್ ಸಚಿನ್ ಗುಪ್ತಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಇದು ಕ್ಷುಲ್ಲಕ ಅರ್ಜಿಯಾಗಿದೆ ಎಂದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌ ಮತ್ತು ನ್ಯಾ. ಪಿ ಎಸ್‌ ನರಸಿಂಹ ಅವರಿದ್ದ ಪೀಠ ಅರ್ಜಿದಾರರಾದ ವಕೀಲ ಸಚಿನ್ ಗುಪ್ತಾ ಅವರಿಗೆ ₹ 25,000 ದಂಡ ವಿಧಿಸಿತು.

Also Read
ಮುಸ್ಲಿಮರಿಗೆ ಮೀಸಲಾತಿ ರದ್ದತಿ: ಸುಪ್ರೀಂನಲ್ಲಿ ಪ್ರಕರಣ ಬಾಕಿ ಉಲ್ಲೇಖಿಸಿ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌

"ಪಿಐಎಲ್ ನ್ಯಾಯಾಲಯ ಪ್ರಕ್ರಿಯೆಯ ದುರುಪಯೋಗವಾಗಿದೆ. ನಾವು ₹ 25,000 ದಂಡವನ್ನು ಸುಪ್ರೀಂ ಕೋರ್ಟ್‌ನ ವಕೀಲರ ಕಲ್ಯಾಣ ನಿಧಿಗೆ ಪಾವತಿಸುವಂತೆ ನಿರ್ದೇಶಿಸುತ್ತಿದ್ದೇವೆ. ದಂಡ ಪಾವತಿಸಿದ ರಸೀದಿಯನ್ನು 2 ವಾರಗಳಲ್ಲಿ ಸಲ್ಲಿಸಬೇಕು," ಎಂದು ಅದು ಆದೇಶಿಸಿತು.

ಇದೇ ಪೀಠ  ಜಾತಿ ವ್ಯವಸ್ಥೆಯ ಮರುವರ್ಗೀಕರಣ ಕೋರಿ ಇದೇ ಅರ್ಜಿದಾರರು ಸಲ್ಲಿಸಿದ್ದ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ.

Related Stories

No stories found.
Kannada Bar & Bench
kannada.barandbench.com