ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಪದೋನ್ನತಿ: ಕಡೆಗಣಿತರನ್ನು ಹೊಸದಾಗಿ ಸಂದರ್ಶಿಸಲು ಇಂದಿರಾ ಜೈಸಿಂಗ್ ಮನವಿ

ಪಾರದರ್ಶಕತೆಯ ಉದ್ದೇಶಕ್ಕಾಗಿ ಕೆಲ ಹೈಕೋರ್ಟ್‌ಗಳಲ್ಲಿ ಮಾಡಿದಂತೆ ವೈಯಕ್ತಿಕ ಅಭ್ಯರ್ಥಿಗಳು ಪಡೆದ ಅಂಕಗಳನ್ನು ಬಹಿರಂಗಪಡಿಸುವಂತೆಯೂ ಇಂದಿರಾ ಪ್ರಸ್ತಾಪಿಸಿದ್ದಾರೆ.
ಇಂದಿರಾ ಜೈಸಿಂಗ್, ಸುಪ್ರೀಂ ಕೋರ್ಟ್
ಇಂದಿರಾ ಜೈಸಿಂಗ್, ಸುಪ್ರೀಂ ಕೋರ್ಟ್
Published on

ಈಚೆಗೆ 56 ವಕೀಲರನ್ನು ಹಿರಿಯ ನ್ಯಾಯವಾದಿಗಳನ್ನಾಗಿ ಪದೋನ್ನತಿ ಮಾಡಿದ ಬಗ್ಗೆ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಸುಪ್ರೀಂ ಕೋರ್ಟ್‌ ಪ್ರಧಾನ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ.

ನ್ಯಾಯಾಲಯ ಮಾಡಿದ ಹಲವು ನೇಮಕಾತಿಗಳು ನ್ಯಾಯ ದೊರಕಿಸಿಕೊಡಲು ಉತ್ತೇಜನ ನೀಡುತ್ತವೆ ಮತ್ತು ವಕೀಲ ವರ್ಗದಲ್ಲಿ ಆರೋಗ್ಯಕರ ವಾತಾವರಣ ಸೃಷ್ಟಿಸುತ್ತವೆ. ಆದರೂ ಕೆಲ ಅಭ್ಯರ್ಥಿಗಳು ನ್ಯಾಯಸಮ್ಮತವಲ್ಲದ ರೀತಿಯಲ್ಲಿ ಆ ಹುದ್ದೆಯಿಂದ ವಂಚಿತರಾಗಿದ್ದಾರೆ ಎಂದು ದೂರಿದ್ದಾರೆ.

ಪತ್ರದ ಪ್ರಮುಖಾಂಶಗಳು

  • 25 ವರ್ಷಗಳಿಗಿಂತ ಹೆಚ್ಚು ಕಾಲ ಪ್ರಾಕ್ಟೀಸ್‌ ಮಾಡಿರುವ ಮತ್ತು 50 ಕ್ಕೂ ಹೆಚ್ಚು ವರದಿಯಾದ ಪ್ರಕರಣಗಳಲ್ಲಿ ವಾದ ಮಂಡಿಸಿರುವ ಪ್ರಮುಖ ವಕೀಲರನ್ನು ನೇಮಕ ಮಾಡಿಲ್ಲ.

  • ಸಂದರ್ಶನಕ್ಕೆ 25 ಅಂಕ ನಿಗದಿಪಡಿಸಿರುವುದು ಇದಕ್ಕೆ ಕಾರಣ ಇರಬಹುದು. ಆದರೆ ಸಂದರ್ಶನ ಸಾಮೂಹಿಕವಾಗಿತ್ತು ಮತ್ತು ಕೆಲವೇ ನಿಮಿಷವಷ್ಟೇ ನಡೆಯಿತು.

  • ವಕೀಲರ ವರ್ಗದಲ್ಲಿ ಅಸಮಾಧಾನ ತಪ್ಪಿಸಲು ಕಡೆಗಣಿತರಾಗಿರುವ ಅರ್ಹ ವಕೀಲರಿಗೆ ಹೊಸದಾಗಿ ಸಂದರ್ಶನ ನಡೆಸಿ ಅವಕಾಶ ಕಲ್ಪಿಸಬೇಕು.

  • ಪಾರದರ್ಶಕತೆಯ ಉದ್ದೇಶಕ್ಕಾಗಿ ಕೆಲ ಹೈಕೋರ್ಟ್‌ಗಳಲ್ಲಿ ಮಾಡಿದಂತೆ ವೈಯಕ್ತಿಕ ಅಭ್ಯರ್ಥಿಗಳು ಪಡೆದ ಅಂಕಗಳನ್ನು ಬಹಿರಂಗಪಡಿಸಬೇಕು.

Kannada Bar & Bench
kannada.barandbench.com