ವಿವಾದಾತ್ಮಕ ತೀರ್ಪುಗಳು ಬಾರದಿರಲು ಸುಪ್ರೀಂ ಕೋರ್ಟ್ ವಿಸ್ತೃತ ಪೀಠದ ವಿಚಾರಣೆ ಅಗತ್ಯ: ನ್ಯಾ. ಎಸ್ ಮುರಳೀಧರ್ ಅಭಿಮತ

ನ್ಯಾಯಾಧೀಶರದ್ದು ಆಲೋಚಿಸಲು ಕಡಿಮೆ ಸಮಯ ನೀಡುವ, ಬೌದ್ಧಿಕವಾಗಿ ದಣಿವು ಉಂಟುಮಾಡುವಂತಹ ವೃತ್ತಿ ಎಂದು ಹಿರಿಯ ನ್ಯಾಯವಾದಿಗಳೂ ಆದ ನ್ಯಾ. ಮುರಳೀಧರ್ ತಿಳಿಸಿದರು.
Justice S Muralidhar
Justice S Muralidhar
Published on

ಬಗೆಬಗೆಯ ಕಾನೂನು ವ್ಯಾಖ್ಯಾನಗಳನ್ನು ತಪ್ಪಿಸಲು ಸುಪ್ರೀಂ ಕೋರ್ಟ್‌ ವಿಸ್ಥೃತ ಪೀಠ ಪ್ರಕರಣಗಳ ವಿಚಾರಣೆ ನಡೆಸಬೇಕು ಎಂದು ಹಿರಿಯ ವಕೀಲ ಹಾಗೂ ಒಡಿಶಾ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಾ. ಎಸ್‌ ಮುರಳೀಧರ್‌ ಅಭಿಪ್ರಾಯಪಟ್ಟರು.

ನವದೆಹಲಿಯ ಐಐಸಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಜೆ ಪಿ ನಾಯಕ್‌ ಸ್ಮಾರಕ 30ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾರತದಲ್ಲಿ ಮಹಿಳೆಯರ ಸ್ಥಿತಿಗತಿ ಕುರಿತ ಸಮಿತಿ ಸ್ಥಾಪನೆಯಾಗಿ 50 ವರ್ಷಗಳು: ಆತ್ಮಾವಲೋಕನ, ಮರುಭೇಟಿಯ ಸಮಯ ಎಂಬ ವಿಷಯವಾಗಿ ಅವರು ಮಾತನಾಡಿದರು.

ಪ್ರಸ್ತುತ ಪೀಠ ಭಿನ್ನ ತೀರ್ಪು ನೀಡದೆ ಇದ್ದರೆ ಸುಪ್ರೀಂ ಕೋರ್ಟ್‌ ಜಾರಿಯಾಗಿರು ತೀರ್ಪುಗಳನ್ನು ಸುಲಭವಾಗಿ ಮರುಪರಿಶೀಲಿಸಲು ಹೋಗಬಾರದು ಎಂದು ಅವರು ಹೇಳಿದರು.

ಮಹಿಳೆಯರ ಮೇಲಿನ ದೌರ್ಜನ್ಯ/ಅಪರಾಧಗಳ ಕುರಿತು ಈಗಿರುವ ಕಾಯಿದೆಗಳ ಬಗ್ಗೆ ಭಿನ್ನ ನ್ಯಾಯಾಂಗ ವ್ಯಾಖ್ಯಾನ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು “ಭಾರತೀಯ ಸುಪ್ರೀಂ ಕೋರ್ಟ್ ತುಂಬಾ ವಿಭಿನ್ನವಾಗಿದೆ. 17 ದ್ವಿಸದಸ್ಯ ಪೀಠಗಳು ಇದರಲ್ಲಿವೆ. ಭಿನ್ನ ತೀರ್ಪುಗಳು ಕಂಡು ಬಂದೇ ಬರುತ್ತವೆ.    ಪೀಠಗಳ ನಡುವಿನ ಸಂಘರ್ಷ ಕಡಿಮೆ ಮಾಡಲು ವಿಸ್ತೃತ ಪೀಠಗಳು ಪ್ರಕರಣಗಳ ವಿಚಾರಣೆ ನಡೆಸಬೇಕು ಮತ್ತು ಕೆಲವು ಗಂಭೀರ ಭಿನ್ನಾಭಿಪ್ರಾಯಗಳಿಲ್ಲದ ಹೊರತು ನಿರ್ಧಾರಗಳನ್ನು ಮರುಪರಿಶೀಲಿಸಲು ಹೋಗಬಾರದು. ಮುಂದಿನದು ಕೆಲಸದ ಪ್ರಮಾಣ. ತುಂಬಾ ದಣಿವುಂಟು ಮಾಡುವ ಬೌದ್ಧಿಕ ಕೆಲಸ ಆಲೋಚಿಸಲು ಕಡಿಮೆ ಸಮಯ ನೀಡುತ್ತದೆ ಹಾಗೂ ತಪ್ಪುಗಳ ಸಾಧ್ಯತೆ ಹೆಚ್ಚಾಗಿರುತ್ತದೆ” ಎಂದರು.

ರಾಷ್ಟ್ರೀಯ ಮಹಿಳಾ ಆಯೋಗದ ವರದಿಗಳು ಹೆಚ್ಚು ವಿವರವಾಗಿರಬೇಕು. ಈಗಿನ ದಿನಮಾನಗಳಲ್ಲಿ ಸಂಜ್ಞೇಯ ಅಪರಾಧಗಳ ವಿಚಾರದಲ್ಲಿ ಅಂತಹ ವರದಿಗಳು ಪರಿಪೂರ್ಣವಾಗಿರುವುದಿಲ್ಲ ಎಂದು ಕೂಡ ಅವರು ಬೇಸರ ವ್ಯಕ್ತಪಡಿಸಿದರು.

Kannada Bar & Bench
kannada.barandbench.com