ತನ್ನದೇ ಸುತ್ತೋಲೆ ಧಿಕ್ಕರಿಸಿದ ಐಟಿ ಇಲಾಖೆಗೆ ಸುಪ್ರೀಂ ಕೋರ್ಟ್ ₹2 ಲಕ್ಷ ದಂಡ

ತಾನೇ ನೀಡಿದ್ದ ನಿರ್ದೇಶನಗಳನ್ನು ಉದ್ದೇಶಪೂರ್ವಕವಾಗಿ ಪಾಲಿಸದಿರುವುದು ಗಂಭೀರ ಲೋಪ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ತನ್ನದೇ ಸುತ್ತೋಲೆ ಧಿಕ್ಕರಿಸಿದ ಐಟಿ ಇಲಾಖೆಗೆ ಸುಪ್ರೀಂ ಕೋರ್ಟ್ ₹2 ಲಕ್ಷ ದಂಡ
Published on

ತಾನೇ ಹೊರಡಿಸಿದ್ದ ಸುತ್ತೋಲೆಯಲ್ಲಿದ್ದ ನಿರ್ದೇಶನಗಳನ್ನು ಉಲ್ಲಂಘಿಸಿ ತೆರಿಗೆದಾರರ ವಿರುದ್ಧ ಮೊಕದ್ದಮೆ ಹೂಡಿದ್ದ ಆದಾಯ ತೆರಿಗೆ ಇಲಾಖೆಗೆ ಸುಪ್ರೀಂ ಕೋರ್ಟ್ ಈಚೆಗೆ ₹2 ಲಕ್ಷ ದಂಡ ವಿಧಿಸಿದೆ  [ ವಿಜಯ್ ಕೃಷ್ಣಸ್ವಾಮಿಅಲಿಯಾಸ್‌  ಕೃಷ್ಣಸ್ವಾಮಿ ವಿಜಯಕುಮಾರ್ ಮತ್ತು ಆದಾಯ ತೆರಿಗೆ ಉಪ ನಿರ್ದೇಶಕರ ನಡುವಣ ಪ್ರಕರಣ].

ತಾನೇ ನೀಡಿದ್ದ ನಿರ್ದೇಶನಗಳನ್ನು ಉದ್ದೇಶಪೂರ್ವಕವಾಗಿ ಪಾಲಿಸದಿರುವುದು ಗಂಭೀರ ಲೋಪ ಎಂದು ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು  ವಿಜಯ್ ಬಿಷ್ಣೋಯ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

ಇಂತಹ ಕೃತ್ಯವನ್ನು ಒಳ್ಳೆಯ ದೃಷ್ಟಿಕೋನದಿಂದ ಅರ್ಥೈಸಲಾಗದು. ಇಲಾಖೆ ಪಾಲಿಸಲೇಬೇಕಿದ್ದ ಶಾಸನಬದ್ಧ ಸೂಚನೆಗಳನ್ನು ಸ್ಪಷ್ಟವಾಗಿ ನಿರ್ಲಕ್ಷಿಸಿದೆ. ತನ್ನದೇ ನಿರ್ದೇಶನಗಳನ್ನು ಉದ್ದೇಶಪೂರ್ವಕವಾಗಿ ಪಾಲಿಸದಿರುವುದು ಗಮಭೀರ ಲೋಪವನ್ನು ಹೇಳಲಿದ್ದು ನ್ಯಾಯಸಮ್ಮತತೆ, ಸ್ಥಿರತೆ ಹಾಗೂ ಹೊಣೆಗಾರಿಕೆಯ ತತ್ವಗಳನ್ನು ದುರ್ಬಲಗೊಳಿಸುತ್ತದೆ, ಇದನ್ನು ಯಾವುದೇ ರೀತಿಯಲ್ಲಿ ಸಮರ್ಥನೆ ಅಥವಾ ಕಾನೂನುಬದ್ಧ ಎಂದು ಪರಿಗಣಿಸಲಾಗದು ಎಂಬುದಾಗಿ ತೀರ್ಪಿನಲ್ಲಿ ವಿವರಿಸಲಾಗಿದೆ.

ಕಂದಾಯ ಇಲಾಖೆ ಶಾಸನಬದ್ಧ ಸೂಚನೆಗಳನ್ನು ಸ್ಪಷ್ಟವಾಗಿ ನಿರ್ಲಕ್ಷಿಸಿ ನಡೆದುಕೊಂಡಿದೆ.
ಸುಪ್ರೀಂ ಕೋರ್ಟ್

ಅಂತೆಯೇ ತೆರಿಗೆದಾರರಿಗೆ ₹2 ಲಕ್ಷ ದಂಡ ಪಾವತಿಸುವಂತೆ ಸೂಚಿಸುವಂತೆ ಆದಾಯ ತೆರಿಗೆ ಅಧಿಕಾರಿಗಳಿಗೆ ಆದೇಶಿಸಿದ ನ್ಯಾಯಾಲಯ ಮೊಕದ್ದಮೆ ರದ್ದುಗೊಳಿಸಿತು.

 1961 ರ ಆದಾಯ ತೆರಿಗೆ ಕಾಯ್ದೆಯ (ಐಟಿ ಕಾಯ್ದೆ) ಸೆಕ್ಷನ್ 276 ಸಿ (1) ರ ಅಡಿಯಲ್ಲಿ ತೆರಿಗೆ ವಂಚನೆಗೆ ಯತ್ನಿಸಿದ ಆರೋಪದ ಮೇಲೆ ವಿಜಯ್ ಕೃಷ್ಣಸ್ವಾಮಿ ಎಂಬ ವ್ಯಕ್ತಿಯೊಬ್ಬರ ವಿರುದ್ಧ ಕಂದಾಯ ಇಲಾಖೆ ಕೈಗೊಂಡಿದ್ದ ಕ್ರಮಗಳನ್ನು ರದ್ದುಗೊಳಿಸಲು ಮದ್ರಾಸ್ ಹೈಕೋರ್ಟ್‌ ಆದೇಶಿಸಿತ್ತು. ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

ಏಪ್ರಿಲ್ 2016 ರಲ್ಲಿ, ಐಟಿ ಕಾಯಿದೆಯ ಸೆಕ್ಷನ್ 132 ರ ಅಡಿಯಲ್ಲಿ ತೆರಿಗೆದಾರರ ನಿವಾಸದಲ್ಲಿ ಶೋಧ ನಡೆಸಿದ ಇಲಾಖೆ  ₹4.93 ಕೋಟಿ ಲೆಕ್ಕವಿಲ್ಲದ ನಗದು ವಶಪಡಿಸಿಕೊಂಡಿತ್ತು. ನಂತರ ಚೆನ್ನೈನ ಆದಾಯ ತೆರಿಗೆ (ತನಿಖೆ) ಪ್ರಧಾನ ನಿರ್ದೇಶಕರು 2018 ರಲ್ಲಿ ತೆರಿಗೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅಧಿಕಾರ ನೀಡಿದ್ದರು. ಆದರೆ ಇಲಾಖೆ 2008ರ ಏಪ್ರಿಲ್ 24ರಂದು ಹೊರಡಿಸಿದ್ದ ಸುತ್ತೋಲೆ. 2009ರಲ್ಲಿ ಪ್ರಕಟಿಸಿದ್ದ ಕೈಪಿಡಿ ಹಾಗೂ  2019ರ ಸುತ್ತೋಲೆಗಳನ್ನು ಉಲ್ಲಂಘಿಸಿ ತಮ್ಮ ವಿರುದ್ಧ ಇಲಾಖೆ ಕ್ರಮ ಕೈಗೊಂಡಿತ್ತು ಎಂಬುದು ತೆರಿಗೆದಾರರ ಆರೋಪವಾಗಿತ್ತು.

ವಾದ ಆಲಿಸಿದ ನ್ಯಾಯಾಲಯ ಮದ್ರಾಸ್‌ ಹೈಕೋರ್ಟ್‌ ತೀರ್ಪು ತಪ್ಪಾಗಿ ಕೈಗೊಂಡ ನಿರ್ಧಾರ. ವಾಸ್ತವಾಂಶ ಹಾಗೂ ಕಾನೂನು ವಿಚಾರಗಳನ್ನು ಪರಿಶೀಲಸದೆಯೇ ಪ್ರಕರಣ ಮುಂದುವರೆಸಲು ಅನುಮತಿ ನೀಡಿದ್ದು ತಪ್ಪು ಎಂದು ಅದು ಹೇಳಿ ಆ ತೀರ್ಪನ್ನು ರದ್ದುಗೊಳಿಸಿತು.

[ತೀರ್ಪಿನ ಪ್ರತಿ]

Attachment
PDF
Vijay_Krishnaswami___Krishnaswami_Vijayakumar_vs__The_Deputy_Director_of_Income_Tax
Preview
Kannada Bar & Bench
kannada.barandbench.com