ಕೋವಿಡ್ ಸಂಬಂಧಿತ ವಿಚಾರಗಳ ಕುರಿತು ಒಂಭತ್ತು ಹೈಕೋರ್ಟ್‌ಗಳು ವಿಚಾರಣೆ ನಡೆಸುತ್ತಿವೆ. ಕೋವಿಡ್‌ನಿಂದ ವಿವಿಧ ರಾಜ್ಯಗಳಲ್ಲಿ ಸೃಷ್ಟಿಯಾಗಿರುವ ಸಮಸ್ಯೆಗಳ ಕುರಿತು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಗುರುವಾರ ಪ್ರಕರಣ ದಾಖಲಿಸಿಕೊಂಡಿದೆ.
ಆದರೆ, ಸುಪ್ರೀಂ ಕೋರ್ಟ್‌ನ ಈ ಕ್ರಮದಿಂದ ದೇಶಾದ್ಯಂತ ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಪರಿಹಾರ ಒದಗುವಿಕೆ ತಡವಾಗಲಿದೆ ಎಂದು ವಕೀಲರ ಪರಿಷತ್‌ನ ಪ್ರತಿನಿಧಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶಕ್ಕೆ ರಾಜ್ಯ ವಕೀಲರ ಪರಿಷತ್ ಮತ್ತು ಸುಪ್ರೀಂ ಕೋರ್ಟ್ ವಕೀಲರ ಪರಿಷತ್ ಪ್ರಮುಖ ಸದಸ್ಯರ ಜೊತೆ “ಬಾರ್ ಅಂಡ್ ಬೆಂಚ್” ಮಾತನಾಡಿದ್ದು, ಅವರ ಅಭಿಪ್ರಾಯ ಸಂಗ್ರಹಿಸಿದೆ.
“ಪ್ರತಿ ರಾಜ್ಯವು ವಿಭಿನ್ನ ಸಮಸ್ಯೆ ಎದುರಿಸುತ್ತಿರುವುದಿಂದ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ಪ್ರಕ್ರಿಯೆ ಆರಂಭಿಸುವ ಅಗತ್ಯವಿಲ್ಲ. ಕೋವಿಡ್ ನಿರ್ವಹಣೆ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಮಟ್ಟದಲ್ಲಿ ಸುಪ್ರೀಂ ಕೋರ್ಟ್ 2020 ರಲ್ಲಿ ಈಗಾಗಲೇ ಪ್ರತಿ ರಾಜ್ಯಕ್ಕೆ ವಿವರವಾದ ಮಾರ್ಗಸೂಚಿಗಳನ್ನು ನೀಡಿತ್ತು, ಆದ್ದರಿಂದ ಅದನ್ನು ಎದುರಿಸಲು ಹೈಕೋರ್ಟ್‌ಗಳು ಸಿದ್ಧವಾಗಿವೆ.
ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳುವ ಅಧಿಕಾರ ಹೊಂದಿದೆ. ಆದರೆ, ವಕೀಲರ ಪರಿಷತ್‌ನ ಅಧ್ಯಕ್ಷನಾಗಿ ಮತ್ತು ಪರಿಷತ್ ಸದಸ್ಯನಾಗಿ ಹೈಕೋರ್ಟ್‌ಗಳು ತಪ್ಪು ಮಾಡುತ್ತಿವೆ ಎಂದು ನನಗೆ ಅನ್ನಿಸುವುದಿಲ್ಲ. ತಮ್ಮ ವ್ಯಾಪ್ತಿಯಲ್ಲಿ ಏನಾಗುತ್ತದೆ ಎಂಬುದರ ಮೇಲೆ ಗಮನ ಇಟ್ಟಿವೆ.
ಹೈಕೋರ್ಟ್‌ಗಳು ಸಮಸ್ಯೆಯನ್ನು ತಮ್ಮದೇ ಆದ ಮಟ್ಟದಲ್ಲಿ ನಿರ್ವಹಿಸಲು ಸಮರ್ಥವಾಗಿವೆ. ಅಲಹಾಬಾದ್ ಹೈಕೋರ್ಟ್ ಸಹ ಐದು ನಗರಗಳಲ್ಲಿ ಕೆಲವು ನಿರ್ಬಂಧಗಳು ಅಗತ್ಯ ಎಂದಿತ್ತು. ಆದರೆ, ಸುಪ್ರೀಂ ಕೋರ್ಟ್ ಅದನ್ನು ವಿಭಿನ್ನವಾಗಿ ನೋಡಿದೆ. ಅಮಿಕಸ್ ಕ್ಯೂರಿಯಾಗಿರುವ ಹರೀಶ್ ಸಾಳ್ವೆ ಅವರು ದೆಹಲಿ ಮತ್ತು ಬಾಂಬೆ ಹೈಕೋರ್ಟ್‌ಗಳಲ್ಲಿ ಭಾರತದ ಸೇರಂ ಸಂಸ್ಥೆಯನ್ನು ಪ್ರತಿನಿಧಿಸಿದ್ದಾರೆ. ಅವರು ಈ ಸ್ಥಾನಕ್ಕೆ ಒಪ್ಪಬಾರದಿತ್ತು ಎಂದಿದ್ದಾರೆ.
ಸರ್ಕಾರಗಳು ಅಗತ್ಯ ಕ್ರಮಕೈಗೊಳ್ಳುತ್ತಿಲ್ಲ ಎಂದು ಮನಗಂಡು ಎಲ್ಲಾ ಹೈಕೋರ್ಟ್‌ಗಳು ಪರಿಸ್ಥಿತಿಯನ್ನು ಪರಿಗಣಿಸಿವೆ. ಇದರಲ್ಲಿ ಆಮ್ಲಜನಕ ಪೂರೈಕೆ ಮತ್ತು ರೆಮ್‌ಡಿಸಿವಿರ್ ಔಷಧವೂ ಸೇರಿದೆ. ಭಿಲಾಯ್‌ನಲ್ಲಿ ಸ್ವಯಂಪ್ರೇರಿತವಾಗಿ ಅಲ್ಲಿನ ಘಟಕವು ವಿದರ್ಭಕ್ಕೆ ಆಮ್ಲಜನಕ ನಿರ್ಬಂಧಿಸಿದೆ ಎಂಬ ಸುದ್ದಿಯನ್ನು ಬಾರ್ ಅಂಡ್ ಬೆಂಚ್‌ನಲ್ಲಿ ಓದಿದ್ದೆ. ಈ ಸಂದರ್ಭದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಬೇಕು. ಇದನ್ನು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ಯಾವುದೇ ನ್ಯಾಯಾಲಯ ಮಾಡಿದರೆ ಸಮಸ್ಯೆ ಏನು?
ಕೋವಿಡ್‌ನಿಂದ ತತ್ತರಿಸಿರುವ ಜನರಿಗೆ ಪರಿಹಾರ ಸಿಗಬೇಕು. ಹೈಕೋರ್ಟ್‌ಗಳು ಹೊರಡಿಸಿರುವ ಆದೇಶಗಳನ್ನು ಸುಪ್ರೀಂ ಬದಿಗಿಟ್ಟಿದೆಯೇ? ಈ ಸಾಂಕ್ರಾಮಿಕತೆಯು ರಾಷ್ಟ್ರೀಯ ವಿಪತ್ತಾಗಿದ್ದು, ನ್ಯಾಯಾಂಗ ಮಧ್ಯಪ್ರವೇಶದ ಸಮಸ್ಯೆಯನ್ನು ಸೃಷ್ಟಿಸಬಾರದು. ಅವರು ಅದನ್ನು ನಿರ್ವಹಿಸಲು ಸಮರ್ಥವಾಗಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶ ಹೊರಡಿಸುವ ಅಗತ್ಯವಿರಲಿಲ್ಲ. ಬಹುದೊಡ್ಡ ರಾಷ್ಟ್ರವಾದ ನಮ್ಮಲ್ಲಿರುವ ರಾಜ್ಯಗಳು ಜನಸಂಖ್ಯೆ ಅಥವಾ ಹವಾಗುಣ ಅಥವಾ ಭೌಗೋಳಿಕ ಹಂಚಿಕೆ ಸೇರಿದಂತೆ ಹಲವು ವಿಶಿಷ್ಟತೆಗಳನ್ನು ಒಳಗೊಂಡಿವೆ. ಪ್ರತಿ ರಾಜ್ಯವೂ ತನ್ನದೇ ಆದ ಆರೋಗ್ಯ ಸಮಸ್ಯೆಗಳನ್ನು ಹೊಂದಿವೆ. ಉದಾಹರಣೆಗೆ ದೆಹಲಿಯಲ್ಲಿ ಆರೋಗ್ಯ ಸಮಸ್ಯೆ ಇದ್ದರೆ, ಸಿಕ್ಕಿಂನಲ್ಲಿ ಕೆಲವು ನಾಗರಿಕರು ಪಿಐಎಲ್ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ನಾನು ಅಮಿಕಸ್ ಕ್ಯೂರಿಯಾಗಿದ್ದೇನೆ. ಪ್ರತಿಯೊಂದು ರಾಜ್ಯವು ತನ್ನದೇ ಆದ ರೀತಿಯಲ್ಲಿ ಸಮಸ್ಯೆಗೆ ಸ್ಪಂದಿಸುತ್ತಿವೆ.
ಪಶ್ಚಿಮ ಬಂಗಾಳದಲ್ಲಿ ಬೃಹತ್ ಸಮಾವೇಶಗಳನ್ನು ನಡೆಸಲಾಗುತ್ತಿದೆ. ಇತರೆ ರಾಜ್ಯಗಳಲ್ಲಿ ಅದನ್ನು ನಡೆಸಲಾಗುವುದಿಲ್ಲ. ಈ ಸಂದರ್ಭದಲ್ಲಿ ಸ್ವಯಂಪ್ರೇರಿತವಾಗಿ ಪರಿಗಣಿಸುವುದು ಹೇಗೆ? ಚುನಾವಣಾ ಸಮಾವೇಶಗಳು ಆರಂಭವಾಗುವುದಕ್ಕೂ ಮುನ್ನವೇ ಅದನ್ನು ಪರಿಗಣಿಸಬೇಕಿತ್ತು. ಇದು ನಿಜಕ್ಕೂ ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟು ಮಾಡಲಿದ್ದು, ಸುಪ್ರೀಂ ಕೋರ್ಟ್ ಇದನ್ನು ಹೇಗೆ ನೋಡಲಿದೆ ಎಂಬುದನ್ನು ಅದು ಆಧರಿಸಲಿದೆ.
ಪ್ರತಿ ರಾಜ್ಯದ ಮೇಲೆ ಸುಪ್ರೀಂ ಕೋರ್ಟ್ ಗಮನ ಇಡಲಾಗುತ್ತದೆಯೇ? ಸಮನ್ವಯತೆ ಸಾಧಿಸುವುದು ಹೇಗೆ? ನಾವು ತುರ್ತು ಸಂದರ್ಭದಲ್ಲಿದ್ದೇವೆ. ರಾಜ್ಯ ಸರ್ಕಾರಗಳಿಗೆ ನಿರ್ದೇಶನಗಳನ್ನು ನೀಡಬೇಕು. ದಿನವಹಿ ಕ್ರಮವಹಿಸುತ್ತಿದ್ದು, ತಿಂಗಳು ಕಾಯಲಾಗದು. ಹೈಕೋರ್ಟ್‌ಗಳು ಮಧ್ಯಪ್ರವೇಶಿಸದೇ ಇದ್ದರೆ ಅವುಗಳನ್ನು ತಡವರಿಸುವ ಸಾಧ್ಯತೆ ಇತ್ತು. ಪರಿಸ್ಥಿತಿ ಅರ್ಥ ಮಾಡಿಕೊಳ್ಳಲು ನಮ್ಮ ಹೈಕೋರ್ಟ್‌ಗೆ ಹಲವು ದಿನಗಳು ಬೇಕಾಯಿತು. ಈಗ ಅದು ಕಾರ್ಯಪ್ರವೃತ್ತವಾಗಿದೆ. ಸುಪ್ರೀಂ ಕೋರ್ಟ್ ಅದೇಗೆ ಅದನ್ನು ಪರಹರಿಸಲಿದೆಯೋ ತಿಳಿಯದು.
ಸದರಿ ಸ್ವಯಂಪ್ರೇರಿತ ಪ್ರಕರಣವು ಸಾಕಷ್ಟು ತಡ ಮಾಡಲಿದ್ದು, ಗೊಂದಲಕ್ಕೆ ಕಾರಣವಾಗಲಿದೆ. ಹೈಕೋರ್ಟ್‌ಗಳು ಸರಿಯಾದ ರೀತಿಯಲ್ಲಿ ಕ್ರಮಕೈಗೊಳ್ಳುತ್ತಿದ್ದು, ತಮ್ಮ ರಾಜ್ಯಗಳ ವಸ್ತುಸ್ಥಿತಿ ಅವುಗಳಿಗೆ ಗೊತ್ತಿದೆ. ಈ ಸಂದರ್ಭದಲ್ಲಿ ಹೈಕೋರ್ಟ್‌ಗಳ ಅಧಿಕಾರ ಕಸಿಯುವುದು ಸರಿಯಲ್ಲ.
ಸರ್ಕಾರದ ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್ ಪಡೆಯಬಹುದು. ಆದರೆ, ಪರಿಹಾರ ಕ್ರಮಕೈಗೊಳ್ಳುವ ಕೆಲಸವನ್ನು ಹೈಕೋರ್ಟ್‌ಗಳಿಗೆ ಬಿಡಬೇಕು. ಅಲಾಹಾಬಾದ್ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸುವ ಅಗತ್ಯತೆ ಇರಲಿಲ್ಲ. ಈಗ ಹೈಕೋರ್ಟ್‌ಗಳು ಪ್ರಕ್ರಿಯೆಯಿಂದ ಅಂತರ ಕಾಯ್ದುಕೊಳ್ಳಲಿದ್ದು, ಸುಪ್ರೀಂ ಕೋರ್ಟ್ ಆದೇಶಕ್ಕಾಗಿ ಕಾಯಲಿವೆ. ಈಗ ಪ್ರಕರಣಗಳನ್ನು ವರ್ಗಾಯಿಸುವುದು ಅಗತ್ಯವಿಲ್ಲ.
ಸುಪ್ರೀಂ ಕೋರ್ಟ್ ಆದೇಶವು ಕಾನೂನಿನಡಿ ಅಸಮರ್ಥನೀಯ. ಈ ಸಂದರ್ಭದಲ್ಲಿ ಹೀಗೆ ಮಾಡಲಾಗದು. ಪ್ರತಿಯೊಂದು ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿವೆ. ಹಲವು ದಿನಗಳವರೆಗೆ ಸದರಿ ವಿಚಾರವನ್ನು ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ತಡ ಮಾಡಿದ್ದೇಕೆ? ರಾಜ್ಯ ಕೇಂದ್ರಿತ ವಿಚಾರಗಳನ್ನು ಹೈಕೋರ್ಟ್‌ಗಳು ನಡೆಸುತ್ತವೆ. ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಸಮಸ್ಯೆಗಳು ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುತ್ತವೆ.
ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ಗಿಂತ ಹೆಚ್ಚಾಗಿ ಹೈಕೋರ್ಟ್‌ಗಳು ಕೆಲಸ ಮಾಡಿವೆ. ಕೋವಿಡ್‌ಗೆ ಸಂಬಂಧಿಸಿದಂತೆ ಹಲವು ವಿಚಾರಗಳಿಗೆ ಅವು ಸ್ಪಂದಿಸಿವೆ. ಇದು ಸುಪ್ರೀಂ ಕೋರ್ಟ್ ವಿಫಲತೆಯಲ್ಲದೆ ಮತ್ತೇನು ಅಲ್ಲ. ಇದು ಒಕ್ಕೂಟ ವ್ಯವಸ್ಥೆ ವಿರೋಧಿ ನಡೆ ಮಾತ್ರವಲ್ಲ, ಕಾರ್ಯಾಂಗದ ಕೈಗೊಂಬೆಯಂತೆ ಸುಪ್ರೀಂ ಕೋರ್ಟ್ ನಡೆದುಕೊಳ್ಳುವುದಾಗಿದೆ. ಇದರಿಂದ ಅರ್ಥವಾಗುವುದೇನೆಂದರೆ ನ್ಯಾಯಾಂಗ ಸ್ವತಂತ್ರವಾಗಿಲ್ಲ ಎಂಬುದಾಗಿದೆ.
226ನೇ ವಿಧಿಯು ಸಂವಿಧಾನದ ಮೂಲರಚನೆಯಾಗಿದ್ದು, 226ನೇ ವಿಧಿಯ ಅಡಿ ಹೈಕೋರ್ಟ್‌ಗಳು ತಮ್ಮ ಅಧಿಕಾರ ಚಲಾಯಿಸುವುದಕ್ಕೆ ತಡೆ ವಿಧಿಸಲಾಗದು. ಎಲ್ ಚಂದ್ರಕುಮಾರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ವತಃ ತಾನೇ ಅದನ್ನು ಪರಿಗಣಿಸಿದೆ. ಹೀಗಾಗಿ, ಹೈಕೋರ್ಟ್‌ಗಳನ್ನು ನಿರ್ಬಂಧಿಸಲಾಗದು.