ನಾಳೆ ಸುಪ್ರೀಂಕೋರ್ಟ್‌ನಲ್ಲಿ ಆಧಾರ್ ಮರುಪರಿಶೀಲನಾ ಅರ್ಜಿಗಳ ಗೌಪ್ಯ ವಿಚಾರಣೆ

ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ಡಿ ವೈ ಚಂದ್ರಚೂಡ್, ಅಶೋಕ್ ಭೂಷಣ್, ಎಸ್ ಅಬ್ದುಲ್ ನಜೀರ್ ಮತ್ತು ಬಿ ಆರ್ ಗವಾಯಿ ಅವರಿರುವ ಪೀಠ ನಾಳೆ (ಸೋಮವಾರ) ಮಧ್ಯಾಹ್ನ 1.30ಕ್ಕೆ ಪ್ರಕರಣ ಕೈಗೆತ್ತಿಕೊಳ್ಳಲಿದೆ.
ನಾಳೆ ಸುಪ್ರೀಂಕೋರ್ಟ್‌ನಲ್ಲಿ ಆಧಾರ್ ಮರುಪರಿಶೀಲನಾ ಅರ್ಜಿಗಳ ಗೌಪ್ಯ ವಿಚಾರಣೆ

ಆಧಾರ್ ಯೋಜನೆಯ ಸಾಂವಿಧಾನಿಕತೆಯನ್ನು ಎತ್ತಿಹಿಡಿದ 2018ರ ತೀರ್ಪಿನ ವಿರುದ್ಧ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಗಳನ್ನು ನಾಳೆ ಸುಪ್ರೀಂಕೋರ್ಟ್ ಗೌಪ್ಯ ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ಡಿ ವೈ ಚಂದ್ರಚೂಡ್, ಅಶೋಕ್ ಭೂಷಣ್, ಎಸ್ ಅಬ್ದುಲ್ ನಜೀರ್ ಮತ್ತು ಬಿ ಆರ್ ಗವಾಯಿ ಅವರಿರುವ ಪೀಠ ನಾಳೆ (ಸೋಮವಾರ) ಮಧ್ಯಾಹ್ನ 1.30ಕ್ಕೆ ಪ್ರಕರಣ ಕೈಗೆತ್ತಿಕೊಳ್ಳಲಿದೆ.

ವಿಚಾರಣೆಯನ್ನು ಜೂನ್‌ 9 ರಂದು ನಡೆಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ನ್ಯಾಯಮೂರ್ತಿ ಎಲ್‌ ನಾಗೇಶ್ವರ್‌ ರಾವ್‌ ಅವರು ಕೂಡ ಪೀಠದ ಭಾಗವಾಗಿದ್ದರು. ನ್ಯಾ. ರಾವ್‌ ಅವರು ಹಿಂದೆ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಪರ ವಾದ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಮುಂದೂಡಲಾಗಿತ್ತು. ಮಧ್ಯಾಹ್ನದ ಬಿಸಿಯೂಟಕ್ಕೆ ಆಧಾರ್‌ ಕಡ್ಡಾಯಗೊಳಿಸುವ ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು. ಜೂನ್ 9ರ ವಿಚಾರಣೆ ಮರು ನಿಗದಿಪಡಿಸುವ ನಿರ್ಧಾರಕ್ಕೆ ಈ ಅಂಶವೂ ಕಾರಣವಾಗಿದೆ. ನ್ಯಾ ರಾವ್‌ ಅವರಲ್ಲದೆ ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಅವರು ಕೂಡ ನಾಳಿನ ಪರಿಶೀಲನಾ ಅರ್ಜಿಗಳನ್ನು ಆಲಿಸುತ್ತಿಲ್ಲ. ಬದಲಾಗಿ ನ್ಯಾಯಮೂರ್ತಿಗಳಾದ ಅಬ್ದುಲ್‌ ನಜೀರ್‌ ಮತ್ತು ಬಿ ಆರ್‌ ಗವಾಯಿ ಅವರು ವಿಚಾರಣೆ ಕೈಗೆತ್ತಿಕೊಳ್ಳಲಿದ್ದಾರೆ.

2016 ರ ಆಧಾರ್ (ಆರ್ಥಿಕ ಮತ್ತು ಇತರ ಸಬ್ಸಿಡಿಗಳು, ಸವಲತ್ತುಗಳು ಮತ್ತು ಸೇವೆಗಳ ಉದ್ದೇಶಿತ ವಿತರಣೆ) ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಎತ್ತಿಹಿಡಿದ ತೀರ್ಪಿನ ವಿರುದ್ಧದ ಪರಿಶೀಲನೆಯನ್ನು ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸುವಂತೆ ಅರ್ಜಿದಾರರ ಪರವಾಗಿ ಹಾಜರಿದ್ದ ಹಿರಿಯ ವಕೀಲ ಶ್ಯಾಮ್ ದಿವಾನ್ ಒತ್ತಾಯಿಸಿದ್ದರು. ಆದರೂ ನ್ಯಾಯಾಲಯ ಪ್ರಕರಣವನ್ನು ಗೌಪ್ಯವಾಗಿ ವಿಚಾರಣೆ ನಡೆಸಲು ನಿರ್ಧರಿಸಿತು. 2018ರ ತೀರ್ಪಿನ ನಿಖರತೆ ಪ್ರಶ್ನಿಸುವ ಪ್ರಾಥಮಿಕ ಆಧಾರ ಎಂದರೆ ಈ ಕಾಯಿದೆಯನ್ನು "ಲೋಕಸಭೆಯ ಸ್ಪೀಕರ್ ಅವರು ಹಣಕಾಸು ಮಸೂದೆ “ ಎಂದು ತಪ್ಪಾಗಿ ಪ್ರಮಾಣೀಕರಿಸಿದ್ದಾರೆ” ಎಂಬುದಾಗಿದೆ.

ಪ್ರಸ್ತುತ ಪರಿಶೀಲನಾ ಪ್ರಕರಣ ಸಂವಿಧಾನದ ವ್ಯಾಖ್ಯಾನಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಒಳಗೊಂಡಿರುತ್ತದೆ. ಅದು ಮುಕ್ತ ನ್ಯಾಯಾಲಯದ ವಿಚಾರಣೆಗಾಗಿ ಮೌಖಿಕ ಸಲ್ಲಿಕೆಗಳನ್ನು ಬಯಸುತ್ತದೆ. ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ ಕೆ ಸಿಕ್ರಿ, ಎ ಎಂ ಖಾನ್ವಿಲ್ಕರ್, ಡಿ ವೈ ಚಂದ್ರಚೂಡ್ ಹಾಗೂ ಅಶೋಕ್ ಭೂಷಣ್ ಅವರಿದ್ದ ನ್ಯಾಯಪೀಠ 2018ರ ಸೆಪ್ಟೆಂಬರ್‌ನಲ್ಲಿ ತೀರ್ಪು ನೀಡಿತ್ತು. ತೀರ್ಪಿನ ವೇಳೆ ನ್ಯಾಯಮೂರ್ತಿ ಚಂದ್ರಚೂಡ್ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು.

Related Stories

No stories found.
Kannada Bar & Bench
kannada.barandbench.com