ಏಪ್ರಿಲ್ 4ರಿಂದ ಪೂರ್ಣ ಪ್ರಮಾಣದಲ್ಲಿ ಭೌತಿಕ ವಿಚಾರಣೆಗೆ ಮರಳಲಿರುವ ಸುಪ್ರೀಂ ಕೋರ್ಟ್

ವಕೀಲರು ಬಯಸಿದರೆ ಸೋಮವಾರ ಮತ್ತು ಶುಕ್ರವಾರ ಲಿಂಕ್‌ಗಳನ್ನು ನೀಡುತ್ತೇವೆ ಎಂದು ಸಿಜೆಐ ರಮಣ ತಿಳಿಸಿದರು.
ಏಪ್ರಿಲ್ 4ರಿಂದ ಪೂರ್ಣ ಪ್ರಮಾಣದಲ್ಲಿ ಭೌತಿಕ ವಿಚಾರಣೆಗೆ ಮರಳಲಿರುವ ಸುಪ್ರೀಂ ಕೋರ್ಟ್
ramesh sogemane

ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷಗಳಿಂದ ವರ್ಚುವಲ್‌ ವಿಧಾನ ಅಳವಡಿಸಿಕೊಂಡಿದ್ದ ಸುಪ್ರೀಂಕೋರ್ಟ್‌ ಇದೇ ಏಪ್ರಿಲ್ 4 ರಿಂದ ಪೂರ್ಣ ಪ್ರಮಾಣದ ಭೌತಿಕ ಕಾರ್ಯಚಟುವಟಿಕೆಗೆ ಮರಳಲಿದೆ.

ಮುಕ್ತ ನ್ಯಾಯಾಲಯದಲ್ಲಿ ಬುಧವಾರ ಈ ವಿಚಾರವನ್ನು ತಿಳಿಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ವಕೀಲರು ಬಯಸಿದರೆ ಸೋಮವಾರ ಮತ್ತು ಶುಕ್ರವಾರ ಲಿಂಕ್‌ಗಳನ್ನು ನೀಡುತ್ತೇವೆ ಎಂದು ತಿಳಿಸಿದರು. ನ್ಯಾಯವಾದಿಗಳ ಪರವಾಗಿ ಸುಪ್ರೀಂ ಕೋರ್ಟ್ ವಕೀಲರ ಸಂಘದ ​​ಅಧ್ಯಕ್ಷ ವಿಕಾಸ್ ಸಿಂಗ್ ಸಿಜೆಐಗೆ ಧನ್ಯವಾದ ಅರ್ಪಿಸಿದರು.

Also Read
[ಬೋರ್ಡ್‌ ಪರೀಕ್ಷೆಗಳು] ಭೌತಿಕ ಪರೀಕ್ಷೆ ವಿರೋಧಿಸಿರುವ ಅರ್ಜಿ; ನಾಳೆ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್‌

ಪ್ರಸ್ತುತ ನಾನ್‌ ಮಿಸಲೇನಿಯಸ್‌ ಪ್ರಕರಣಗಳನ್ನು ಆಲಿಸುವ ದಿನಗಳಾದ ಮಂಗಳವಾರ, ಬುಧವಾರ ಮತ್ತು ಗುರುವಾರದಂದು ಸುಪ್ರೀಂ ಕೋರ್ಟ್‌ ಭೌತಿಕವಾಗಿ ವಿಚಾರಣೆ ನಡೆಸುತ್ತಿದೆ. ಸೋಮವಾರ ಮತ್ತು ಶುಕ್ರವಾರದಂದು ವೀಡಿಯೊ ಕಾನ್ಫರೆನ್ಸ್ ಮೂಲಕ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ಮಾರ್ಚ್ 23, 2020 ರಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮೊಟ್ಟ ಮೊದಲ ಬಾರಿಗೆ ಸರ್ವೋಚ್ಚ ನ್ಯಾಯಾಲಯ ವರ್ಚುವಲ್‌ ವಿಧಾನದಲ್ಲಿ ವಿಚಾರಣೆ ನಡೆಸಿತ್ತು. ಕೋವಿಡ್‌ ಎರಡನೇ ಅಲೆಯಿಂದಾಗಿ ಭೌತಿಕ ವಿಚಾರಣೆಗೆ ಮರಳುವ ಅದರ ಚಿಂತನೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ಮೂರನೇ ಅಲೆ ಸಮಯದಲ್ಲಿ ಮತ್ತೊಮ್ಮೆ ವರ್ಚುವಲ್‌ ವಿಧಾನಕ್ಕೆ ಹೊರಳುವ ಮೊದಲು ಅದು ಸೀಮಿತ ನೆಲೆಯಲ್ಲಿ ಭೌತಿಕ ವಿಚಾರಣೆ ಆರಂಭಿಸಿತ್ತು. ಕೋವಿಡ್‌ ಸೋಂಕು ಇಳಿಮುಖವಾದಂತೆ ಫೆ. 2022ರಲ್ಲಿ ನಾನ್‌ ಮಿಸಲೇನಿಯಸ್‌ ದಿನಗಳಲ್ಲಿ ಆರಂಭವಾಗಿದ್ದ ಭೌತಿಕ ವಿಚಾರಣೆ ಇಲ್ಲಿಯವರೆಗೆ ಮುಂದುವರೆದಿತ್ತು.

Related Stories

No stories found.
Kannada Bar & Bench
kannada.barandbench.com