ತೀರ್ಪು, ಆದೇಶಗಳ ಸ್ವರೂಪದಲ್ಲಿ ಏಕರೂಪತೆ ಪಾಲಿಸಲು ಹೈಕೋರ್ಟ್‌ಗಳಿಗೆ ಸುಪ್ರೀಂ ತಾಕೀತು

ಎಲ್ಲಾ ಹೈಕೋರ್ಟ್‌ಗಳ ರಿಜಿಸ್ಟ್ರಾರ್‌ ಅವರಿಗೆ ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಅಹ್ಸಾನುದ್ದೀನ್‌ ಅಮಾನುಲ್ಲಾ ಅವರು ನಿರ್ದೆಶನ ನೀಡಿದ್ದಾರೆ.
Supreme Court of India
Supreme Court of India

ತಮ್ಮ ಆದೇಶ ಹಾಗೂ ತೀರ್ಪುಗಳಲ್ಲಿ ಏಕರೂಪ ಮಾದರಿಯನ್ನು ಅನುಸರಿಸುವಂತೆ ದೇಶಾದ್ಯಂತ ಇರುವ ಹೈಕೋರ್ಟ್‌ ಹಾಗೂ ನ್ಯಾಯಮಂಡಳಿಗಳಿಗೆ ಸುಪ್ರೀಂ ಕೋರ್ಟ್‌ ಗುರುವಾರ ತಾಕೀತು ಮಾಡಿದೆ. ಇದೇ ವೇಳೆ ಆದೇಶ, ತೀರ್ಪುಗಳಲ್ಲಿ ಪ್ಯಾರಾ ಸಂಖ್ಯೆಗಳನ್ನು ಉಲ್ಲೇಖಿಸಲು ಸಹ ಅದು ಸೂಚಿಸಿದೆ [ಬಿ ಎಸ್‌ ಹರಿ ಕಮಾಂಡಂಟ್‌ ವರ್ಸಸ್‌ ಭಾರತ ಸರ್ಕಾರ ಮತ್ತು ಇತರರು].

ಈ ವಿಚಾರವಾಗಿ ಎಲ್ಲಾ ಹೈಕೋರ್ಟ್‌ಗಳ ರಿಜಿಸ್ಟ್ರಾರ್‌ಗಳಿಗೆ ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಅಹ್ಸಾನುದ್ದೀನ್‌ ಅಮಾನುಲ್ಲಾ ಅವರ ನೇತೃತ್ವದ ವಿಭಾಗೀಯ ಪೀಠವು ನಿರ್ದೇಶನಗಳನ್ನು ನೀಡಿತು.

“ಎಲ್ಲಾ ನ್ಯಾಯಾಲಯ ಮತ್ತು ನ್ಯಾಯ ಮಂಡಳಿಗಳು ರೂಢಿಗತ ಅಭ್ಯಾಸದಂತೆ ಪ್ರತಿಯೊಂದು ಆದೇಶ ಮತ್ತು ತೀರ್ಪಿನ ಪ್ರತಿ ಪ್ಯಾರಾಗ್ರಾಪ್‌ಗೆ ಸಂಖ್ಯಾ ಸರಣಿ ನೀಡುವುದು ಅಪೇಕ್ಷಣೀಯ. ಪ್ಯಾರಾಗ್ರಾಪ್‌ ಸೇರಿದಂತೆ ಎಲ್ಲಾ ತೀರ್ಪು ಮತ್ತು ಆದೇಶಗಳಲ್ಲಿ ಏಕರೂಪ ನಿಯಮ ಪಾಲಿಸುವುದನ್ನು ಪರಿಗಣಿಸುವ ನಿಟ್ಟಿನಲ್ಲಿ ಈ ಆದೇಶವನ್ನು ಎಲ್ಲಾ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳ ಮುಂದಿಡಲು ಸಂಬಂಧಪಟ್ಟ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಈ ಆದೇಶವನ್ನು ಸೆಕ್ರೆಟರಿ ಜನರಲ್‌ ಅವರು ಕಳುಹಿಸಿಕೊಡಬೇಕು. ಈ ಸಂಬಂಧ ನ್ಯಾಯಾಲಯಗಳು, ನ್ಯಾಯ ಮಂಡಳಿಗಳು, ಅಧೀನ ನ್ಯಾಯಾಲಯಗಳಿಗೆ ಮುಖ್ಯ ನ್ಯಾಯಮೂರ್ತಿಗಳು ನಿರ್ದೇಶಿಸಬಹುದು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಪ್ರಕರಣವೊಂದರ ಕುರಿತಾದ 2010ರ ತನ್ನ ಆದೇಶದಲ್ಲಿ ಪ್ಯಾರಾಗ್ರಾಪ್‌ಗಳಿಗೆ ಸಂಖ್ಯೆಗಳನ್ನು ನೀಡಿರಲಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿಯನ್ನು ಸಲ್ಲಿಸಲಾಗಿತ್ತು. ಇದರ ವಿಚಾರಣೆ ವೇಳೆ ಹೈಕೋರ್ಟ್‌ ತೀರ್ಪಿನ ಸ್ವರೂಪವನ್ನು ಗಮನಿಸಿದ ಸುಪ್ರೀಂ ಕೋರ್ಟ್‌ ಏಕರೂಪತೆಯ ಕುರಿತಾದ ನಿರ್ದೇಶನ ನೀಡಿದೆ. ಇನ್ನು ಇದಕ್ಕೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ 1995ರ ಜನರಲ್‌ ಸೆಕ್ಯೂರಿಟಿ ಫೋರ್ಸ್‌ ನ್ಯಾಯಾಲಯದ ಆದೇಶ ಎತ್ತಿ ಹಿಡಿದಿದ್ದ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ ಬದಿಗೆ ಸರಿಸಿದೆ.

Related Stories

No stories found.
Kannada Bar & Bench
kannada.barandbench.com