ಹ್ಯಾಕ್ ಆದ ಸುಪ್ರೀಂ ಕೋರ್ಟ್ ಯೂಟ್ಯೂಬ್ ವಾಹಿನಿ

ಸಾಂವಿಧಾನಿಕ ಪೀಠಗಳೆದುರು ಪಟ್ಟಿ ಮಾಡಲಾದ ಪ್ರಕರಣಗಳು ಮತ್ತು ಗಮನಾರ್ಹ ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿರುವ ಪ್ರಕರಣಗಳ ವಿಚಾರಣೆ ಪ್ರಸಾರ ಮಾಡಲು ಸುಪ್ರೀಂ ಕೋರ್ಟ್ ಯೂಟ್ಯೂಬ್ ಬಳಸುತ್ತಿದೆ.
Supreme Court, Youtube
Supreme Court, Youtube
Published on

ಸುಪ್ರೀಂ ಕೋರ್ಟ್‌ ಯೂಟ್ಯೂಬ್‌ ವಾಹಿನಿ ಹ್ಯಾಕ್‌ ಆಗಿದ್ದು ಪ್ರಸ್ತುತ ಅಮೆರಿಕ ಮೂಲದ ರಿಪಲ್‌ ಲ್ಯಾಬ್ಸ್‌ ಅಭಿವೃದ್ಧಿಪಡಿಸಿದ ಕ್ರಿಪ್ಟೋಕರೆನ್ಸಿಯಾದ ಎಕ್ಸ್‌ಆರ್‌ಪಿಯನ್ನು ಪ್ರಚಾರ ಮಾಡುವ ವಿಡಿಯೋಗಳು ಅದರಲ್ಲಿ ಪ್ರಸಾರವಾಗುತ್ತಿವೆ.

ಸಾಂವಿಧಾನಿಕ ಪೀಠಗಳೆದುರು ಪಟ್ಟಿ ಮಾಡಲಾದ ಪ್ರಕರಣಗಳು ಮತ್ತು ಗಮನಾರ್ಹ ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿರುವ ಪ್ರಕರಣಗಳ ವಿಚಾರಣೆ  ಪ್ರಸಾರ ಮಾಡಲು ಸುಪ್ರೀಂ ಕೋರ್ಟ್ ಯೂಟ್ಯೂಬ್  ಬಳಸುತ್ತಿದೆ.

Also Read
ಹ್ಯಾಕರ್ ಶ್ರೀಕಿ ಸಹೋದರ ಸುದರ್ಶನ್‌ ವಿರುದ್ಧ ಇಡಿ ಸಮನ್ಸ್‌, ಎಲ್‌ಒಸಿ ರದ್ದುಪಡಿಸಿದ ಹೈಕೋರ್ಟ್‌

ಈಚೆಗೆ ಕೋಲ್ಕತ್ತಾದ ಆರ್‌ ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ತಾನು ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಿತ್ತು.

 ಹಿಂದಿನ ವಿಚಾರಣೆಗಳ ವಿಡಿಯೋಗಳನ್ನು ಹ್ಯಾಕರ್‌ಗಳು ಪ್ರೈವೇಟ್‌ ಲಿಸ್ಟ್‌ನಡಿ ಅಡಕಗೊಳಿಸಿದ್ದಾರೆ. "ಬ್ರಾಡ್ ಗಾರ್ಲಿಂಗ್‌ಹೌಸ್: Ripple Responds To The SEC's $2 Billion Fine! XRP PRICE PREDICTION" ಶೀರ್ಷಿಕೆಯು ಹ್ಯಾಕ್‌ ಆಗಿರುವ ಚಾನೆಲ್‌ನಲ್ಲಿ ಬಿತ್ತರವಾಗುತ್ತಿದೆ.

Also Read
ಬಿಟ್‌ ಕಾಯಿನ್‌ ಪ್ರಕರಣ: ಶ್ರೀಕಿ, ರಾಬಿನ್‌ ಖಂಡೇಲ್‌ವಾಲಾಗೆ ಜಾಮೀನು ಮಂಜೂರು ಮಾಡಿದ ತುಮಕೂರು ನ್ಯಾಯಾಲಯ

ಜನಪ್ರಿಯ ವಿಡಿಯೋ ಚಾನೆಲ್‌ಗಳನ್ನು ಹ್ಯಾಕರ್‌ಗಳು ಇತ್ತೀಚೆಗೆ ವಿಪರೀತವಾಗಿ ಹ್ಯಾಕ್‌ ಮಾಡುತ್ತಿದ್ದಾರೆ. ತನ್ನ ಸಿಇಒ ಬ್ರಾಡ್‌ ಗಾರ್ಲಿಂಗ್‌ ಹೌಸ್‌ ಅವರಂತೆ ಹ್ಯಾಕರ್‌ಗಳು ಸೋಗು ಹಾಕುವುದನ್ನು ತಡೆಯಲು ವಿಫಲವಾದ ಕಾರಣಕ್ಕೆ ಯೂಟ್ಯೂಬ್‌ ಮೇಲೆ ರಿಪಲ್‌ ಖುದ್ದು ಮೊಕದ್ದಮೆ ಹೂಡಿತ್ತು.

ಯೂಟ್ಯೂಬ್ ವಾಹಿನಿ ಹ್ಯಾಕಿಂಗ್ ಬಗ್ಗೆ ಸುಪ್ರೀಂ ಕೋರ್ಟ್ ಆಡಳಿತ ಪ್ರಸ್ತುತ ಪರಿಶೀಲನೆ ನಡೆಸುತ್ತಿದೆ ಎಂದು ಅಧಿಕೃತ ಮೂಲಗಳು 'ಬಾರ್ & ಬೆಂಚ್‌ʼಗೆ ತಿಳಿಸಿವೆ.

Kannada Bar & Bench
kannada.barandbench.com