ಎನ್‌ಡಿಟಿವಿ ಸಂಸ್ಥಾಪಕರಾದ ಪ್ರಣಯ್, ರಾಧಿಕಾ ರಾಯ್ ವಿದೇಶ ಪ್ರವಾಸಕ್ಕೆ ಅನುಮತಿ ನೀಡಿದ ದೆಹಲಿ ಹೈಕೋರ್ಟ್

ಜೂನ್ 2017 ಮತ್ತು ಆಗಸ್ಟ್ 2019ರಲ್ಲಿ ದಾಖಲಿಸಲಾಗಿದ್ದ ಎರಡು ಎಫ್ಐಆರ್‌ಗಳಿಗೆ ಸಂಬಂಧಿಸಿದಂತೆ ದಂಪತಿ ವಿರುದ್ಧ ಸಿಬಿಐ ಲುಕೌಟ್ ಸುತ್ತೋಲೆ (ಎಲ್ಒಸಿ) ಹೊರಡಿಸಿತ್ತು.
ಎನ್‌ಡಿಟಿವಿ ಸಂಸ್ಥಾಪಕರಾದ ಪ್ರಣಯ್, ರಾಧಿಕಾ ರಾಯ್ ವಿದೇಶ ಪ್ರವಾಸಕ್ಕೆ ಅನುಮತಿ ನೀಡಿದ ದೆಹಲಿ ಹೈಕೋರ್ಟ್
Published on

ಪತ್ರಕರ್ತರು ಹಾಗೂ ಎನ್‌ಡಿಟಿವಿ ಸಂಸ್ಥಾಪಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ದಂಪತಿ ವಿದೇಶ ಪ್ರವಾಸಕ್ಕೆ ದೆಹಲಿ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ.

ಸಿಬಿಐ ವಿವಿಧ ಆರೋಪಗಳನ್ನು ಮಾಡಿದ್ದರೂ ಕೂಡ ಅವರು ದೇಶದಿಂದ ಪಲಾಯನ ಮಾಡುತ್ತಾರೆ ಎನ್ನುವುದಕ್ಕೆ ಯಾವುದೇ ಆಧಾರವಿಲ್ಲ ಎಂದು ನ್ಯಾ. ಯಶವಂತ್‌ ಶರ್ಮಾ ಅವರಿದ್ದ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿತು.

Also Read
ಷೇರುದಾರರಿಂದ ದರ ಸಂವೇದಿ ಮಾಹಿತಿ ಬಚ್ಚಿಟ್ಟ ಆರೋಪ: ಪ್ರಣಯ್‌, ರಾಧಿಕಾ, ಆರ್‌ಆರ್‌ಪಿಆರ್‌‌ಗೆ ₹27 ಕೋಟಿ ದಂಡ

ಅರ್ಜಿದಾರರು ತನಿಖೆಗೆ ಸಹಕರಿಸಲು ವಿಫಲರಾಗಿದ್ದಾರೆ ಎಂಬುದು ಸಾಬೀತಾಗಿಲ್ಲ. ಅರ್ಜಿದಾರರ ಪರ ಲಭ್ಯವಿರುವ ಸಾಕ್ಷ್ಯಗಳಿಂದ ಅವರು ದೇಶದೊಂದಿಗೆ ಆಳವಾದ ಸಂಬಂಧ ಹೊಂದಿದ್ದು ಅವರು ಕೋರಿರುವ ಮಧ್ಯಂತರ ಅನುಮತಿ ಸ್ವೀಕಾರಾರ್ಹವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಬರುವ ಆಗಸ್ಟ್ 1ರಿಂದ ಆಗಸ್ಟ್ 30ರವರೆಗೆ ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ಪ್ರಣಯ್ ಮತ್ತು ರಾಧಿಕಾ ರಾಯ್ ಸಲ್ಲಿಸಿದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಜೂನ್ 2017 ಮತ್ತು ಆಗಸ್ಟ್ 2019ರಲ್ಲಿ ದಾಖಲಿಸಲಾಗಿದ್ದ ಎರಡು ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ದಂಪತಿ ವಿರುದ್ಧ ಸಿಬಿಐ ಲುಕೌಟ್‌ ಸುತ್ತೋಲೆ (ಎಲ್‌ಒಸಿ) ಹೊರಡಿಸಿತ್ತು.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Attachment
PDF
Prannoy_Roy_order.pdf
Preview
Kannada Bar & Bench
kannada.barandbench.com