ಹಿಂದೂ ಉತ್ತರಾಧಿಕಾರ ಕಾಯಿದೆ, 1958ರ ಸೆಕ್ಷನ್ 15ರ ಸಿಂಧುತ್ವವನ್ನು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ಪರಿಶೀಲಿಸಲಿದೆ. ಕಾಯಿದೆಯು ಉಯಿಲು ಮಾಡದೆ ತೀರಿಕೊಳ್ಳುವ ಪುರುಷನ ಆಸ್ತಿ ವಿಲೇವಾರಿಗೆ ಹೋಲಿಸಿದರೆ ಉಯಿಲು ಮಾಡದೆ ತೀರಿಕೊಳ್ಳುವ ಮಹಿಳೆಯ ಆಸ್ತಿಯ ವಿಲೇವಾರಿ ವಿಷಯದಲ್ಲಿ ತಾರತಮ್ಯವೆಸಗುತ್ತದೆ ಎಂದು ಆರೋಪಿಸಲಾಗಿದೆ. ಪ್ರಕರಣವನ್ನು ಆಲಿಸಿದ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಸೂರ್ಯ ಕಾಂತ್ ಅವರ ವಿಭಾಗೀಯ ಪೀಠವು ಪ್ರಕರಣವನ್ನು ತ್ರಿಸದಸ್ಯ ಪೀಠದ ಮುಂದೆ ಇರಿಸುವುದು ಸೂಕ್ತವೆಂದು ಹೇಳಿ ಫೆಬ್ರವರಿ 10ಕ್ಕೆ ಪಟ್ಟಿ ಮಾಡಿತು.