ನ್ಯಾಯಾಂಗದಲ್ಲಿ ತೋರಿಕೆಗೆ ಮಹಿಳೆಯರ ಸಂಖ್ಯೆ ಹೆಚ್ಚಿಸಿದರೆ ದೀರ್ಘಾವಧಿಯಲ್ಲಿ ಅದು ಅವರಿಗೆ ಮಾರಕ: ತುಷಾರ್‌ ಮೆಹ್ತಾ

ಸಾಂಕೇತಿಕವಾಗಿ ಯಾವುದೇ ಕ್ರಮಗಳ ಅಗತ್ಯವಿಲ್ಲದೆಯೂ ಮಹಿಳೆಯರು ಕಾನೂನು ವೃತ್ತಿಯಲ್ಲಿ ಯಶಸ್ವಿಯಾಗಲು ಸಮರ್ಥರಾಗಿದ್ದು ಅವರು ಹಾಗಾಗಿರುವುದು ಮಹಿಳೆ ಎಂಬ ಕಾರಣಕ್ಕಾಗಿ ಅಲ್ಲ ಮಹಿಳೆಯಾಗಿದ್ದರೂ ಸಾಧಿಸಿರುವ ಕಾರಣಕ್ಕಾಗಿ ಎಂದು ಅವರು ಹೇಳಿದರು.
ಎಸ್ ಜಿ ತುಷಾರ್ ಮೆಹ್ತಾ
ಎಸ್ ಜಿ ತುಷಾರ್ ಮೆಹ್ತಾ

ಕಾನೂನು ವೃತ್ತಿಯಲ್ಲಿ ಮಹಿಳೆಯರನ್ನು ಉತ್ತೇಜಿಸಲು ಹಾಗೂ ವಕೀಲಿಕೆ ಮತ್ತು ನ್ಯಾಯಾಂಗದಲ್ಲಿ ಅವರ ಪ್ರಾತಿನಿಧ್ಯ ಹೆಚ್ಚಿಸಲು ಕೈಗೊಳ್ಳುವ ಸಾಂಕೇತಿಕ ಕ್ರಮಗಳು ದೀರ್ಘಾವಧಿಯಲ್ಲಿ ಅವರ ಹಿತಾಸಕ್ತಿಗಳಿಗೆ ವಿರುದ್ಧವಾಗುತ್ತವೆ ಎಂದು ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಹೇಳಿದರು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಭಾರತೀಯ ಕಾನೂನು ಸಂಸ್ಥೆಗಳ ಮಹಿಳಾ ಸಮೂಹ ಸಮಾಜ (ಎಸ್‌ಐಎಲ್‌ಎಫ್‌) ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

SILF - ಅಂತರರಾಷ್ಟ್ರೀಯ ಮಹಿಳಾ ದಿನ
SILF - ಅಂತರರಾಷ್ಟ್ರೀಯ ಮಹಿಳಾ ದಿನ

ಮೆಹ್ತಾ ಅವರ ಭಾಷಣದ ಪ್ರಮುಖಾಂಶಗಳು

  • ವೃತ್ತಿಪರ ಸ್ಥಾನಗಳು ಚುನಾಯಿತ ಹುದ್ದೆಗಿಂತಲೂ ಭಿನ್ನವಾಗಿದ್ದು ಅಲ್ಲಿ ಮಹಿಳೆಯರಿಗೆ ನಾಯಕತ್ವದ ಪಾತ್ರ ನೀಡುವುದಕ್ಕಾಗಿ ವಿಶೇಷ ಹುದ್ದೆಗಳನ್ನು ಕಾಯ್ದಿರಿಸುವ ಅವಶ್ಯಕತೆಯಿದೆ.

  • ಸಾಂಕೇತಿಕವಾಗಿ ಯಾವುದೇ ಕ್ರಮಗಳ ಅಗತ್ಯವಿಲ್ಲದೆಯೂ ಮಹಿಳೆಯರು ಕಾನೂನು ವೃತ್ತಿಯಲ್ಲಿ ಯಶಸ್ವಿಯಾಗಲು ಸಮರ್ಥರಾಗಿದ್ದು ಅವರು ಹಾಗಾಗಿರುವುದು ಮಹಿಳೆ ಎಂಬ ಕಾರಣಕ್ಕಾಗಿ ಅಲ್ಲ, ಬದಲಿಗೆ ಮಹಿಳೆಯಾಗಿದ್ದರೂ ಸಾಧಿಸಿರುವ ಕಾರಣಕ್ಕಾಗಿ.

  • ಮಹಿಳೆಯರನ್ನು ಕೇವಲ ಅಂಕಿಅಂಶಗಳಾಗಿ ನೋಡುವುದು ಸರಿಯಾದ ವಿಧಾನವಲ್ಲ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ದೇಶ ಕಂಡ ಅತ್ಯಂತ ಶಕ್ತಿಶಾಲಿ ಪ್ರಧಾನಿಗಳಲ್ಲಿ ಒಬ್ಬರೆಂದು ನೆನೆಯಲಾಗುತ್ತದೆ.

  • ನ್ಯಾಯಾಂಗ ಅಥವಾ ಶಾಸಕಾಂಗದಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಅಗತ್ಯವಿದೆಯೇ? ಅಂಕಿಅಂಶಗಳಲ್ಲಿ ಯಶಸ್ಸನ್ನು ಎಣಿಸುವುದು ಮಹಿಳೆಯರಿಗೆ ಮಾಡುವ ಅಪಮಾನ.

  • ಮಹಿಳೆಯರು ಈಗಾಗಲೇ ಪುರುಷರಿಗಿಂತ ಮುಂದಿದ್ದು ಮಹತ್ವಾಕಾಂಕ್ಷೆಯೊಂದಿಗೆ ಮುಂದುವರಿಯಲು ಬಯಸುವುದನ್ನು ಹುಬ್ಬು ಗಂಟಿಕ್ಕಿ ನೋಡಲಾಯಿತಾದರೂ ಭಾರತ ಸದಾ ಮಹಿಳೆಯರನ್ನು ಪೂಜಿಸುತ್ತದೆ. ಅವರನ್ನು ದೇವತೆಗಳೆಂದು ಆರಾಧಿಸಲಾಗುತ್ತದೆ. ಮಹಿಳೆಯರಿಗೆ ಸಂಬಂಧಿಸಿದಂತೆ ಶ್ರೇಷ್ಠತೆಯ ಮನೋಭಾವ ಇದೆ.

  • ಸಮಾನತೆಯ ಆಂದೋಲನವನ್ನು ಪುರುಷರು ಪುರುಷರಿಂದಲೇ ಆರಂಭಿಸಬೇಕು.

ಎಸ್ಐಎಲ್ಎಫ್ ಅಧ್ಯಕ್ಷರಾದ ಡಾ. ಲಲಿತ್ ಭಾಸಿನ್ ಅವರು ಪ್ರಮುಖ ಹುದ್ದೆ ಮತ್ತು ಸಂಸ್ಥೆಗಳಲ್ಲಿ ಮಹಿಳೆಯರು ಇಲ್ಲಿದಿರುವ ಬಗ್ಗೆ ವಿಷಾದಿಸಿದರು. ಹಮ್ಮುರಾಬಿ & ಸೊಲೊಮನ್ ಪಾಲುದಾರ ಸಂಸ್ಥೆಯ ವ್ಯವಸ್ಥಾಪಕ ಪಾಲುದಾರರಾದ ಶ್ವೇತಾ ಭಾರತಿ ಮಾತನಾಡಿದರು.

Related Stories

No stories found.
Kannada Bar & Bench
kannada.barandbench.com