ವರ್ಗಾವಣೆ ಸರ್ಕಾರಿ ನೌಕರರ ಹಕ್ಕು ಎನ್ನಲಾಗದು: ಮದ್ರಾಸ್ ಹೈಕೋರ್ಟ್ [ಚುಟುಕು]

ವರ್ಗಾವಣೆ ಸರ್ಕಾರಿ ನೌಕರರ ಹಕ್ಕು ಎನ್ನಲಾಗದು: ಮದ್ರಾಸ್ ಹೈಕೋರ್ಟ್ [ಚುಟುಕು]

Justice S.M. Subramaniam

ಯಾವುದೇ ಸರ್ಕಾರಿ ಉದ್ಯೋಗಿಯು ವರ್ಗಾವಣೆಯನ್ನು ಹಕ್ಕು ಎಂದು ಸಾಧಿಸಲಾಗದು ಎಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಗುರುವಾರ ಹೇಳಿದೆ. ವರ್ಗಾವಣೆ ಎಂಬುದು ಸೇವೆಗೆ ಪ್ರಾಸಂಗಿಕವಾದುದಾಗಿದ್ದು ಅದರಲ್ಲಿ ನೀಡುವ ವಿನಾಯಿತಿಯನ್ನು ಎಂದಿಗೂ ಹಕ್ಕು ಎನ್ನಲಾಗದು ಎಂದು ನ್ಯಾ. ಎಸ್‌ ಎಂ ಸುಬ್ರಮಣ್ಯಂ ಅವರಿದ್ದ ಏಕಸದಸ್ಯ ಪೀಠ ತಿಳಿಸಿತು.

ಸರ್ಕಾರಿ ಉದ್ಯೋಗಿಯೊಬ್ಬರು ವರ್ಗಾವಣೆ ಕೌನ್ಸೆಲಿಂಗ್‌ ವೇಳೆ ತಮ್ಮನ್ನು ಪಟ್ಟಿಯಲ್ಲಿ ಸೇರಿಸಬೇಕು ಹಾಗೂ ಆದ್ಯತೆಯಲ್ಲಿ ಪರಿಗಣಿಸಬೇಕು ಎಂದು ಕೋರಿದ್ದ ಪ್ರಕರಣ ಇದಾಗಿದೆ. ಸಾರ್ವಜನಿಕ ಹಿತಾಸಕ್ತಿಯಿಂದ ವರ್ಗಾವಣೆ ಕೈಗೊಳ್ಳುವುದು ಸರ್ಕಾರದ ಅಧಿಕಾರಕ್ಕೆ ಒಳಪಡುವಂತಹದ್ದು ಎಂದ ಪೀಠವು ಅರ್ಜಿಯನ್ನು ವಿಲೇವಾರಿ ಮಾಡಿತು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com