ಮಹತ್ವದ ಪ್ರಕರಣಗಳಲ್ಲಿ ಜಾಮೀನು ನೀಡಲು ವಿಚಾರಣಾ ನ್ಯಾಯಾಲಯಳಿಗೆ ಇರುವ ನಿರಾಸಕ್ತಿ ಅಸ್ವಸ್ಥತೆಯ ಲಕ್ಷಣ: ಕಪಿಲ್ ಸಿಬಲ್

ತಮ್ಮ ತೀರ್ಪುಗಳನ್ನು ತಮ್ಮ ವಿರುದ್ಧವೇ ಚಲಾಯಿಸುವುದಿಲ್ಲ ಎಂಬ ಭರವಸೆ ವಿಚಾರಣಾ ಮತ್ತು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರುಗಳಿಗೆ ದೊರೆತರೆ ಆಗ ಅವರು ಭಯವಿಲ್ಲದೆ ನ್ಯಾಯದಾನ ಮಾಡಬಲ್ಲರು ಎಂದು ಸಿಬಲ್ ತಿಳಿಸಿದರು.
Senior Advocate Kapil Sibal at his Hailey road residence
Senior Advocate Kapil Sibal at his Hailey road residence
Published on

ಮಹತ್ವದ ಪ್ರಕರಣಗಳಲ್ಲಿ ಜಾಮೀನು ನೀಡಲು ವಿಚಾರಣಾ ನ್ಯಾಯಾಲಯಗಳು ತೋರುತ್ತಿರುವ ಹಿಂಜರಿಕೆ ನಮ್ಮ ಪ್ರಜಾಪ್ರಭುತ್ವದಲ್ಲಿ ಉಂಟಾಗಿರುವ ಅಸ್ವಸ್ಥತೆಯ ಲಕ್ಷಣ ಎಂದು ಹಿರಿಯ ವಕೀಲ ಮತ್ತು ಸುಪ್ರೀಂ ಕೋರ್ಟ್ ವಕೀಲರ ಸಂಘದ ​​(ಎಸ್‌ಸಿಬಿಎʻ) ಅಧ್ಯಕ್ಷ  ಕಪಿಲ್ ಸಿಬಲ್ ಹೇಳಿದರು. .

ಸುಪ್ರೀಂ ಕೋರ್ಟ್ 75ನೇ ವರ್ಷಾಚರಣೆ ಅಂಗವಾಗಿ ಭಾನುವಾರ ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ನ್ಯಾಯಾಂಗದ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಸಮಾರಂಭದಲ್ಲಿ ಸಿಜೆಐ ಡಿ ವೈ ಚಂದ್ರಚೂಡ್‌,  ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಕೂಡ ಭಾಗಿಯಾಗಿದ್ದರು.

ತಾವು ತಮ್ಮ ಅನುಭವದ ಮೂಸೆಯಲ್ಲಿ ಮಾತನಾಡುತ್ತಿದ್ದು ಈ ಹಿಂಜರಿಕೆ ಉನ್ನತ ನ್ಯಾಯಾಲಯಗಳ ಮೇಲೆ ಹೊರೆ ಹೆಚ್ಚಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಹಿಂದೆ ವಿವಿಧ ಸಂದರ್ಭಗಳಲ್ಲಿ ತಿಳಿಸಿದ್ದಾರೆ ಎಂದರು.

ಸಿಬಲ್‌ ಅವರ ಭಾಷಣದ ಪ್ರಮುಖಾಂಶಗಳು

  • ವಿಚಾರಣಾ ನ್ಯಾಯಾಲಯ, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳು ಕೆಲವು ಮಹತ್ವದ ವಿಷಯಗಳಲ್ಲಿ ಜಾಮೀನು ನೀಡುವುದನ್ನು ನಾನು ನನ್ನ ವೃತ್ತಿ ಜೀವನದಲ್ಲಿ ಕಂಡಿರುವುದು ವಿರಳ. ಇದು ಕೇವಲ ನನ್ನ ಅನುಭವ ಅಲ್ಲ.

  • ಕೆಳ ನ್ಯಾಯಾಲಯಗಳಲ್ಲಿ ಜಾಮೀನಿಗೆ ಆದ್ಯತೆ ದೊರೆಯುತ್ತಿಲ್ಲ. ಜಾಮೀನು ತಡೆಯುವ ಯಾವುದೇ ಯತ್ನ ನ್ಯಾಯಾಂಗದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.

  •  ತಮ್ಮ ತೀರ್ಪುಗಳನ್ನು ತಮ್ಮ ವಿರುದ್ಧವೇ ಚಲಾಯಿಸುವುದಿಲ್ಲ ಎಂಬ ಭರವಸೆ ವಿಚಾರಣಾ ಮತ್ತು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರುಗಳಿಗೆ ದೊರೆತರೆ ಆಗ ಅವರು ಭಯವಿಲ್ಲದೆ ನ್ಯಾಯದಾನ ಮಾಡಬಲ್ಲರು.

  • ಜನಸಂಖ್ಯೆಗೆ ಅನುಗುಣವಾಗಿ ಭಾರತದಲ್ಲಿ ನ್ಯಾಯಾಧೀಶರ ಸಂಖ್ಯೆ ಕಡಿಮೆಯಾಗಿದ್ದು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ.

Kannada Bar & Bench
kannada.barandbench.com