ಅತ್ಯಾಚಾರ ಸಂತ್ರಸ್ತೆಗೆ ಲೈಂಗಿಕ ಕಿರುಕುಳ ಆರೋಪ: ಸಿವಿಲ್ ನ್ಯಾಯಾಧೀಶರ ವರ್ಗ ಮಾಡಿದ ತ್ರಿಪುರ ಹೈಕೋರ್ಟ್

ತನ್ನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸಲು ಫೆಬ್ರವರಿ 16ರಂದು ಕಮಲಪುರದ ಪ್ರಥಮ ದರ್ಜೆ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್ ಅವರ ಕೊಠಡಿಗೆ ಭೇಟಿ ನೀಡಿದಾಗ ಅವರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರಿದ್ದರು.
ತ್ರಿಪುರ ಹೈಕೋರ್ಟ್
ತ್ರಿಪುರ ಹೈಕೋರ್ಟ್

ಅತ್ಯಾಚಾರ ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಕಮಲಪುರದ ಸಿವಿಲ್ ನ್ಯಾಯಾಧೀಶ ಬಿಶ್ವತೋಷ್ ಧರ್ ಅವರನ್ನು ತ್ರಿಪುರ ಹೈಕೋರ್ಟ್ ವರ್ಗಾವಣೆ ಮಾಡಿದೆ.

ಆರೋಪಿ ಸ್ಥಾನದಲ್ಲಿರುವ ನ್ಯಾಯಾಂಗ ಅಧಿಕಾರಿಯನ್ನು ಹೈಕೋರ್ಟ್‌ಗೆ ವರ್ಗಾಯಿಸಲಾಗುತ್ತಿದ್ದು ಭವಿಷ್ಯದಲ್ಲಿ ಸ್ಥಳ ನಿಯೋಜನೆಗಾಗಿ ಕಡ್ಡಾಯ ನಿರೀಕ್ಷಣೆಯಲ್ಲಿ ಅವರನ್ನು ಇರಿಸಲಾಗುವುದು ಎಂದು ಫೆಬ್ರವರಿ 23ರಂದು ಹೈಕೋರ್ಟ್ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಮುಂದಿನ ಆದೇಶದವರೆಗೆ ಕಮಲಪುರದ ಸಿವಿಲ್ ನ್ಯಾಯಾಧೀಶ ಹುದ್ದೆಯ (ಪ್ರಥಮ ದರ್ಜೆ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್) ಉಸ್ತುವಾರಿಯನ್ನು ಇನ್ನೊಬ್ಬ ನ್ಯಾಯಾಧೀಶರಿಗೆ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆರೋಪಿ ನ್ಯಾಯಾಧೀಶ ಧರ್ ಕೂಡಲೇ ಹೈಕೋರ್ಟ್‌ಗೆ ವರದಿ ಮಾಡಿಕೊಳ್ಳುವಂತೆ ನಿರ್ದೇಶಿಸಲಾಗಿದೆ.

ತನ್ನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸಲು ಫೆಬ್ರವರಿ 16ರಂದು ಕಮಲಪುರದ ಪ್ರಥಮ ದರ್ಜೆ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್ ಅವರ ಕೊಠಡಿಗೆ ಭೇಟಿ ನೀಡಿದಾಗ ನ್ಯಾಯಾಧೀಶರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರಿದ್ದು ವರದಿಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಪತಿ ಕಮಲಪುರ ವಕೀಲರ ಸಂಘಕ್ಕೆ ಪ್ರತ್ಯೇಕ ದೂರು ನೀಡಿದ್ದರು ಎಂದು ತಿಳಿದುಬಂದಿತ್ತು. ನಂತರ, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗೌತಮ್ ಸರ್ಕಾರ್ ನೇತೃತ್ವದ ತ್ರಿಸದಸ್ಯ ಸಮಿತಿ ಆರೋಪಗಳ ಬಗ್ಗೆ ತನಿಖೆ ಆರಂಭಿಸಿತ್ತು.

[ಅಧಿಸೂಚನೆಯ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Notification.pdf
Preview

Related Stories

No stories found.
Kannada Bar & Bench
kannada.barandbench.com