[ಚುಟುಕು] ತ್ರಿಪುರ ಹಿಂಸಾಚಾರ ಪ್ರಕರಣ: ರಾಜ್ಯ ಸರ್ಕಾರದ್ದು ವಿತಂಡವಾದ ಎಂದ ವಕೀಲ ಪ್ರಶಾಂತ್ ಭೂಷಣ್

Supreme court and Tripura Violence

Supreme court and Tripura Violence

Published on

ಕಳೆದ ಅಕ್ಟೋಬರ್‌ನಲ್ಲಿ ನಡೆದ ತ್ರಿಪುರ ಹಿಂಸಾಚಾರ ಮತ್ತು ದ್ವೇಷಾಪರಾಧದ ತನಿಖೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅಫಿಡವಿಟ್‌ ವಿತಂಡವಾದದಿಂದ ತುಂಬಿದೆ ಎಂದು ವಕೀಲ ಪ್ರಶಾಂತ್‌ ಭೂಷಣ್‌ ಸೋಮವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದರು. ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ವಕೀಲ ಎಹ್ತೇಷಾಮ್ ಹಶ್ಮಿ ಅವರು ಸಲ್ಲಿಸಿದ್ದ ಅರ್ಜಿ ಆಯ್ಕೆಯ ಸ್ವರೂಪದ್ದಾಗಿದೆ ಎಂದು ತಿಳಿಸಿದ್ದ ತ್ರಿಪುರ ಸರ್ಕಾರದ ಅಫಿಡವಿಟ್‌ಗೆ ಪ್ರತಿಕ್ರಿಯೆಯಾಗಿ ಭೂಷಣ್‌ ವಾದ ಮಂಡಿಸಿದರು. ಇಂತಹ ವಿಷಯದಲ್ಲಿ ವಿತಂಡವಾದ ರಾಜ್ಯ ಸರ್ಕಾರಕ್ಕೆ ತಕ್ಕುದಲ್ಲ ಎಂದು ಅವರು ಹೇಳಿದರು. ನ್ಯಾಯಾಲಯವು ಭೂಷಣ್‌ ಅವರಿಗೆ ಪ್ರತ್ಯುತ್ತರ ಅಫಿಡವಿಟ್‌ ಸಲ್ಲಿಸಲು ಇದೇ ವೇಳೆ ಸಮಯಾವಕಾಶ ನೀಡಿತು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Kannada Bar & Bench
kannada.barandbench.com