ಸಾಲಿಸಿಟರ್‌ ಜನರಲ್‌ ಆಗಿ ತುಷಾರ್‌ ಮೆಹ್ತಾ, ಎಎಸ್‌ಜಿಗಳಾಗಿ ಆರು ಮಂದಿ ಮರು ನೇಮಕ

ವಿಕ್ರಮಜಿತ್‌ ಬ್ಯಾನರ್ಜಿ, ಕೆ ಎಂ ನಟರಾಜ್‌, ಬಲ್ಬೀರ್‌ ಸಿಂಗ್‌, ಎಸ್‌ ವಿ ರಾಜು, ಎನ್‌ ವೆಂಕಟರಾಮನ್‌ ಮತ್ತು ಐಶ್ವರ್ಯಾ ಭಾಟಿ ಅವರನ್ನು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ಗಳನ್ನಾಗಿ ಮರು ನೇಮಕ ಮಾಡಲಾಗಿದೆ.
Solicitor General of India Tushar Mehta
Solicitor General of India Tushar Mehta

ಮೂರು ವರ್ಷಗಳ ಅವಧಿಗೆ ತುಷಾರ್‌ ಮೆಹ್ತಾ ಅವರನ್ನು ಸಾಲಿಸಿಟರ್‌ ಜನರಲ್‌ ಆಗಿ ಮರು ನೇಮಕ ಮಾಡುವುದಕ್ಕೆ ಕೇಂದ್ರ ಸಂಪುಟದ ನೇಮಕಾತಿ ಸಮಿತಿಯು ಶುಕ್ರವಾರ ಒಪ್ಪಿಗೆ ನೀಡಿದೆ.

ವಿಕ್ರಮಜಿತ್‌ ಬ್ಯಾನರ್ಜಿ, ಕೆ ಎಂ ನಟರಾಜ್‌, ಬಲ್ಬೀರ್‌ ಸಿಂಗ್‌, ಎಸ್‌ ವಿ ರಾಜು, ಎನ್‌ ವೆಂಕಟರಾಮನ್‌ ಮತ್ತು ಐಶ್ವರ್ಯಾ ಭಾಟಿ ಅವರನ್ನು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ಗಳಾಗಿ ಮರು ನೇಮಕ ಮಾಡಲಾಗಿದೆ.

ಮಾಧವಿ ದಿವಾನ್‌, ಸಂಜಯ್‌ ಜೈನ್‌ ಮತ್ತು ಜಯಂತ್‌ ಕೆ ಸೂದ್‌ ಅವರನ್ನು ಎಎಸ್‌ಜಿಗಳನ್ನಾಗಿ ಮುಂದುವರಿಸಲಾಗಿಲ್ಲ.

Kannada Bar & Bench
kannada.barandbench.com