[ಚುಟುಕು] ಮುಸ್ಲಿಂ ನಾಯಕರ ದ್ವೇಷ ಭಾಷಣಗಳ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಹಿಂದೂ ಸಂಘಟನೆಗಳು

[ಚುಟುಕು] ಮುಸ್ಲಿಂ ನಾಯಕರ ದ್ವೇಷ ಭಾಷಣಗಳ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಹಿಂದೂ ಸಂಘಟನೆಗಳು

Supreme Court

ಹಿಂದೂಗಳು ಹಾಗೂ ಹಿಂದೂ ದೈವಗಳನ್ನು ಅವಮಾನಿಸಿ ದ್ವೇಷಭಾಷಣ ಮಾಡಿರುವ ಘಟನೆಗಳ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಕೋರಿ ಹಿಂದೂ ಫ್ರಂಟ್‌ ಫಾರ್ ಜಸ್ಟೀಸ್‌ ಮತ್ತು ಹಿಂದೂ ಸೇನೆ ಎನ್ನುವ ಎರಡು ಸಂಘಟನೆಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿವೆ. ಹರಿದ್ವಾರ ಧರ್ಮಸಂಸದ್‌ನಲ್ಲಿ ಮುಸ್ಲಿಂ ವಿರೋದಿ ದ್ವೇಷ ಭಾಷಣದ ವಿರುದ್ಧ ಎಸ್‌ಐಟಿ ತನಿಖೆಗೆ ಕೋರಿ ನಿವೃತ್ತ ಪಟ್ನಾ ಹೈಕೋರ್ಟ್‌ ನ್ಯಾಯಮೂರ್ತಿ ಅಂಜನಾ ಪ್ರಕಾಶ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯಲ್ಲಿ ಮಧ್ಯಪ್ರವೇಶ ಕೋರಿ ಮೇಲಿನ ಅರ್ಜಿಯು ಸಲ್ಲಿಕೆಯಾಗಿದೆ. ಮುಸ್ಲಿಂ ನಾಯಕರಾದ ಅಸಾದುದ್ದೀನ್ ಓವೈಸಿ, ತೌಕೀರ್ ರಾಝಾ ಮುಂತಾದವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಹೆಚ್ಚಿನ ಮಾಹಿತಿಗೆ 'ಬಾರ್‌ ಅಂಡ್‌ ಬೆಂಚ್‌' ಆಂಗ್ಲ ತಾಣದ ಲಿಂಕ್‌ ಕ್ಲಿಕ್ಕಿಸಿ.

Related Stories

No stories found.