ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

ವಿಚಾರಣೆ ಮುಂದೂಡುತ್ತಿರುವುದು ಇದು 11ನೇ ಬಾರಿ. ಭಾಗಶಃ ಆಲಿಸಿದ್ದ ಪ್ರಕರಣಗಳ ವಿಚಾರಣೆ ನಡೆಸಬೇಕಿರುವುದರಿಂದ ಅರ್ಜಿಯನ್ನು ಜ.31ರಂದು ಆಲಿಸುವುದಾಗಿ ದ್ವಿಸದಸ್ಯ ಪೀಠ ತಿಳಿಸಿತು.
ಉಮರ್ ಖಾಲಿದ್ ಮತ್ತು ಸುಪ್ರೀಂ ಕೋರ್ಟ್
ಉಮರ್ ಖಾಲಿದ್ ಮತ್ತು ಸುಪ್ರೀಂ ಕೋರ್ಟ್

ದೆಹಲಿ ಗಲಭೆ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಮತ್ತೆ ಮುಂದೂಡಿದೆ.

ಭಾಗಶಃ ಆಲಿಸಿದ್ದ ಪ್ರಕರಣಗಳ ವಿಚಾರಣೆ ನಡೆಸಬೇಕಿರುವುದರಿಂದ ಅರ್ಜಿಯನ್ನು ಜ. 31ರಂದು ಮನವಿ ಆಲಿಸುವುದಾಗಿ ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿತ್ತಲ್‌ ಅವರಿದ್ದ ಪೀಠ ತಿಳಿಸಿತು.

"ನಾವು ಸಿದ್ಧ. ದುರದೃಷ್ಟವಶಾತ್‌ ಪೀಠಕ್ಕೆ ಊಟದ ವಿರಾಮ ಇದೆ. ಇದು ಜಾಮೀನು ಅರ್ಜಿ ಎಂದು ಹಿರಿಯ ವಕೀಲ ಸಿ ಯು ಸಿಂಗ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ "31ನೇ ತಾರೀಕಿನಂದು ಪಟ್ಟಿ ಮಾಡಿ" ಎಂದು ಆದೇಶಿಸಿತು.

ಪ್ರಕರಣದ ವಿಚಾರಣೆ ಮುಂದೂಡುತ್ತಿರುವುದು ಇದು ಹನ್ನೊಂದನೇ ಬಾರಿ. ವಿಶೇಷವೆಂದರೆ, ಜನವರಿ 10ರಂದು, ಎರಡೂ ಪಕ್ಷಗಳು ವಿನಂತಿಸಿದ ಕಾರಣ ನ್ಯಾಯಾಲಯ ಕಡೆಯ ಮುಂದೂಡಿಕೆ ಮಾಡಿತ್ತು. ಖಾಲಿದ್ ಅವರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಬೇರೊಂದು ಪ್ರಕರಣದಲ್ಲಿ ವಾದಿಸಬೇಕೆಂದು ತಿಳಿಸಿದ್ದರಿಂದ ಪ್ರಕರಣ ಮುಂದೂಡಲು ಸಿದ್ಧರಿಲ್ಲ ಎಂದು ತಿಳಿಸಿ ಜ. 17ರಂದು ಆಲಿಸಲು ಮುಂದಾಗಿತ್ತು.

ವಿಶೇಷವೆಂದರೆ, ಜನವರಿ 10ರಂದು, ಎರಡೂ ಪಕ್ಷಗಳು ವಿನಂತಿಸಿದ ಕಾರಣ ನ್ಯಾಯಾಲಯವು ಈ ವಿಷಯದಲ್ಲಿ 'ಅಂತಿಮ' ಮುಂದೂಡಿಕೆಯನ್ನು ನೀಡಿತ್ತು. ಖಾಲಿದ್ ಅವರನ್ನು ಪ್ರತಿನಿಧಿಸುವ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಮತ್ತೊಂದು ಪ್ರಕರಣದಲ್ಲಿ ಸಾಂವಿಧಾನಿಕ ಪೀಠದ ಮುಂದೆ ತೊಡಗಿಸಿಕೊಳ್ಳುವುದಾಗಿ ನ್ಯಾಯಾಲಯಕ್ಕೆ ತಿಳಿಸಿದಾಗ ನ್ಯಾಯಾಲಯವು ಈ ವಿಷಯವನ್ನು ಮುಂದೂಡಲು ಸಿದ್ಧವಿರಲಿಲ್ಲ ಮತ್ತು ಅದನ್ನು ಜನವರಿ 17 ಕ್ಕೆ ಪಟ್ಟಿ ಮಾಡಲು ಸಿದ್ಧವಾಗಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಮಿತ್ತಲ್, ವಕೀಲರು ವಿಚಾರಣೆ ಮುಂದೂಡಲು ಬಯಸುತ್ತಿದ್ದು ನ್ಯಾಯಾಲಯ ಪ್ರಕರಣ ಆಲಿಸಲು ಸಿದ್ಧವಿಲ್ಲ ಎಂಬ ಭಾವನೆ ಮೂಡಬಾರದು ಎಂದಿದ್ದರು.

ನಂತರ ಜನವರಿ 24ಕ್ಕೆ (ಇಂದಿಗೆ) ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು. ಇದೀಗ ಮತ್ತೆ ಜನವರಿ 31ಕ್ಕೆ ಮುಂದೂಡಲಾಗಿದೆ.

ಇದಕ್ಕೂ ಮೊದಲು, 2023ರ ನವೆಂಬರ್‌ನಲ್ಲಿ ನ್ಯಾಯಾಲಯ ಎರಡೂ ಕಡೆಯ ವಕೀಲರು ಲಭ್ಯವಿಲ್ಲದ ಕಾರಣ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದೂಡಿತ್ತು .

ದೆಹಲಿ ಗಲಭೆಯ ಭಾರೀ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ನಿರಾಕರಿಸಿ ದೆಹಲಿ ಹೈಕೋರ್ಟ್ ಅಕ್ಟೋಬರ್ 2022ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಖಾಲಿದ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಉಮರ್‌ ಖಾಲಿದ್‌ ವಿರುದ್ಧ ದೆಹಲಿ ಪೊಲೀಸರು ಗಲಭೆ, ಗಲಭೆಗೆ ಕ್ರಿಮಿನಲ್‌ ಸಂಚು ರೂಪಿಸಿದ ಆರೋಪಗಳಷ್ಟದೇ ಅಲ್ಲದೆ, ಕಾನೂನುಬಾಹಿರ ಚಟುವಟಿಕೆಗಳ (ನಿಯಂತ್ರಣ) ಕಾಯಿದೆ ಅಡಿ ಅನೇಕ ಇತರ ಅಪರಾಧಗಳನ್ನು ಎಸಗಿರುವ ಆರೋಪ ಮಾಡಿದ್ದು, ಪ್ರಕರಣ ದಾಖಲಿಸಿದ್ದಾರೆ. ಖಾಲಿದ್‌, ಸೆಪ್ಟೆಂಬರ್‌ 2020ರಿಂದ ಜೈಲಿನಲ್ಲಿದ್ದಾರೆ.

Related Stories

No stories found.
Kannada Bar & Bench
kannada.barandbench.com