ಕೆಲಸದಿಂದ ತೆಗೆಯಲ್ಪಟ್ಟ ತಾತ್ಕಾಲಿಕ ಉದ್ಯೋಗಿಗಳಿಗೆ ಪರಿಹಾರ ನೀಡಲು ಟಾಟಾ ಮೋಟಾರ್ಸ್‌ಗೆ ಆದೇಶಿಸಿದ ಬಾಂಬೆ ಹೈಕೋರ್ಟ್‌

ಕೆಲಸದಿಂದ ತೆಗೆಯಲ್ಪಟ್ಟ ತಾತ್ಕಾಲಿಕ ಉದ್ಯೋಗಿಗಳಿಗೆ ಪರಿಹಾರ ನೀಡಲು ಟಾಟಾ ಮೋಟಾರ್ಸ್‌ಗೆ ಆದೇಶಿಸಿದ ಬಾಂಬೆ ಹೈಕೋರ್ಟ್‌

Bombay High Court and Tata Motors

ಯೋಜಿತವಾಗಿ ಕೆಲಸದಿಂದ ತೆಗೆದು ಹಾಕಲ್ಪಟ್ಟ 52 ತಾತ್ಕಾಲಿಕ ಉದ್ಯೋಗಿಗಳ ವಿರುದ್ಧ ಟಾಟಾ ಮೋಟಾರ್ಸ್‌ ಅನುಸರಿಸಿರುವ ಕ್ರಮ ಅನ್ಯಾಯಯುತವಾದುದು ಎಂದು ಇತ್ತೀಚೆಗೆ ಅಭಿಪ್ರಾಯಪಟ್ಟ ಬಾಂಬೆ ಹೈಕೋರ್ಟ್‌ ಆ ನೌಕರರಿಗೆ ಪರಿಹಾರ ನೀಡಲು ಕಂಪೆನಿಗೆ ಸೂಚಿಸಿದೆ. 240 ದಿನಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಉದ್ಯೋಗ ಮಾಡಿದವರನ್ನು ಖಾಯಂ ಉದ್ಯೋಗಿ ಎಂದು ಪರಿಗಣಿಸುವ ಮಾನದಂಡ ಇರುವುದರಿಂದ ಖಾಯಂ ಉದ್ಯೋಗಿಗಳು ಎಂದು ಪರಿಗಣಿಸದೇ ಇರಲು ಅವರನ್ನು ಬಹುತೇಕವಾಗಿ 230 ರಿಂದ 238 ದಿನಗಳ ಅವಧಿಯಲ್ಲಿ ವಜಾಗೊಳಿಸಲಾಗಿತ್ತು ಎಂದು ನ್ಯಾಯಮೂರ್ತಿ ಆರ್ ವಿ ಘುಗೆ ಅಭಿಪ್ರಾಯಪಟ್ಟರು.

240 ದಿನಗಳ ಅಗತ್ಯವನ್ನು ಈ ಕಾರ್ಮಿಕರು ತಲುಪದೇ ಇರುವುದರಿಂದ ಅವರಿಗೆ ಖಾಯಮಾತಿ ನೀಡಲಾಗದು ಎಂದು ಟಾಟಾ ಮೋಟಾರ್ಸ್‌ ವಾದಿಸಿತ್ತು. ತಮ್ಮನ್ನು ಖಾಯಂ ಮಾಡಿಕೊಳ್ಳದಿರಲೆಂದೇ ಕೆಲಸ ಮುಂದುವರೆಸುತ್ತಿರಲಿಲ್ಲ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ರೂ. 25 ಸಾವಿರದಿಂದ ರೂ. 75 ಸಾವಿರದವರೆಗೆ ಕಾರ್ಮಿಕರ ನಿರ್ವಹಿಸಿದ ಕೆಲಸದ ದಿನಗಳನ್ನು ಪರಿಗಣಿಸಿ ಪರಿಹಾರವನ್ನು 2 ತಿಂಗಳೊಳಗೆ ನೀಡುವಂತೆ ನ್ಯಾಯಾಲಯ ಸೂಚಿಸಿತು.

ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್‌ ಗಮನಿಸಿ.

Related Stories

No stories found.