ಯುವ ಜಾಗೃತಿಗಾಗಿ ʼ#MyKanoonʼ ಅಭಿಯಾನ ಆರಂಭಿಸಿದ ʼವಿಧಿʼ

ಆನ್‌ಲೈನ್ ಹಿಂಸಾಚಾರ, ಬೆದರಿಕೆ, ಕಿರುಕುಳ, ಮಕ್ಕಳ ಲೈಂಗಿಕ ದೌರ್ಜನ್ಯ ಹಾಗೂ ಕಾನೂನಾತ್ಮಕ ಸಂಘರ್ಷದಲ್ಲಿರುವ ಮಕ್ಕಳಿಂದ ಹಿಡಿದು ಯುವಜನರವರೆಗೆ ಜಾಗೃತಿ ಮೂಡಿಸುವ ಉದ್ದೇಶ ಈ ಅಭಿಯಾನದ್ದು.
VIDHI centre for legal policy

VIDHI centre for legal policy

ಆನ್‌ಲೈನ್ ಹಿಂಸೆ, ಬೆದರಿಕೆ, ಕಿರುಕುಳ ಹಾಗೂ ಮಕ್ಕಳ ಲೈಂಗಿಕ ದೌರ್ಜನ್ಯದಂತಹ ಸಮಸ್ಯೆಗಳ ಕುರಿತು ಯುವಜನರಲ್ಲಿ ಕಾನೂನು ಮಾಹಿತಿ ಪಸರಿಸುವ ಉದ್ದೇಶದಿಂದ ʼವಿಧಿʼ ಸೆಂಟರ್‌ ಫಾರ್‌ ಲೀಗಲ್‌ ಪಾಲಿಸಿಯ 'ನ್ಯಾಯ' ಉಪಕ್ರಮವು ಮೈಕಾನೂನ್‌ #MyKanoon ಹೆಸರಿನ ಆಂದೋಲನವನ್ನು ‘We The Young’ ಇನ್‌ಸ್ಟಾಗ್ರಾಂ ಆನ್‌ಲೈನ್‌ ವೇದಿಕೆಯ ಸಹಯೋಗದೊಂದಿಗೆ ನಡೆಸುತ್ತಿದೆ.

ಯುವಜನರಿಗೆ ಕಾನೂನು ನೆರವು ಅಗತ್ಯವಿದ್ದಾಗ ಅವರಿಗೆ ಮಾಹಿತಿ ಕೊರತೆ ಮತ್ತು ಜಾಗೃತಿಯ ಕೊರತೆಯು ಅಡ್ಡಿಯಾಗುತ್ತದೆ ಎನ್ನುವುದು ಈ ಅಭಿಯಾನಕ್ಕೆ ಮೂಲ ಪ್ರೇರಣೆ. ಇತ್ತೀಚಿನ ದಿನಗಳಲ್ಲಿ ನ್ಯಾಯಿಕ ವ್ಯವಸ್ಥೆಯೊಂದಿಗೆ ಯುವಜನರ ಸಂವಹನ ಹೆಚ್ಚುತ್ತಿದೆ ಎಂಬುದನ್ನು ದತ್ತಾಂಶಗಳು ಸೂಚಿಸುತ್ತವೆ. ಅಂತಹವರು ಆನ್‌ಲೈನ್‌ ಹಿಂಸಾಚಾರ ಮತ್ತು ಕಿರುಕಳ ಸಮಸ್ಯೆ ಬಗಗೆ ಜಾಗೃತರಾಗಿದ್ದು ಯಾರಿಗೆ ಮುಕ್ತವಾಗಿ ಕಾನೂನು ಮಾಹಿತಿಯು ಲಭ್ಯವಿರುವುದಿಲ್ಲವೋ ಅಂತಹವರನ್ನು ಸಬಲೀಕರಣಗೊಳಿಸಲು ಅವರು ಸಿದ್ಧರಿರುತ್ತಾರೆ.

Also Read
ಮೈಸೂರಿನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ: ತಮಿಳುನಾಡಿನಲ್ಲಿ ಬಾಲಾಪರಾಧಿ ಸೇರಿದಂತೆ ಐವರ ಬಂಧನ

ʼನ್ಯಾಯʼ (Nyaaya) ಎಂಬುದು ಮುಕ್ತವಾಗಿ ದೊರೆಯುವ ಡಿಜಿಟಲ್‌ ಸಂಪನ್ಮೂಲವಾಗಿದ್ದು ಭಾರತೀಯರಿಗೆ ಸರಳ, ಕಾರ್ಯಸಾಧ್ಯವಾದ, ಮರುಕಳಿಸಲು ಸುಲಭವಾದ ಮತ್ತು ಅಧಿಕೃತ ಕಾನೂನು ಮಾಹಿತಿಯನ್ನು ಒದಗಿಸುತ್ತದೆ. ಇದು ದೈನಂದಿನ ಕಾನೂನು ಸಮಸ್ಯೆಗಳನ್ನು ಪರಿಹರಿಸಲು ಅವರಿಗೆ ಸಹಾಯ ಮಾಡಲಿದ್ದು ಅವರ ಹಕ್ಕುಗಳ ಬಗ್ಗೆ ಅವರಿಗೆ ಅರಿವು ಮೂಡಿಸುತ್ತದೆ ಮತ್ತು ನ್ಯಾಯ ಪಡೆಯುವ ಸಬಲೀಕರಣದ ಅನುಭವವನ್ನು ಒದಗಿಸುತ್ತದೆ. 'ನ್ಯಾಯ'ವು ರೋಹಿಣಿ ನಿಲೇಕಣಿ ಅವರ ಕಲ್ಪನೆಯ ಕೂಸಾಗಿದ್ದು ಇದು ʼವಿಧಿʼ ಕೇಂದ್ರದಲ್ಲಿ ರೂಪಿತವಾಗಿದೆ.

ಅಭಿಯಾನದ ಅನೇಕ ಸಂಗತಿಗಳನ್ನು 'ಬಾರ್‌ ಅಂಡ್‌ ಬೆಂಚ್‌' ಜೊತೆಗೆ ನ್ಯಾಯ ತಂಡದ ಮುಖ್ಯಸ್ಥೆ ಅನಿಶಾ ಗೋಪಿ ಹಂಚಿಕೊಂಡಿದ್ದಾರೆ. ಮೈ ಕಾನೂನ್‌ ಅಭಿಯಾನ 3 ತಿಂಗಳುಗಳವರೆಗೆ ಇರಲಿದ್ದು ಯುವ ಕಂಟೆಂಟ್‌ (ಮಾಹಿತಿ) ರಚನೆಕಾರರು ರೂಪಿಸಿದ ವೀಡಿಯೊಗಳು, ಇನ್ಫೋಗ್ರಾಫಿಕ್ಸ್, ಕಾರ್ಟೂನ್‌, ಕಾಮಿಕ್ಸ್ ಹಾಗೂ ರೀಲ್‌ಗಳ ರೂಪದಲ್ಲಿ 50ಕ್ಕೂ ಹೆಚ್ಚು ಸಣ್ಣ ಮತ್ತು ದೀರ್ಘ ಕಂಟೆಂಟ್‌ ತುಣುಕುಗಳು ʼನ್ಯಾಯʼದ ಇನ್‌ಸ್ಟಾಗ್ರಾಂ ಪುಟದಲ್ಲಿ ಲಭ್ಯವಾಗಲಿವೆ. ಆನ್‌ಲೈನ್ ಹಿಂಸಾಚಾರ, ಬೆದರಿಕೆ, ಕಿರುಕುಳ, ಮಕ್ಕಳ ಲೈಂಗಿಕ ದೌರ್ಜನ್ಯ ಹಾಗೂ ಕಾನೂನಾತ್ಮಕ ಸಂಘರ್ಷದಲ್ಲಿರುವ ಮಕ್ಕಳಿಂದ ಹಿಡಿದು ಯುವಜನರವರೆಗೆ ಜಾಗೃತಿ ಮೂಡಿಸುವ ವಿವಿಧ ವಿಚಾರಗಳನ್ನು ಇಲ್ಲಿ ಕಾಣಬಹುದು ಎಂದು ಅವರು ಹೇಳಿದ್ದಾರೆ.

ʼನ್ಯಾಯʼ ಸಂಶೋಧನೆ ಮತ್ತು ಜ್ಞಾನದ ನೆರವು ಒದಗಿಸಿದರೆ 'ವೀ ದಿ ಯಂಗ್' ವೀಡಿಯೊ ಕಂಟೆಂಟ್‌ ರೂಪಿಸಲು ಕಂಟೆಂಟ್‌ ಸೃಷ್ಟಿಕರ್ತರೊಂದಿಗೆ ಕೆಲಸ ಮಾಡುತ್ತದೆ.ಅಭಿಯಾನದ ಕಂಟೆಂಟ್‌ @wetheyoungindia ಮತ್ತು @nyaayaorgನ ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಪ್ರಸರಣವಾಗಲಿದೆ.

Related Stories

No stories found.
Kannada Bar & Bench
kannada.barandbench.com